ಉದ್ಯಮಿ ಕುಟುಂಬದ ಭೀಕರ ಆತ್ಮಹತ್ಯೆ ಪ್ರಕರಣ; ತೆಲಂಗಾಣ ಆಡಳಿತ ಪಕ್ಷ ಟಿಆರ್​ಎಸ್ ಶಾಸಕನ ಪುತ್ರ ವನಮಾ ರಾಘವೇಂದ್ರ ಬಂಧನ

ತೆಲಂಗಾಣದ ಆಡಳಿತ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ (TRS) ಶಾಸಕ ವನಮಾ ವೆಂಕಟೇಶ್ವರ ರಾವ್​ ಅವರ ಪುತ್ರ ವನಮಾ ರಾಘವೇಂದ್ರ ರಾವ್ ಅವರನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
ಕೊತೆಗುಡಂ ಜಿಲ್ಲೆಯ ಖ್ಯಾತ ಉದ್ಯಮಿ ಮತ್ತು ಅವರ ಕುಟುಂಬದ ಮೂವರನ್ನು ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪದಡಿ ರಾಘವೇಂದ್ರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಶಾಸಕರು ಪರಾರಿಯಾಗಿದ್ದರು. ಶುಕ್ರವಾರ ರಾತ್ರಿ ರಾಘವೇಂದ್ರ ಅವರನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ಆರೋಪ ಹೊತ್ತಿದ್ದ ರಾಘವೇಂದ್ರ ರಾವ್​ರನ್ನು ಟಿಆರ್​ಎಸ್​ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಈಗಾಗಲೇ ಅಮಾನತು ಮಾಡಲಾಗಿದೆ.
ಜನವರಿ 3ರಂದು, ಕೊತೆಗುಡಂ ಜಿಲ್ಲೆಯ ಉದ್ಯಮಿ ರಾಮಕೃಷ್ಣ, ಅವರ ಪತ್ನಿ ಮತ್ತು ಅವಳಿ ಪುತ್ರಿಯರು ಪಾಲೋಂಚಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮೊದಲು ಉದ್ಯಮಿ ಒಂದು ಸೆಲ್ಫೀ ವಿಡಿಯೋ ಮಾಡಿ, ವನಮಾ ರಾಘವೇಂದ್ರ ರಾವ್​ ತನ್ನ ಪತ್ನಿಯ ವಿರುದ್ಧ ಮಾನಹಾನಿಯಾಗುವಂತಹ ಅವಹೇಳನಕಾರಿ ಮಾತುಗಳನ್ನು ಆಡಿದ್ದಾನೆ. ಈ ಅವಮಾನ ಸಹಿಸಲಾಗದೆ ಆತ್ಮಹತ್ಯೆ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಹೇಳಿದ್ದರು. ಅಷ್ಟೇ ಅಲ್ಲ, ನಮಗೆ ಕಿರುಕುಳ ನೀಡಿದ್ದರು ಎಂದು ಹೇಳಿದ್ದರು. ನನ್ನ ಮತ್ತು ಸೋದರಿಯ ನಡುವೆ ಆಸ್ತಿ ವಿವಾದ ಇತ್ತು. ಇದನ್ನು ರಾಘವೇಂದ್ರ ರಾವ್​ ದುರುಪಯೋಗಪಡಿಸಿಕೊಂಡಿದ್ದಾನೆ. ಸೋದರಿಯೊಂದಿಗೆ ಅನ್ಯೋನ್ಯವಾಗಿ ವರ್ತಿಸಿ ನಮಗೆ ಅನ್ಯಾಯವಾಗುವಂತೆ ಮಾಡಿದ್ದಾನೆ ಎಂದೂ ರಾಮಕೃಷ್ಣ ಹೇಳಿದ್ದರು. ರಾಮಕೃಷ್ಣ ಕುಟುಂಬ ಭಯಾನಕವಾಗಿ ಮೃತಪಟ್ಟಿತ್ತು. ಮನೆಯಲ್ಲಿದ್ದ ಗ್ಯಾಸ್​ ಸಿಲಿಂಡರ್​​ನ್ನು ತೆರೆದಿಟ್ಟು, ನಂತರ ಪೆಟ್ರೋಲ್​ ಸುರಿದು, ಬೆಂಕಿ ಹಚ್ಚಿಕೊಂಡು ಸತ್ತಿದ್ದರು. ಆದರೆ ರಾಮಕೃಷ್ಣರ ಕೊನೇ ಮಗಳಿಗೆ ಜೀವವಿತ್ತು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಪೊಲೀಸರು ಹೇಳಿಕೆ ಪಡೆದಿದ್ದಾರೆ. ವಿಡಿಯೋವನ್ನು ಪೊಲೀಸರು ಕೋರ್ಟ್​ಗೆ ಸಲ್ಲಿಸಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ..| ರಸ್ತೆಬದಿ ರೋಲ್‌ ಮಾರುವ 10 ವರ್ಷದ ಬಾಲಕನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ; ಸ್ಫೂರ್ತಿಯೂ ಹೌದು; ಸಹಾಯ ಮಾಡುವೆ ಎಂದ ಆನಂದ ಮಹೀಂದ್ರಾ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement