ಭೋಜಪುರಿ ನಟಿ ಆಕಾಂಕ್ಷಾ ದುಬೆ ಹೊಟೇಲ್‌ ರೂಮಿನಲ್ಲಿ ಶವವಾಗಿ ಪತ್ತೆ

ವಾರಾಣಸಿ: ಜನಪ್ರಿಯ ಭೋಜಪುರಿ ನಟಿ ಆಕಾಂಕ್ಷಾ ದುಬೆ ಭಾನುವಾರ ಇಲ್ಲಿನ ಹೋಟೆಲ್ ಕೊಠಡಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.
25 ವರ್ಷದ ನಟಿ ಆಕಾಂಕ್ಷಾ ದುಬೆ ಫ್ಯಾನ್‌ಗೆ ಬಟ್ಟೆಯ ತುಂಡಿನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗೊತ್ತಾದ ತಕ್ಷಣ ಪೊಲೀಸರಿಗೆ ಕರೆ ಮಾಡಲಾಗಿದೆ ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ.
ಸಹಾಯಕ ಪೊಲೀಸ್ ಕಮಿಷನರ್ (ಸಾರನಾಥ್) ಜ್ಞಾನ್ ಪ್ರಕಾಶ್ ರೈ, “ಮೃತ ನಟಿಯ ಕುಟುಂಬ ಸದಸ್ಯರು ಮುಂಬೈನಲ್ಲಿ ವಾಸಿಸುತ್ತಿದ್ದಾರೆ, ಅವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ, ಅವರ ಕೊಠಡಿಯಿಂದ ಯಾವುದೇ ಆತ್ಮಹತ್ಯೆ ಪತ್ರವನ್ನು ಪಡೆಯಲಾಗಿಲ್ಲ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣದಂತೆ ತೋರುತ್ತದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ನಿವಾಸಿಯಾದ ದುಬೆ, ವಾರಣಾಸಿಗೆ ಸಿನಿಮಾ ಶೂಟಿಂಗ್‌ಗಾಗಿ ಬಂದಿದ್ದು, ಸಾರನಾಥ ಪೊಲೀಸ್ ಠಾಣೆ ವ್ಯಾಪ್ತಿಯ ಹೋಟೆಲ್‌ನಲ್ಲಿ ತಂಗಿದ್ದರು. ಬೆಳಗಿನ ಜಾವದವರೆಗೂ ಅವರು ತಮ್ಮ ಕೊಠಡಿಯಿಂದ ಹೊರಗೆ ಬಾರದಿದ್ದಾಗ, ಆಕೆಯ ಸಹೋದ್ಯೋಗಿಗಳ ಒತ್ತಾಯದ ಮೇರೆಗೆ ಹೋಟೆಲ್ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ಆಕೆಯ ಕೋಣೆಯ ಬಾಗಿಲು ತೆರೆದಾಗ ಇದು ಗೊತ್ತಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ವಾರಾಣಸಿ ಪೊಲೀಸ್ ಕಮಿಷನರೇಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕಸಮ್ ಪೈದಾ ಕರ್ನೆ ವಾಲೆ ಕಿ 2′, ಮುಜ್ಸೆ ಶಾದಿ ಕರೋಗಿ’ (ಭೋಪುರಿ) ಮತ್ತು ‘ವೀರೋನ್ ಕೆ ವೀರ್’ ಸೇರಿದಂತೆ ಹಲವಾರು ಪ್ರಾದೇಶಿಕ ಚಿತ್ರಗಳಲ್ಲಿ ದುಬೆ ನಟಿಸಿದ್ದಾರೆ. ಭೋಜ್‌ಪುರಿ ಚಿತ್ರರಂಗದ ವ್ಯಕ್ತಿಗಳಾದ ರಾಣಿ ಚಟರ್ಜಿ, ವಿನಯ್ ಆನಂದ್ ಮತ್ತು ಆಮ್ರಪಾಲಿ ದುಬೆ ಸಂತಾಪ ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement