ಗಮನಿಸಿ.. ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಬದಲಾವಣೆ-ಎಪ್ರಿಲ್‌ 22ರಿಂದ ಪರೀಕ್ಷೆ ಆರಂಭ

ಬೆಂಗಳೂರು: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ನಡೆಸುವಂತ ಜೆಇಇ ಮೇನ್‌ ಪರೀಕ್ಷೆ (JEE Main Exam) ಮೊದಲ ಸೆಷನ್ ಪರೀಕ್ಷೆ ವೇಳಾಪಟ್ಟಿ ರಾಜ್ಯದ ದ್ವಿತೀಯ ಪರೀಕ್ಷೆ ನಡೆಯುವ ದಿನಗಳಂದೇ ನಿಗದಿಯಾದ ಹಿನ್ನೆಲೆಯಲ್ಲಿ ರಾಜ್ಯದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ.
ಜೆಇಇ ಮೇನ್‌ ಪರೀಕ್ಷೆ (JEE Main Exam) ಮೊದಲ ಸೆಷನ್ ಪರೀಕ್ಷೆ 16-04-2022 ರಿಂದ 22-04-2022ರ ವರೆಗೆ ನಡೆಸಲು ವೇಳಾಪಟ್ಟಿ ಬಿಡುಗಡೆ ಮಾಡಿದೆ. ಈ ವೇಳಾಪಟ್ಟಿಯ ದಿನಾಂಕದಂದೇ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯೂ ಬಂದಿರುವುದರಿಂದ ವೇಳಾಪಟ್ಟಿಯೂ ನಿಗದಿಯಾಗಿತ್ತು. ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ಜೆಇಇ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡ ಪದವಿಪೂರ್ವ ಪರೀಕ್ಷಾ ಮಂಡಳಿಯು ಈಗ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ.
ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆ ನೂತನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳು ದಿನಾಂಕ 22-04-2022ರಿಂದ ಆರಂಭಗೊಂಡು, ದಿನಾಂಕ 11-05-2022ರ ವರೆಗೆ ನಡೆಯಲಿದೆ ಎಂದು ತಿಳಿಸಿದೆ.
ಪರೀಕ್ಷಾ ವೇಳಾಪಟ್ಟಿಯ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ದಿನಾಂಕ 05-03-2022ರ ಒಳಗಾಗಿ [email protected] ಗೆ ಮೇಲ್ ಮಾಡಿ ಆಕ್ಷೇಪಣೆ ಸಲ್ಲಿಸುವಂತೆ ಅವಕಾಶ ನೀಡಲಾಗಿದೆ.
ಪರಿಷ್ಕೃತ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿಯಂತೆ ಪರೀಕ್ಷೆಗಳು ಹೀಗೆ ನಡೆಯಲಿವೆ.
22-04-2022ರಂದು ಶುಕ್ರವಾರ ಲಾಜಿಕ್, ಬ್ಯುಸಿನೆಸ್ ಸ್ಟಡೀಸ್
23-04-2022ರ ಶನಿವಾರ – ಹಿಂದಿ
24-04-2022ರಂದು ಭಾನುವಾರ ಯಾವುದೇ ಪರೀಕ್ಷೆ ಇಲ್ಲ
25-04-2022ರಂದು ಸೋಮವಾರ – ಅರ್ಥ ಶಾಸ್ತ್ರ
26-04-2022ರಂದು ಮಂಗಳವಾರ – ಹಿಂದೂಸ್ತಾನಿ ಸಂಗೀತ, ಸೈಕಾಲಜಿ, ಕೆಮಿಸ್ಟ್ರಿ
27-04-2022ರಂದು ಬುಧವಾರ – ತೆಲುಗು, ತಮಿಳು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
28-04-2022ರಂದು ಗುರುವಾರ – ಕನ್ನಡ, ಅರೇಬಿಕ್
30-04-2022ರಂದು ಶನಿವಾರ ಸಮಾಜ ಶಾಸ್ತ್ರ, ಎಲೆಕ್ಟ್ರಾನಿಕ್, ಕಂಪ್ಯೂಟರ್ ಸೈನ್ಸ್
02-05-2022ರಂದು ಸೋಮವಾರ –ಭೂಗೋಳ ಶಾಸ್ತ್ರ, ಜೀವಶಾಸ್ತ್ರ
04-05-2022ರಂದು ಬುಧವಾರ – ಇಂಗ್ಲಿಷ್‌
05-05-2022ರಂದು ಗುರುವಾರ – ಇನ್ಫೋರ್ಮೇಷನ್ ಟೆಕ್ನಾಲಜಿ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್
06-05-2022ರಂದು ಶುಕ್ರವಾರ – ಗಣಿತ, ಶಿಕ್ಷಣ, ಬೇಸಿಕ್ ಗಣಿತ
07-05-2022ರಂದು ಶನಿವಾರ – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂ ಗರ್ಭ ಶಾಸ್ತ್ರ, ಗೃಹ ವಿಜ್ಞಾನ
09-05-2022ರ ಸೋಮವಾರ – ಇತಿಹಾಸ, ಭೌತಶಾಸ್ತ್ರ
11-05-2022ರಂದು ಬುಧವಾರ–ಸಮಾಜ ಶಾಸ್ತ್ರ, ಸಂಖ್ಯಾ ಶಾಸ್ತ್ರ

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement