ಲಾಕ್ ಡೌನ್, ನೌಕರರ ಮುಷ್ಕರದಿಂದ ಸಾರಿಗೆ ಸಂಸ್ಥೆಗೆ 4,000ಕೋಟಿ ರೂ.ಗಳಷ್ಟು ನಷ್ಟ: ಸವದಿ

ಬೆಳಗಾವಿ: ಲಾಕ್ ಡೌನ್ ಮತ್ತು ನೌಕರರ ಮಷ್ಕರದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಕಳೆದ 15 ತಿಂಗಳಲ್ಲಿ 4,000 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಶನಿವಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಮೊದಲನೇ ಅಲೆ ನಂತರ ಕೆಎಸ್ ಆರ್ ಟಿಸಿ ನೌಕರರು ಮುಷ್ಕರಕ್ಕೆ ಇಳಿದರು. ಮುಷ್ಕರ ಕೊನೆಗೊಳಿಸುತ್ತಿದ್ದಂತೆ ಸಾಂಕ್ರಾಮಿಕದ ಎರಡನೇ ಅಲೆ ಆರಂಭವಾಯಿತು. ಇಲಾಖೆ ಅಪಾರ ನಷ್ಟ ಎದುರಿಸಿದರೂ ಇಲಾಖೆ ನೌಕರರಿಗೆ ಪೂರ್ಣ ವೇತನ ಪಾವತಿಸಿದೆ. ಹಣಕಾಸು ಬೇಡಿಕೆಗಳನ್ನು ಪೂರೈಸಲು ಸರ್ಕಾರ 2,600 ಕೋಟಿ ರೂ ಒದಗಿಸಿದೆ ಎಂದು ಹೇಳಿದರು.
ಈಗ ಶೇ 50ರಷ್ಟು ಪ್ರಯಾಣಿಕರ ಸಾಮರ್ಥ್ಯದೊಂದಿಗೆ ಬಸ್ ಗಳು ಸಂಚರಿಸುತ್ತಿವೆ. ಬರುವ ಆದಾಯವು ಇಂಧನ ಮತ್ತು ಸಂಬಳಗಳಿಗೆ ಸಾಕಾಗುತ್ತಿಲ್ಲ. ವೇತನಗಳಿಗೆ ಸರ್ಕಾರವನ್ನು ಕೋರಲಾಗುವುದು. ಇದು ಅನಿವಾರ್ಯ ಎಂದು ತಿಳಿಸಿದರು.
ಮುಂದಿನ ತಿಂಗಳ 5ರಿಂದ ಮುಷ್ಕರಕ್ಕೆ ಇಳಿಯವುದಾಗಿ ಕೆಲ ಕಾರ್ಮಿಕ ಸಂಘಟನೆಗಳು ಬೆದರಿಕೆ ಒಡ್ಡುತ್ತಿವೆ. ಆದರೆ, ಸಂಘಟನೆಗಳ ನಾಯಕರು ಬಿಕ್ಕಟ್ಟಿನ ಈ ಸಮಯದಲ್ಲಿ ಮುಷ್ಕರ ನಡೆಸುವುದಿಲ್ಲ ಎಂಬ ಭರವಸೆ ನೀಡಿದ್ದಾರೆ. ಕೆಲವರ ಪಿತೂರಿಗಳಿಂದ ತಾವು ಈ ಹಿಂದೆ ಮುಷ್ಕರಕ್ಕೆ ಇಳಿಯಬೇಕಾಯಿತು ಎಂದು ಮಾತುಕತೆಗಳ ವೇಳೆ ಸಂಘಟನೆಗಳ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಲಕ್ಷ್ಮಣ ಸವದಿ ಹೇಳಿದರು.

ಪ್ರಮುಖ ಸುದ್ದಿ :-   ವಿಡಿಯೊಗಳು | ಶಿವಮೊಗ್ಗ ದಸರಾ ಜಂಬೂ ಸವಾರಿ ವೇಳೆ ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತ ಆನೆ ; ಬೆಳ್ಳಿ ಅಂಬಾರಿ ಕೆಳಕ್ಕೆ, ವಾಹನ ಜಖಂ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement