ಡೆಲ್ಟಾ ಪ್ಲಸ್‌ ರೂಪಾಂತರಿ ಬಗ್ಗೆ ಜಾಗೃತಿ ಬೇಕು, ಲಸಿಕಾ ಅಭಿಯಾನಕ್ಕೆ ವೇಗ :ಡಾ.ಪಾಲ್

ನವದೆಹಲಿ : ಭಾರತದಲ್ಲಿ ಪತ್ತೆಯಾದ ಹೊಸ ಕೋವಿಡ್ ರೂಪಾಂತರಿ ಡೆಲ್ಟಾ ಪ್ಲಸ್(ಎವೈ.1) ಸೋಂಕನ್ನು ಗಮನದಲ್ಲಿಟ್ಟು ದೇಶದಾದ್ಯಂತ ಲಸಿಕಾ ಅಭಿಯಾನಕ್ಕೆ ವೇಗ ನೀಡಲಾಗುತ್ತದೆ ಎಂದು ನೀತಿ (ಆರೋಗ್ಯ) ಆಯೋಗದ ಸದಸ್ಯ ವಿ. ಕೆ ಪಾಲ್ ಹೇಳಿದ್ದಾರೆ.
ಮಂಗಳವಾರ ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕೊರೊನಾ ಸೋಂಕು ದೇಶದಲ್ಲಿ ಗಣನೀಯವಾಗಿ ಇಳಿಮುಖವಾಗುತ್ತಿದ್ದು, ಅನೇಕ ಕಡೆಗಳಲ್ಲಿ ಅನ್ ಲಾಕ್ ಮಾಡಲಾಗುತ್ತಿದೆ. ಹೀಗೆಂದು ಯಾರೂ ಸಾಮಾಜಿಕ ಅಂತರ ಮರೆಯಬಾರದು, ಕೋವಿಡ್‌ ಮಾರ್ಗಸೂಚಿಗಳ್ನು ಪಾಲಿಸಬೇಕು ಎಂದು ಅವರು ಹೇಳಿದರು.
ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ಮಾರ್ಚ್​ ನಲ್ಲಿ ಮೊಟ್ಟ ಮೊದಲ ಬಾರಿಗೆ ಪತ್ತೆಯಾಗಿದೆ. ಈ ಸೋಂಕಿನ ಬಗ್ಗೆ ಆತಂಕ ಪಡಬೇಕಾಗಿಲ್ಲ. ಸೋಂಕಿನ ಹರಡುವಿಕೆ ಪ್ರಮಾಣ ಈಗ ಬಹಳಷ್ಟು ಕಡಿಮೆಯಾಗಿದೆ. ಡೆಲ್ಟಾ ಪ್ಲಸ್ ಸೋಂಕಿನ ಬಗ್ಗೆ ಜಾಗೃತಿ ಬೇಕು. ಅತೀ ವೇಗವಾಗಿ ಹರಡುವ ಸಾಮರ್ಥ್ಯವನ್ನು ಈ ಸೋಂಕು ಹೊಂದಿರುವುದಿಂದ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ ಎಂದು ಅವರು ತಿಳಿಸಿದ್ದಾರೆ.
ಈಗಿರುವ ಅಧ್ಯಯನದ ವರದಿಯಂತೆ ನೊವಾವಾಕ್ಸ್ ಲಸಿಕೆಯು ಬಹಳ ಸುರಕ್ಷಿತ ಹಾಗೂ ಪರಿಣಾಮಕಾರಿ ಆಗಿದೆ. ನೊವಾವಾಕ್ಸ್ ಲಸಿಕೆಯನ್ನು ಮುಂದೆ ಭಾರತದಲ್ಲೇ ತಯಾರಿಸಲಾಗುವುದು. ವೈದ್ಯಕೀಯ ಪ್ರಯೋಗಗಳು ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಆರೋಗ್ಯ ಸಚಿವಾಲಯದ ಸಹ ಕಾರ್ಯದರ್ಶಿ ಲವ ಅಗರ್ವಾಲ್ ಮಾತನಾಡಿ, ಭಾರತದಲ್ಲಿ ಈಗಾಗಲೇ ಪತ್ತೆಯಾಗಿರುವ ಬಿ.1.617.2 ರೂಪಾಂತರಿ ಸೋಂಕಿಗೆ ವಿಶ್ವ ಆರೋಗ್ಯ ಸಂಸ್ಥೆಯು ಡೆಲ್ಟಾ ಸೋಂಕು ಎಂದು ಹೆಸರಿಟ್ಟಿದೆ. ಹೊಸ ರೂಪಾಂತರಿ ಸೋಂಕುಗಳನ್ನು ಯಾವುದೇ ದೇಶದ ಹೆಸರಿನಿಂದ ಉಲ್ಲೇಖಿಸುವುದು ಬೇಡ ಎಂಬ ಕಾರಣದಿಂದ ಡೆಲ್ಟಾ ರೂಪಾಂತರಿ ಸೋಂಕು ಎಂದು ಹೆಸರಿಟ್ಟಿದೆ. ಆದರೆ, ಈಗ ಇದೇ ಡೆಲ್ಟಾ ರೂಪಾಂತರಿ ಸೋಂಕು ಮತ್ತೆ ರೂಪಾಂತರಗೊಂಡಿದೆ. ರೂಪಾಂತರಗೊಂಡ ಹೊಸ ಪ್ರಭೇದದ ಸೋಂಕಿಗೆ ಡೆಲ್ಟಾ ಪ್ಲಸ್ ಅಥವಾ ಎವೈ.1 ಎಂದು ಹೆಸರಿಡಲಾಗಿದೆ ಎಂದರು.

ಪ್ರಮುಖ ಸುದ್ದಿ :-   ನಮ್ಮ ಗಾಯದ ಮೇಲೆ ಉಪ್ಪು ಸವರಬೇಡಿ, ಕಸಬ್ ಹೊಗಳುವುದಿದ್ದರೆ ಪಾಕಿಸ್ತಾನಕ್ಕೆ ಹೋಗಿ": 26/11 ದಾಳಿ ಬಗ್ಗೆ ಕಾಂಗ್ರೆಸ್‌ ನಾಯಕನ ಹೇಳಿಕೆಗೆ ಕಸಬ್ ವಿಚಾರಣೆ ಸಾಕ್ಷಿಯ ಆಕ್ಷೇಪ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement