ಪ್ರಧಾನಿ ಮೋದಿ ವಾಪಸ್‌ ಹೋಗುವಂತಾಗಿದ್ದಕ್ಕೆ ವಿಷಾದಿಸುತ್ತೇನೆ, ಆದರೆ ಯಾವುದೇ ಭದ್ರತಾ ಲೋಪವಾಗಿಲ್ಲ: ಪಂಜಾಬ್ ಸಿಎಂ ಚನ್ನಿ

ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ಅವರ ಕಾರು ಸುಮಾರು 20 ನಿಮಿಷಗಳ ಕಾಲ ರಾಜ್ಯದ ಫ್ಲೈಓವರ್ ಮೇಲೆ ಸಿಲುಕಿಕೊಂಡಿದ್ದು ಮತ್ತು ಫಿರೋಜ್‌ಪುರದಲ್ಲಿ ಅವರ ನಿಗದಿತ ಸಮಾವೇಶ ರದ್ದುಗೊಳಿಸಿರುವುದಕ್ಕೆ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಬುಧವಾರ ವಿಷಾದ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿಯವರು ಬುಧವಾರ ಫಿರೋಜ್‌ಪುರ ಜಿಲ್ಲೆಗೆ ಭೇಟಿ ನೀಡಿದಾಗ ಮಾರ್ಗದಲ್ಲಿನ ಅಡೆತಡೆಗಳಿಂದ ಹಿಂತಿರುಗಬೇಕಾಯಿತು ಎಂದು ನಾನು ವಿಷಾದ ವ್ಯಕ್ತಪಡಿಸುತ್ತೇನೆ. ನಾವು ನಮ್ಮ ಪ್ರಧಾನಿಯನ್ನು ಗೌರವಿಸುತ್ತೇವೆ” ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬಟಿಂಡಾದಲ್ಲಿ ಪ್ರಧಾನಿಯನ್ನು ಏಕೆ ಬರಮಾಡಿಕೊಳ್ಳಲಿಲ್ಲ ಎಂಬುದಕ್ಕೆ ಕಾರಣ ನೀಡಿದ ಅವರು, ನಾನು ಪ್ರಧಾನ ಮಂತ್ರಿಯನ್ನು ಬಟಿಂಡಾದಲ್ಲಿ ಬರಮಾಡಿಕೊಳ್ಳಬೇಕಾಗಿತ್ತು ಆದರೆ ನನ್ನೊಂದಿಗೆ ಬರಬೇಕಾಗಿದ್ದವರಿಗೆ ಕೋವಿಡ್ ಸೋಂಕಿಗೆ ಒಳಗಾದರು.. ಆದ್ದರಿಂದ, ಧನಾತ್ಮಕ ಪರೀಕ್ಷೆ ಮಾಡಿದ ಕೆಲವರೊಂದಿಗೆ ನಾನು ನಿಕಟ ಸಂಪರ್ಕದಲ್ಲಿದ್ದ ಕಾರಣ ಪ್ರಧಾನಿಯನ್ನು ಬರಮಾಡಿಕೊಳ್ಳಲು ಹೋಗಲಿಲ್ಲ ಎಂದು ತಿಳಿಸಿದರು.
ಪ್ರತಿಕೂಲ ಹವಾಮಾನ ಹಾಗೂ ರೈತರ ಪ್ರತಿಭಟನೆಯಿಂದಾಗಿ ತಮ್ಮ ಭೇಟಿಯನ್ನು ರದ್ದುಗೊಳಿಸುವಂತೆ ಪ್ರಧಾನಿ ಕಾರ್ಯಾಲಯಕ್ಕೆ ಮನವಿ ಮಾಡಿದ್ದೇವೆ ಎಂದು ಚನ್ನಿ ತಿಳಿಸಿದರು.
ಬಿಗಿಯಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅವರು ಸಮರ್ಥಿಸಿಕೊಂಡರು ಆದರೆ ಪ್ರಧಾನಿಯವರು ತಮ್ಮ ಆರಂಭಿಕ ಮಾರ್ಗದ ಭಾಗವಾಗಿರದ ಹುಸೇನಿವಾಲಾಗೆ ರಸ್ತೆ ಮಾರ್ಗವನ್ನು ತೆಗೆದುಕೊಳ್ಳಲು ನಿರ್ಧರಿಸಿದರು.ಇದು ಗೊಂದಲಕ್ಕೆ ಕಾರಣವಾಯಿತು ಎಂದು ಹೇಳಿದರು.
ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಮತ್ತು ಪ್ರತಿಭಟನೆಗಳಿಂದಾಗಿ ಭೇಟಿಯನ್ನು ನಿಲ್ಲಿಸುವಂತೆ ನಾವು ಅವರಿಗೆ (ಪಿಎಂಒ) ಕೇಳಿಕೊಂಡಿದ್ದೇವೆ. ಅವರ (ಪ್ರಧಾನಿ ಮೋದಿ) ಹಠಾತ್ ಮಾರ್ಗ ಬದಲಾವಣೆಯ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಪ್ರಧಾನಿ ಭೇಟಿಯ ಸಮಯದಲ್ಲಿ ಯಾವುದೇ ಭದ್ರತಾ ಲೋಪವಾಗಿಲ್ಲ. ಯಾವುದೇ ಭದ್ರತೆ ಲೋಪವಾಗಿದ್ದರೆ ನಾವು ತನಿಖೆ ನಡೆಸುತ್ತೇವೆ, ಪ್ರಧಾನಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಕೋವಿಡ್ ಲಸಿಕೆಗಳಿಗೂ ಹೃದಯಾಘಾತದ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ; ತಳ್ಳಿಹಾಕಿದ ಏಮ್ಸ್ ವೈದ್ಯರು

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement