ಪ್ರಯಾಣಿಕರ ಗಮನಕ್ಕೆ…ಕೆಎಸ್ಆರ್‌ಟಿಸಿಯಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ದೇಶಾದ್ಯಂತ ಕೊರೊನಾ ಪ್ರಕರಣಗಳು ಮತ್ತೆ ಭಾರೀ ಏರಿಕೆ ಕಾಣುತ್ತಿದ್ದು, ರಾಜ್ಯದಲ್ಲಿಯೂ ದಿಢೀರ್‌ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ದಿನವೊಂದಕ್ಕೆ ಹೊಸ ಪ್ರಕರಣಗಳು 4 ಸಾವಿರಕ್ಕೂ ಹೆಚ್ಚು ದಾಖಲಾಗುತ್ತಿದೆ. ಈಗ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಈ ಹಿನ್ನೆಲೆಯಲ್ಲಿ ಕೆ.ಎಸ್ಆರ್ಟಿಸಿ ಹೊಸ ಮಾರ್ಗಸೂಚಿ ((KSRTC New Guidelines) )ಪ್ರಕಟಿಸಿದೆ.

ಕೋವಿಡ್‌ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜನರ ಓಡಾಟಕ್ಕೆ ಕಡಿವಾಣ ಹಾಕಲು ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯ ಕರ್ಫ್ಯೂವನ್ನು ಜಾರಿಗೆ ತಂದಿದೆ. ಹೀಗಾಗಿ ಜನರ ಓಡಾಟವನ್ನು ನಿಯಂತ್ರಿಸಲು ನಿಯಮ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿ ಸಹ ಹೊಸ ಕೊರೋನಾ ಮಾರ್ಗಸೂಚಿ ಪ್ರಕಟಿಸಿದೆ. ವಾರಾಂತ್ಯ ದಿನದಂದು ಜನದಟ್ಟಣೆ ನೋಡಿಕೊಂಡು ಸಾರಿಗೆ ಸೇವೆ ಒದಗಿಸಲು ಸಂಸ್ಥೆ ನಿರ್ಧರಿಸಿದ್ದು, ಸಾಧ್ಯವಾದಷ್ಟು ಆನ್ ಲೈನ್ ಬುಕ್ಕಿಂಗ್‌ ಗಳಿಗೆ ಆದ್ಯತೆ ನೀಡುವಂತೆ ಪ್ರಯಾಣಿಕರಲ್ಲಿ ಮನವಿ ಮಾಡಿದೆ.
ಅಲ್ಲದೆ, ಆನ್ ಲೈನ್ ಬುಕ್ಕಿಂಗ್ ಆಧರಿಸಿಯೇ ರಾಜ್ಯದಲ್ಲಿ ಸಾರಿಗೆ ಸೇವೆ ಒದಗಿಸಲು ಸಂಸ್ಥೆ ನಿರ್ಧರಿಸಿದ್ದು ಅಗತ್ಯ ತಕ್ಕಂತೆ ಬಸ್ ಗಳನ್ನು ಓಡಿಸಲು ತೀರ್ಮಾನಿಸಿದೆ.

ಪ್ರಮುಖ ಸುದ್ದಿ :-   ಭಾರಿ ಮಳೆ : ಉತ್ತರ ಕನ್ನಡ ಜಿಲ್ಲೆ 4 ತಾಲೂಕುಗಳ ಶಾಲೆಗಳಿಗೆ ನಾಳೆ (ಜುಲೈ 4)ರಜೆ ಘೋಷಣೆ

ಹೊಸ ಮಾರ್ಗಸೂಚಿಗಳಲ್ಲಿ ಏನೇನಿದೆ..?

* ವಾರಾಂತ್ಯದಲ್ಲಿ ಜನಸಂಚಾರ ಗಮನಿಸಿಕೊಂಡು ಅಗತ್ಯಕ್ಕೆ ತಕ್ಕಂತೆ ಬಸ್ ಸೇವೆ ಒದಗಿಸುವುದು.

*ರಾತ್ರಿ ಬಸ್ ಸೇವೆಗಳಿಗೆ ಸಾಧ್ಯವಾದಷ್ಟು ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಅಳವಡಿಕೆ, ಬುಕ್ಕಿಂಗ್ ಆಧರಿಸಿ ಬಸ್ ಸೌಲಭ್ಯ ಒದಗಿಸುವುದು.

*ಮಹಾರಾಷ್ಟ್ರ, ಗೋವಾ, ಕೇರಳದಿಂದ ಬರುವ ಪ್ರಯಾಣಿಕರು ಕರ್ನಾಟಕಕ್ಕೆ ಬರುವ ಪ್ರಯಾಣಿಕರು ಎರಡು ಡೋಸ್ ಪಡೆಯದಿದ್ದರೂ, 72 ಗಂಟೆ ಮುಂಚಿತ ಆರ್ ಟಿ -ಪಿಎ-ಸಿಆರ್ ಟೆಸ್ಟ್ ನೆಗೆಟಿವ್‌ ವರದಿ ಹೊಂದಿರುವುದು ಕಡ್ಡಾಯ, ಈ ಬಗ್ಗೆ ಚಾಲನಾ ಸಿಬ್ಬಂದಿಗೆ ಸೂಕ್ತ ತಿಳಿವಳಿಕೆ ನೀಡಬೇಕು.

*ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡುವವರು ಹಾಗೂ ಬಸ್‌ ಸಿಬ್ಬಂದಿ ಮಾಸ್ಕ್ ಧರಿಸುವುದು ಕಡ್ಡಾಯ. ಅಲ್ಲದೆ ಪ್ರಯಾಣಿಕರಿಗೆ ಕೊವಿಡ್ ಮಾರ್ಗಸೂಚಿ ಪಾಲನೆ ಅಗತ್ಯವನ್ನು ಪಾಲಿಸುವಂತೆ ಸೂಚಿಸಲಾಗಿದೆ.

ಈ ಮೇಲಿನ ನಿಯಮಗಳನ್ನು ರೂಪಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಆದೇಶ ಹೊರಡಿಸಿದ್ದಾರೆ. ಕರ್ಫ್ಯೂ ಹಿನ್ನೆಲೆಯಲ್ಲಿ ಸಾರಿಗೆ ಸಂಚಾರವೂ ಕಡಿಮೆಯಾಗಲಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement