ಟ್ವಟ್ಟರ್‌ನಿಂದ ಮತ್ತೆ ಐಟಿ ನಿಯಮ ಉಲ್ಲಂಘನೆ: ಹೊಸ ದೂರು ಸ್ಪಂದನೆ ಅಧಿಕಾರಿಯಾಗಿ ಅಮೆರಿಕ ಉದ್ಯೋಗಿ ನೇಮಕ

ನವದೆಹಲಿ: ಟ್ವಿಟರ್ ಗ್ರಾಹಕರ ದೂರುಗಳನ್ನು ಆಲಿಸುವುದಕ್ಕೆ ನೇಮಕ ಮಾಡಲಾಗಿದ್ದ ಅಧಿಕಾರಿ ಧರ್ಮೇಂದ್ರ ಚತುರ್ ನಿರ್ಗಮನದ ಬೆನ್ನಲ್ಲೆ ಅಮೆರಿಕಾದ ಸಂಸ್ಥೆ ಕ್ಯಾಲಿಫೋರ್ನಿಯಾ ಮೂಲದ ವ್ಯಕ್ತಿಯೋರ್ವನನ್ನು ಆ ಹುದ್ದೆಗೆ ನೂತನವಾಗಿ ನೇಮಕ ಮಾಡಿದೆ.
ಟ್ವಿಟರ್ ಗ್ಲೋಬಲ್ ಕಾನೂನು ನೀತಿ ನಿರ್ದೇಶಕ ಜೆರೆಮಿ ಕೆಸೆಲ್ ಟ್ವಿಟರ್ ಇಂಡಿಯಾದಲ್ಲಿ ದೂರು ಆಲಿಸುವ ಅಧಿಕಾರಿಯಾಗಿ ಮುಂದುವರೆಯಲಿದ್ದಾರೆ. ಆದರೆ ಭಾರತದ ಹೊಸ ಐಟಿ ನಿಯಮದಲ್ಲಿ ಎಲ್ಲ ನೋಡಲ್ ಅಧಿಕಾರಿಗಳು, ಭಾರತೀಯ ಮೂಲದವರೇ ಆಗಿರಬೇಕೆಂದು ನಿಯಮವಿದೆ.
ಹೊಸ ಐಟಿ ಕಾನೂನುಗಳ ಪಾಲನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ- ಟ್ವಿಟರ್ ನಡುವೆ ಜಟಾಪಟಿ ನಡೆಯುತ್ತಿದ್ದಾಗಲೇ ಚತುರ್ ತಮ್ಮ ಸ್ಥಾನ ತ್ಯಜಿಸಿದ್ದರು.
ಹೊಸ ಐಟಿ ಕಾನೂನುಗಳನ್ನು ಉದ್ದೇಶಪೂರ್ವಕವಾಗಿ ಪಾಲನೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಟ್ವಿಟರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಮೇ 25 ರಂದು ಹೊಸ ಕಾನೂನು ಜಾರಿಗೆ ಬಂದಿದೆ. 50 ಲಕ್ಷ ಬಳಕೆದಾರರನ್ನು ಹೊಂದಿರುವ ಸಂಸ್ಥೆಗಳು ಕುಂದು-ಕೊರತೆಗಳನ್ನು ಆಲಿಸುವ ಅಧಿಕಾರಿಯನ್ನು ನೇಮಕ ಮಾಡಿ ಅವರ ಹೆಸರನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಹಾಗೂ ಅದಕ್ಕೆ ನೇಮಕವಾಗುವ ಅಧಿಕಾರಿ ಭಾರತೀಯ ಮೂಲದವರೇ ಆಗಿರಬೇಕು ಎಂಬ ನಿಯಮವಿದೆ.
ಅಷ್ಟೇ ಅಲ್ಲದೇ ಮೂರು ವಿಧದ ಅಧಿಕಾರಿಗಳು ಅಂದರೆ ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಸಂಪರ್ಕ ಅಧಿಕಾರಿ ಹಾಗೂ ಸ್ಥಳೀಯವಾಗಿ ಕುಂದು ಕೊರತೆಗಳನ್ನು ಆಲಿಸುವ ಅಧಿಕಾರಿಯ ನೇಮಕವಾಗಬೇಕಿದೆ.
ಸರ್ಕಾರದ ಮಾಹಿತಿಯ ಪ್ರಕಾರ ಟ್ವಿಟರ್ ನ ಮೊಂಡಾಟಕ್ಕೆ ಈಗ ಅದು ಕಾನೂನಿನ ರಕ್ಷಣೆ ಕಳೆದುಕೊಂಡಿದೆ. ಟ್ವಿಟರ್ ನಲ್ಲಿ ಅದರ ಚಂದಾದಾರರು ಪೋಸ್ಟ್ ಮಾಡುವ ಅಂಶಗಳಿಗೆ ಕಾನೂನಾತ್ಮಕವಾಗಿ ಸಂಸ್ಥೆಯೇ ಹೊಣೆಯಾಗಿರಲಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ 3-4 ದಿನ ಮಳೆ ಬೀಳುವ ಮುನ್ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement