ಚಾಮರಾಜನಗರ: ಲಘು ವಿಮಾನ ಪತನ; ಪೈಲಟ್‌ಗಳು ಪಾರು

ಚಾಮರಾಜನಗರ: ತಾಲೂಕಿನ ಭೋಗಾಪುರ ಸಮೀಪದ ಕೆ.ಮೂಕಹಳ್ಳಿಯಲ್ಲಿ ಬಳಿ ಕಿರಣ ಹೆಸರಿನ ಲಘು ವಿಮಾನ ಪತನವಾಗಿದ್ದು, ಪೈಲಟ್‌ಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಇಂದು, ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ವಿಮಾನ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.
ವಿಮಾನದಲ್ಲಿದ್ದ ಇಬ್ಬರು ಪೈಲಟ್ಟುಗಳು ಪ್ಯಾರಾಚೂಟ್‌ ಮೂಲಕ ಹಾರಿ ಪಾರಾಗಿದ್ದಾರೆ. ಒಬ್ಬರು ಮಹಿಳಾ ಪೈಲಟ್‌ ಕೂಡ ಇದ್ದರು ಎಂದು ತಿಳಿದುಬಂದಿದೆ. ಇದೊಂದು ಸೇನಾ ತರಬೇತಿ ವಿಮಾನ ಎನ್ನಲಾಗಿದೆ. ವಿಂಗ್ ಕಮಾಂಡರ್ ತೇಜಪಾಲ ಅವರು ಮಹಿಳಾ ಪೈಲಟ್‌ಗೆ ತರಬೇತಿ ನೀಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ತಾಂತ್ರಿಕ ಸಮಸ್ಯೆಯಿಂದ ವಿಮಾನ ಪತನವಾಗಿದೆ. ಈ ಘಟನೆಯು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ದೌಢಾಯಿಸಿದ್ದಾರೆ.
ಸಂಬಂಧಪಟ್ಟ ಸೇನೆಯ ಅಧಿಕಾರಿಗಳು, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿ ದೇವಿ ಹಾಗೂ ಹೆಚ್ಚುವರಿ ಎಸ್‌ಪಿ ಉದೇಶ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರು ಪೈಲಟ್‌ಗಳನ್ನು ಹೆಲಿಕಾಪ್ಟರ್‌ನಲ್ಲಿ ಬೆಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಿಮಾನ ಪತನಕ್ಕೆ ಕಾರಣಗಳನ್ನು ತಿಳಿಯಲು ತನಿಖೆ ನಡೆಸಲು ವಾಯು ಸೇನೆ ಸೂಚಿಸಿದೆ.
ಎರಡು ದಿನಗಳ ಹಿಂದೆ ಬೆಳಗಾವಿಯಲ್ಲಿ ತರಬೇತಿ ವಿಮಾನದಲ್ಲಿ ತಾಂತ್ರಿಕ ದೋಷ ತುರ್ತು ಭೂಸ್ಪರ್ಶ ಮಾಡಿತ್ತು. ಬೆಳಗಾವಿ ತಾಲೂಕಿನ ಹೊನ್ನಿಹಾಳ ಹಾಗೂ ಬಾಗೇವಾಡಿ ಮಾರ್ಗದ ಮಧ್ಯೆ ಇರುವ ಹೊಲದಲ್ಲಿ ಮಂಗಳವಾರ ಬೆಳಿಗ್ಗೆ ತರಬೇತಿ ವಿಮಾನವೊಂದು ಭೂಸ್ಪರ್ಶ ಮಾಡಿತ್ತು.

ಪ್ರಮುಖ ಸುದ್ದಿ :-   ಶಿರಸಿ: ಕೆಪಿಸಿಸಿ ಸದಸ್ಯ ದೀಪಕ ದೊಡ್ಡೂರು ನಿವಾಸದ ಮೇಲೆ ಐಟಿ ದಾಳಿ

 

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement