6 ಐಪಿಎಸ್ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರ ಆರು ಐಪಿಎಸ್ ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಈ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು, ಕಲಬುರ್ಗಿಯ ಡಿಐಜಿ ಮತ್ತು ಕಮೀಷನ್ ಆಫ್ ಪೊಲೀಸ್ ಆಗಿದ್ದ ಡಾ.ವೈ ಎಸ್ ರವಿಕುಮಾರ ಅವರನ್ನು ವರ್ಗಾವಣೆ ಮಾಡಿ ಡೈರೆಕ್ಟರೇಟ್ಸ್ ಆಫ್ ಸಿವಿಲ್ ರೈಟ್ಸ್ ನ ಡಿಜಿಪಿಯಾಗಿ ನೇಮಕ ಮಾಡಲಾಗಿದೆ.
ಸ್ಥಳ ನಿಯೋಜನೆ ನಿರೀಕ್ಷೆಯಲ್ಲಿದ್ದ ಡಾ.ದಿವ್ಯಾ ವಿ. ಗೋಪಿನಾಥ ಅವರನ್ನು ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರನ್ನಾಗಿ ನಿಯೋಜನೆ ಮಾಡಲಾಗಿದೆ.
ಇಂಟೆಲಿಜೆನ್ಸ್ ವಿಭಾಗದ ಎಸ್ಪಿಯಾಗಿದ್ದ ಚೇತನ ಆರ್ ಅವರನ್ನು ಕಲಬುರ್ಗಿ ನಗರದ ಪೊಲೀಸ್‌ ಕಮೀಷನರ್ ಆಗಿ ನೇಮಿಸಲಾಗಿದೆ. ಹಾವೇರಿ ಎಸ್ಪಿಯಾಗಿದ್ದ ಹನುಮಂತರಾಯ ಅವರನ್ನು ಇಂಟೆಲಿಜೆನ್ಸ್ ವಿಭಾಗದ ಸೂಪರಿಂಟಿಡೆಂಟ್ ಆಗಿ ನೇಮಕ ಮಾಡಲಾಗಿದೆ.
ಇಂಟೆಲಿಜೆನ್ಸ್ ಎಸ್ಪಿಯಾಗಿದ್ದ ನಾರಾಯಣ ಎಂ. ಅವರನ್ನು ಕೋಲಾರ ಜಿಲ್ಲಾ ಎಸ್‌ಪಿಯಾಗಿ ನೇಮಕ ಮಾಡಲಾಗಿದೆ. ಇಂಟೆಲಿಜೆನ್ಸ್ ಎಸ್ಪಿಯಾಗಿದ್ದ ಡಾ.ಶಿವಕುಮಾರ್ ಅವರನ್ನು ಹಾವೇರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement