ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಕಾಮೆಂಟ್ಸ್‌: ಛತ್ತೀಸಗಡ ಸಿಎಂ ತಂದೆ ವಿರುದ್ಧ ಪ್ರಕರಣ ದಾಖಲು

ರಾಯ್ಪುರ: ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕಾರಣಕ್ಕಾಗಿ ಛತ್ತೀಸಗಡ ಸಿಎಂ ಭೂಪೇಶ್ ಬಘೇಲ್ ಅವರ ತಂದೆ ನಂದಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಯಪುರ ಪೊಲೀಸರು ನಂದಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸರ್ವ ಬ್ರಾಹ್ಮಣ ಸಮಾಜದ ದೂರಿನ ಹಿನ್ನೆಲೆಯಲ್ಲಿ ಶನಿವಾರ 75 ವರ್ಷದ ನಂದಕುಮಾರ್ ವಿರುದ್ಧ ದೂರು ದಾಖಲಾಗಿದೆ.
ಬ್ರಾಹ್ಮಣರು ವಿದೇಶಿಯರು. ಹೀಗಾಗಿ ಬ್ರಾಹ್ಮಣರನ್ನು ಹಳ್ಳಿಗಳಲ್ಲಿ ಬಹಿಷ್ಕರಿಸಬೇಕು. ಅವರಿಗೆ ಹಳ್ಳಿಗಳಲ್ಲೂ ಪ್ರವೇಶ ನೀಡಬಾರದು ಎಂದು ನಂದಕುಮಾರ್ ಹೇಳಿದ್ದಾರೆ ಎಂದು ಸರ್ವ ಬ್ರಾಹ್ಮಣ ಸಮಾಜ ದೂರಿನಲ್ಲಿ ಹೇಳಿದೆ.
ಇದಲ್ಲದೇ ಭಗವಾನ್ ರಾಮನ ವಿರುದ್ಧವೂ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ನಂದಕುಮಾರ್ ವಿರುದ್ಧ ಕೇಳಿಬಂದಿದೆ. ಹೀಗಾಗಿ ಸಿಎಂ ತಂದೆ ವಿರುದ್ಧ ಭಾರತೀಯ ದಂಡ ಸಂಹಿತೆ 153ಎ, 505(1)ಬಿ ಸಾರ್ವಜನಿಕರಲ್ಲಿ ಭಯ ಮೂಡಿಸುವ ಉದ್ದೇಶದಡಿಯಲ್ಲಿ ಪ್ರಕರಣದಾಖಲಿಸಿಕೊಳ್ಳಲಾಗಿದೆ.
ತನ್ನ ತಂದೆಯ ಹೇಳಿಕೆಯ ಕುರಿತು ವಿವಾದ ಭುಗಿಲೆದ್ದ ನಂತರ, ಮುಖ್ಯಮಂತ್ರಿಗಳು ಇಂತಹ ಹೇಳಿಕೆಗಳಿಂದ ನೋವಾಗುತ್ತಿದೆ ಎಂದು ಹೇಳಿದರು ಮತ್ತು ಅವರ ಸರ್ಕಾರದಲ್ಲಿ ಯಾರೂ ಕಾನೂನಿಗಿಂತ ಮೇಲಿಲ್ಲ ಮತ್ತು ಈ ವಿಷಯದಲ್ಲಿ ಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.
ನನ್ನ ತಂದೆ ನಂದ್ ಕುಮಾರ್ ಬಘೇಲ್ ಅವರು ನಿರ್ದಿಷ್ಟ ವರ್ಗದ ವಿರುದ್ಧ ಮಾಡಿದ ಟೀಕೆಗಳು ನನ್ನ ಗಮನಕ್ಕೆ ಬಂದಿವೆ. ಈ ಟೀಕೆಗಳು ವರ್ಗದ ಭಾವನೆಗಳನ್ನು ಹಾಗೂ ಸಾಮಾಜಿಕ ಸಾಮರಸ್ಯವನ್ನು ಘಾಸಿಗೊಳಿಸಿದೆ ಮತ್ತು ನನಗೂ ಇದರಿಂದ ನೋವಾಗಿದೆ ಎಂದು ರಾಜ್ಯ ಸಾರ್ವಜನಿಕ ಸಂಪರ್ಕ ಇಲಾಖೆಯು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಸಾಮಾಜಿಕ ಮಾಧ್ಯಮಗಳು ಮತ್ತು ಇತರ ವೇದಿಕೆಗಳ ಮೂಲಕ, ನಂದ್ ಕುಮಾರ್ ಬಘೇಲ್ ಮುಖ್ಯಮಂತ್ರಿಯ ತಂದೆಯಾದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ನನ್ನ ಸರ್ಕಾರದ ಮುಂದೆ ಪ್ರತಿಯೊಬ್ಬ ವ್ಯಕ್ತಿಯು ಸಮಾನ ಎಂದು ಅವರು ಹೇಳಿದರು.
ಪೊಲೀಸರ ಪ್ರಕಾರ, ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ ನಂದ ಕುಮಾರ್ ಬಘೇಲ್ ಈ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆ

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement