ಕರ್ನಾಟಕದಲ್ಲಿ ಭಾನುವಾರ 1,189 ಕೊರೊನಾ ಹೊಸ ಸೋಂಕು ದಾಖಲು

ಬೆಂಗಳೂರು: ಕರ್ನಾಟಕದಲ್ಲಿ ಭಾನುವಾರ 1,189 ಹೊಸ ಕೊರೊನಾ ಸೋಂಕು ದೃಢಪಟ್ಟಿವೆ. ಇದೇ ಸಮಯದಲ್ಲಿ 22 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. 1,456 ಜನರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29,38,616ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 37,145ಕ್ಕೆ ತಲುಪಿದೆ. ಒಟ್ಟು ಸಕ್ರಿಯ ಪ್ರಕರಣ ಸಂಖ್ಯೆ 20,556 ಇಳಿದಿದೆ.
ರಾಜಧಾನಿಯಲ್ಲಿ ರವಿವಾರದಂದು 267 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಒಟ್ಟು 12,35,036 ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 15,959 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು 12,11,314 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಬಾಗಲಕೋಟೆ 1, ಬೆಂಗಳೂರು ನಗರ 2, ಚಾಮರಾಜನಗರ 1, ಚಿಕ್ಕಮಗಳೂರು 1, ದಕ್ಷಿಣ ಕನ್ನಡ 4, ದಾವಣಗೆರೆ 1, ಧಾರವಾಡ 2, ಹಾಸನ 1, ಕೋಲಾರ 1, ಮಂಡ್ಯ 2, ಮೈಸೂರು 1, ತುಮಕೂರು 2, ಉಡುಪಿ 2, ವಿಜಯಪುರ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ರಾಜ್ಯದ ಬೆಂಗಳೂರು ನಗರ 267, ದಕ್ಷಿಣ ಕನ್ನಡ 286, ಮೈಸೂರು 79, ಉಡುಪಿ 132 ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕನಗಳು ವರದಿಯಾಗಿವೆ.

ಪ್ರಮುಖ ಸುದ್ದಿ :-   ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ಜಿಲ್ಲಾವಾರು ಮಾಹಿತಿಯನ್ನು ಪಿಡಿಎಫ್‌ನಲ್ಲಿ ಕೆಳಗೆ ಕೊಡಲಾಗಿದೆ.

22-08-2021 HMB Kannada

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement