ಟಿಕೆಟ್ ಸಿಗದ ಕಾರಣ ಟೆಲಿಫೋನ್ ಟವರ್‌ ಏರಿ ಬೆದರಿಕೆ ಹಾಕಿದ ಆಪ್ ಮುಖಂಡ…!

ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖಂಡನೊಬ್ಬ ದೆಹಲಿಯಲ್ಲಿ ಮುಂಬರುವ ಪಾಲಿಕೆ ಚುನಾವಣೆಗೆ (Election) ಟಿಕೆಟ್‌ ಸಿಗದ ಕಾರಣ ಟೆಲಿಫೋನ್ ಟವರ್ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ವಿದ್ಯಮಾನ ನಡೆದಿದೆ.
ಪೂರ್ವ ದೆಹಲಿಯ ಮಾಜಿ ಕೌನ್ಸಿಲರ್ ಹಸೀಬ್-ಉಲ್ ಹಸನ್ ಟವರ್ ಏರಿ ಕುಳಿತವ. ಇನ್ನೂ ಘಟನೆಯ ಬಗ್ಗೆ ಆತನೇ ಫೇಸ್‍ಬುಕ್ ಲೈವ್ ಮಾಡಿದ್ದಾನೆ. ತನಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿಲ್ಲ ಎಂದು ಪ್ರತಿಭಟನೆ ಮಾಡಿರುವುದಾಗಿ ಹೇಳಿದ್ದಾನೆ.

ಫೇಸ್‍ಬುಕ್ ಲೈವ್‍ನಲ್ಲಿ ಆಪ್ ನಾಯಕರಾದ ಅತಿಶಿ ಮತ್ತು ದುರ್ಗೇಶ್ ಪಾಠಕ್ ವಿರುದ್ಧ ದೂರಿರುವ ಈತ ಇಂದು ನನಗೆ ಏನಾದರೂ ಆದರೆ ಅದಕ್ಕೆ ಅತಿಶ್ ಹಾಗೂ ದುರ್ಗೇಶ್ ಅವರೇ ಕಾರಣ ಎಂದು ಹೇಳಿದ್ದಾನೆ. ಏಕೆಂದರೆ ನನ್ನ ಬ್ಯಾಂಕ್ ಪಾಸ್‍ಬುಕ್ ಸೇರಿದಂತೆ ಅನೇಕ ದಾಖಲೆಯನ್ನು ಅವರೇ ಇಟ್ಟುಕೊಂಡಿದ್ದಾರೆ. ಆದರೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನವಾಗಿದೆ. ಆದರೆ ನನಗೆ ಅದ್ಯಾವ ದಾಖಲೆಯನ್ನೂ ಅವರು ನೀಡುತ್ತಿಲ್ಲ ಎಂದು ಆರೋಪಿಸಿದ್ದಾನೆ ಈ ಆರೋಪಗಳಿಗೆ ಆಮ್ ಆದ್ಮಿ ಪಕ್ಷದ ಮುಖಂಡರು ಈವರೆಗೂ ಪ್ರತಿಕ್ರಿಯೆ ನೀಡಿಲ್ಲ.

ಪ್ರಮುಖ ಸುದ್ದಿ :-   ವೀಡಿಯೊ..| ಭಾರತದ ಆಪರೇಶನ್‌ ಸಿಂಧೂರ ದಾಳಿ ನಂತ್ರ 2019ರ ʼಪುಲ್ವಾಮಾ ಭಯೋತ್ಪಾದಕ ದಾಳಿʼಯಲ್ಲಿ ತನ್ನ ಪಾತ್ರವಿದೆ ಎಂದು ಒಪ್ಪಿಕೊಂಡ ಪಾಕಿಸ್ತಾನ..!

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement