ನವದೆಹಲಿ: ಚುನಾವಣಾ ಆಯೋಗ (ಇಸಿ) ಸಾರ್ವಜನಿಕ ಡೊಮೇನ್‌ನಲ್ಲಿ ಇರಿಸಿರುವ ವರದಿಗಳ ಪ್ರಕಾರ 2023-24ರ ಅವಧಿಯಲ್ಲಿ ಆಡಳಿತಾರೂಢ ಬಿಜೆಪಿಯು 2,604.74 ಕೋಟಿ ರೂ.ಗೂ ಹೆಚ್ಚು ದೇಣಿಗೆಯನ್ನು ಪಡೆದಿದೆ. ಪ್ರತಿಪಕ್ಷ ಕಾಂಗ್ರೆಸ್ 281.38 ಕೋಟಿ ರೂ.ಗಳನ್ನು ಪಡೆದುಕೊಂಡಿದೆ ಎಂದು
ವರದಿಗಳಲ್ಲಿ ಪಟ್ಟಿ ಮಾಡಲಾದ ದೇಣಿಗೆಗಳನ್ನು ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಮಾರ್ಚ್ 31, 2024 ರವರೆಗೆ ಸ್ವೀಕರಿಸಲಾಗಿದೆ. 2019ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ 740 ಕೋಟಿ ರೂಪಾಯಿಗೂ ಅಧಿಕ ಮೊತ್ತದ ದೇಣಿಗೆಯನ್ನು ಪಡೆದಿದ್ದರೆ, ಕಾಂಗ್ರೆಸ್ 2018-19ರಲ್ಲಿ 146 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಸ್ವೀಕರಿಸಿದೆ ಎಂದು ಹೇಳಿಕೊಂಡಿತ್ತು.
2023-24ರ ಅವಧಿಯಲ್ಲಿ, ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್‌ನಿಂದ ಬಿಜೆಪಿ 723 ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ಪಡೆದಿದ್ದರೆ, ಟ್ರಯಂಫ್ ಎಲೆಕ್ಟೋರಲ್ ಟ್ರಸ್ಟ್‌ನಿಂದ 127 ಕೋಟಿ ರೂ. ಮತ್ತು ಐಂಜಿಗಾರ್ಟಿಗ್ ಎಲೆಕ್ಟೋರಲ್ ಟ್ರಸ್ಟ್‌ನಿಂದ 17 ಲಕ್ಷ ರೂ. ದೇಣಿಗೆ ಪಡೆದಿದೆ.
ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್‌ನಿಂದ ಕಾಂಗ್ರೆಸ್ 150 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಪಡೆದುಕೊಂಡಿದೆ. ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷವೂ ಆಗಿರುವ ಆಮ್ ಆದ್ಮಿ ಪಕ್ಷ (ಎಎಪಿ) 11.06 ಕೋಟಿ ರೂ.ಗೂ ಹೆಚ್ಚು ಕೊಡುಗೆಗಳನ್ನು ಸ್ವೀಕರಿಸಿದೆ. ಮತ್ತೊಂದು ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷವಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್ (ಸಿಪಿಐ-ಎಂ), 7.64 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ದೇಣಿಗೆಯನ್ನು ಸ್ವೀಕರಿಸಿದೆ. ಈಶಾನ್ಯದ ಮಾನ್ಯತೆ ಪಡೆದ ಏಕೈಕ ರಾಷ್ಟ್ರೀಯ ಪಕ್ಷವಾದ ನ್ಯಾಷನಲ್ ಪೀಪಲ್ಸ್ ಪಾರ್ಟ್ (NPP) 14.85 ಲಕ್ಷ ರೂ.ದೇಣಿಗೆಯನ್ನು ಪಡೆದಿದೆ.
ವೇದಾಂತ, ಭಾರ್ತಿ ಏರ್‌ಟೆಲ್, ಮುತ್ತೂಟ್, ಬಾಜಾ ಆಟೋ, ಜಿಂದಾಲ್ ಗ್ರೂಪ್ ಮತ್ತು ಟಿವಿಎಸ್ ಮೋಟಾರ್ಸ್‌ನಂತಹ ದೊಡ್ಡ ಕಾರ್ಪೊರೇಟ್ ಗುಂಪುಗಳು ಖರೀದಿಸಿದ ಚುನಾವಣಾ ಬಾಂಡ್‌ಗಳ ಪ್ರಮುಖ ಫಲಾನುಭವಿಯೂ ಬಿಜೆಪಿಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ