ಕನ್ನಡ ಚಲನಚಿತ್ರ ತಾರೆ ಶುಭಾ ಪೂಂಜಾ ಅವರು ಸುಮಂತ್ ಮಹಾಬಲ ಅವರನ್ನು ವಿವಾಹವಾಗಿದ್ದಾರೆ. ಮಂಗಳೂರಿನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಅವರ ಕುಟುಂಬ ಸದಸ್ಯರು ಮತ್ತು ಆಪ್ತರು ಭಾಗವಹಿಸಿದ್ದರು.
ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ತಮ್ಮ ಮದುವೆ ಸುದ್ದಿಯನ್ನು ಹಂಚಿಕೊಂಡಿರುವ ಶುಭಾ ಪೂಂಜಾ ಇಂದು ಸುಮಂತ್ ಅವರನ್ನು ಸರಳವಾಗಿ ವಿವಾಹವಾಗಿರುವುದಾಗಿ ಬರೆದಿದ್ದಾರೆ.
ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾಗದ್ದೇವೆ. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ. ಪ್ರೀತಿಯ ಎಲ್ಲರಿಗೂ ನಮಸ್ಕಾರಗಳು ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿರುವ ಶುಭಾ ಪೂಂಜಾ ಮದುವೆಯ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಶುಭಾ ಪೂಂಜಾ ಅವರ ಸಹ-ಸ್ಪರ್ಧಿ ಮಂಜು ಪಾವಗಡ ಮದುವೆಯಲ್ಲಿ ಪಾಲ್ಗೊಂಡಿದ್ದರು.
ಹಲವು ವರ್ಷಗಳಿಂದ ಸಮಾಜ ಸೇವಕ ಸುಮಂತ್ ಅವರನ್ನು ಪ್ರೀತಿಸುತ್ತಿದ್ದ ಶುಭಾ, 2021 ಡಿಸೆಂಬರ್ ಅಥವಾ 2022ರ ಜನವರಿ ಮೊದಲ ವಾರದಲ್ಲಿ ಮದುವೆ ಆಗುವುದಾಗಿ ಹೇಳಿಕೊಂಡಿದ್ದರು. ಸುಮಂತ್ ಅವರು ಉಡುಪಿಯಲ್ಲಿರುವುದು ಹಾಗೂ ನನ್ನ ಕುಟುಂಬಸ್ಥರು ಮಂಗಳೂರಿನಲ್ಲಿರುವ ಕಾರಣ ನಾವು ಅಲ್ಲಿಯೇ ಮದುವೆ ಆಗುತ್ತೇವೆ ಈ ಹಿಂದೆ ಶುಭಾ ಹೇಳಿದ್ದರು. ಅದರಂತೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಶುಭಾ, ಸುಮಂತ್ ದೀರ್ಘಕಾಲದ ಸ್ನೇಹಿತರು. ಅ
ನಿಮ್ಮ ಕಾಮೆಂಟ್ ಬರೆಯಿರಿ