2022ರ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆ: ಈ ರಾಜ್ಯಗಳಲ್ಲಿ ಗರಿಷ್ಠ ಕೋವಿಡ್ ಲಸಿಕೆಗಳನ್ನು ನೀಡುವಂತೆ ಸೂಚಿಸಿದ ಚುನಾವಣಾ ಆಯೋಗ

ನವದೆಹಲಿ: ಚುನಾವಣೆಗೆ ಒಳಪಡುವ ಐದು ರಾಜ್ಯಗಳಲ್ಲಿ ಕೋವಿಡ್-19 ಲಸಿಕೆಯನ್ನು ಪೂರ್ಣಗೊಳಿಸುವಂತೆ ಭಾರತದ ಚುನಾವಣಾ ಆಯೋಗವು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ. ಐದು ಚುನಾವಣಾ ರಾಜ್ಯಗಳಲ್ಲಿ ವ್ಯಾಕ್ಸಿನೇಷನ್ ಸ್ಥಿತಿಯ ಬಗ್ಗೆ, ವಿಶೇಷವಾಗಿ ಮೊದಲ ಡೋಸ್ ಬಗ್ಗೆ ಆರೋಗ್ಯ ಸಚಿವಾಲಯದಿಂದ ಚುನಾವಣಾ ಆಯೋಗ ಮಾಹಿತಿ ಕೇಳಿದೆ ಎಂದು ಮೂಲಗಳು ತಿಳಿಸಿವೆ ಎಂದು ರಿಪಬ್ಲಿಕ್‌ ಟಿವಿ ವರದಿ ಮಾಡಿದೆ.
ಪ್ರತಿಕ್ರಿಯೆಯಾಗಿ, ಆರೋಗ್ಯ ಸಚಿವಾಲಯವು ಕೋವಿಡ್‌-19 ಇನಾಕ್ಯುಲೇಷನ್ ಡ್ರೈವ್‌ನ ವಿವರಗಳನ್ನು ತಿಳಿಸಿದೆ. “ಸುಮಾರು 100% ಮೊದಲ ಡೋಸ್ ಉತ್ತರಾಖಂಡ ಮತ್ತು ಗೋವಾದಲ್ಲಿ ವರದಿಯಾಗಿದೆ, 85% ಮೊದಲ ಡೋಸ್ ಉತ್ತರ ಪ್ರದೇಶದಲ್ಲಿ ಮತ್ತು ಮಣಿಪುರ ಮತ್ತು ಪಂಜಾಬ್‌ನಲ್ಲಿ ಮೊದಲ ಡೋಸ್ ಪಡೆದವರು 80% ಕ್ಕಿಂತ ಕಡಿಮೆ ಇದ್ದಾರೆ ಎಂದು ಅದು ಹೇಳಿದೆ.
ಉತ್ತರ ಪ್ರದೇಶ, ಮಣಿಪುರ ಮತ್ತು ಪಂಜಾಬ್‌ನಲ್ಲಿ ಲಸಿಕೆಯನ್ನು ವೇಗಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೋವಿಡ್-19 ಹರಡುವಿಕೆ ಮತ್ತು ಅದರ ಓಮಿಕ್ರಾನ್ ರೂಪಾಂತರವನ್ನು ನಿಯಂತ್ರಿಸಲು ಗರಿಷ್ಠ ವ್ಯಾಕ್ಸಿನೇಷನ್ ಮಾಡಲು ಚುನಾವಣೆಗೆ ಒಳಪಡುವ ರಾಜ್ಯಗಳಿಗೆ ಚುನಾವಣಾ ಆಯೋಗವು ನಿರ್ದೇಶನ ನೀಡಿದೆ.
ಚುನಾವಣಾ ಆಯೋಗವು ಸೋಮವಾರ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರನ್ನು ಭೇಟಿ ಮಾಡಿತು ಮತ್ತು ಲಸಿಕೆ ಸ್ಥಿತಿಯೊಂದಿಗೆ ಕೋವಿಡ್‌-19 ಪ್ರಕರಣಗಳ ಉಲ್ಬಣದ ಬಗ್ಗೆ ಚರ್ಚಿಸಿತು. ಚುನಾವಣಾ ಆಯೋಗ ಮತ್ತು ಆರೋಗ್ಯ ಸಚಿವಾಲಯವು ಮುಂದಿನ ವರ್ಷದ ಜನವರಿಯಲ್ಲಿ ಇದೇ ರೀತಿಯ ಸಭೆಗಳನ್ನು ನಡೆಸಲಿದೆ.
ಉತ್ತರಾಖಂಡ, ಉತ್ತರ ಪ್ರದೇಶ, ಗೋವಾ, ಮಣಿಪುರ ಮತ್ತು ಪಂಜಾಬ್ ಸೇರಿದಂತೆ ಐದು ರಾಜ್ಯಗಳಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.
ದೇಶದಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳ ಮಧ್ಯೆ, ಅಲಹಾಬಾದ್ ಹೈಕೋರ್ಟ್ ಗುರುವಾರ ಉತ್ತರ ಪ್ರದೇಶದಲ್ಲಿ ಚುನಾವಣೆಯನ್ನು 1-2 ತಿಂಗಳ ಕಾಲ ಮುಂದೂಡುವಂತೆ ಚುನಾವಣಾ ಆಯೋಗವನ್ನು ಕೇಳಿದೆ. ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಸಮಾವೇಶಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಿಷೇಧಿಸುವಂತೆ ಅದು ಪ್ರಧಾನಿ ನರೇಂದ್ರ ಮೋದಿ ಮತ್ತು ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
ಇತ್ತೀಚಿನ ಕೇಂದ್ರ ಆರೋಗ್ಯ ಸಚಿವಾಲಯದ ಅಪ್‌ಡೇಟ್ ಪ್ರಕಾರ, ಭಾರತವು 578 ವೇರಿಯಂಟ್ ಆಫ್ ಕನ್ಸರ್ನ್ (VoC) ಒಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿದೆ. ಚುನಾವಣೆಗೆ ಒಳಪಡುವ ರಾಜ್ಯಗಳಲ್ಲಿ, ಉತ್ತರ ಪ್ರದೇಶದಲ್ಲಿ ಎರಡು ಮತ್ತು ಗೋವಾ ಮತ್ತು ಉತ್ತರಾಖಂಡದಲ್ಲಿ ಕ್ರಮವಾಗಿ ತಲಾ ಒಂದು ಪ್ರಕರಣಗಳಿವೆ.
ಮುಂಬರುವ ರಾಜ್ಯ ಚುನಾವಣೆಗಳಲ್ಲಿ ಕೋವಿಡ್ ಪ್ರೋಟೋಕಾಲ್‌ಗಳ ಜಾರಿ ಮತ್ತು ಅನುಸರಣೆಗಾಗಿ ಕಟ್ಟುನಿಟ್ಟಾದ ಮಾರ್ಗಸೂಚಿಗಳು, ನೀತಿಗಳು ಮತ್ತು ನಿರ್ದೇಶನಗಳನ್ನು ನೀಡಲು ಚುನಾವಣಾ ಆಯೋಗಕ್ಕೆ ನಿರ್ದೇಶನಗಳನ್ನು ನೀಡುವಂತೆ ಕೋರಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ.

ಪ್ರಮುಖ ಸುದ್ದಿ :-   ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ; ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಆರ್‌ಜೆಡಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement