ಪೋಕ್ಸೋ ಅಡಿ ಮುರುಘಾ ಶರಣರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಚಿತ್ರದುರ್ಗ ಪೊಲೀಸರು ಚಾರ್ಜ್ ಶೀಟ್ ಅನ್ನು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಮುರುಘಾ ಶರಣರು, ಹಾಸ್ಟೆಲ್‌ನ ವಾರ್ಡನ್ ಮತ್ತು ಮತ್ತೊಬ್ಬ ಸಹಚರನ ವಿರುದ್ಧ ಪೊಲೀಸರು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಮುಂದೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

‘ಒಡನಾಡಿ ಸೇವಾ ಸಂಸ್ಥೆ’ ಎಂಬ ಎನ್‌ಜಿಒ ನೆರವಿನಿಂದ ಮೈಸೂರಿನಲ್ಲಿ ಇಬ್ಬರು ಬಾಲಕಿಯರು ದೂರು ದಾಖಲಿಸಿದ ನಂತರ ಮಠಾಧೀಶರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಸೆಪ್ಟೆಂಬರ್ 1ರಂದು ಬಂಧಿಸಲಾಯಿತು.
ಆಶ್ರಮದ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ಹುಡುಗಿಯರು, ಮಠಾಧೀಶರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳಿದರು. ಅವರ ವಿರುದ್ಧ ಇಲ್ಲಿಯವರೆಗೆ ಮೂರು ಎಫ್‌ಐಆರ್‌ಗಳು ದಾಖಲಾಗಿವೆ. ಮೂರನೇ ಎಫ್‌ಐಆರ್‌ನಲ್ಲಿ ಮಠಾಧೀಶರು ಮತ್ತು ಹಾಸ್ಟೆಲ್‌ನ ವಾರ್ಡನ್ ಸೇರಿದಂತೆ ಆರು ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement