ತೇಜಸ್‌ ನಿರ್ಮಾಣ ಅವಲೋಕಕ್ಕೆ ವಾಯುಸೇನೆ ತಂಡ

ಬೆಂಗಳೂರು: ಹಿಂದೂಸ್ತಾನ ಏರೋನಾಟಿಕ್ಸ್‌ ಲಿಮಿಟೆಡ್‌ ಉತ್ಪಾದಿಸುವ ಯುದ್ಧವಿಮಾನ ತೇಜಸ್‌ ನಿಗದಿತ ಸಮಯದಲ್ಲಿ ರೂಪಗೊಳ್ಳುವ ದಿಸೆಯಲ್ಲಿ ಭಾರತೀಯ ವಾಯುಸೇನೆ ಉಪ ಮುಖ್ಯಸ್ಥರ ನೇತೃತ್ವದಲ್ಲಿ ಸಂಯೋಜಿತ ಪ್ರಾಜೆಕ್ಟ್‌ ಅವಲೋಕನ ತಂಡವನ್ನು ರಚಿಸಲು ವಾಯುಸೇನೆ ಮುಂದಾಗಿದೆ.

ಗುಣಮಟ್ಟದ ಯುದ್ಧ ವಿಮಾನ ನೀಡುವ ದಿಸೆಯಲ್ಲಿ ತೇಜಸ್ ನಿರ್ಮಾಣದ ಸಂದರ್ಭದಲ್ಲಿ ಅವಶ್ಯಕ ಮಾರ್ಪಾಡುಗಳನ್ನು  ಮಾಡಲು ಸ್ಟೇಕ್‌ ಹೋಲ್ಡರ್‌ಗಳ ದ್ವೈವಾರ್ಷಿಕ ಅವಲೋಕನಕ್ಕೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ೪೮,೦೦೦ ಕೋಟಿ ರೂ. ನೀಡಿ ಖರೀದಿಸಿದ ೮೩ ತೇಜಸ್‌ ಯುದ್ಧ ವಿಮಾಗಳು ನಿಗದಿತ ಕಾಲಮಿತಿಯೊಳಗೆ ನಿರ್ಮಾಣಗೊಳ್ಳಬೇಕೆಂಬುದು ವಾಯುಸೇನೆಯ ಉದ್ದೇಶವಾಗಿದೆ ಎಂದು ರಕ್ಷಣಾ ಸಚಿವಾಲಯದ ಮಹಾನಿರ್ದೇಶಕ ವಿ.ಎಲ್.‌ ಕಾಂತಾ ತಿಳಿಸಿದ್ದಾರೆ.

ಒಪ್ಪಂದದನ್ವಯ ಮೊದಲ ತೇಜಸ್‌ ಯುದ್ಧ ವಿಮಾನ ೨೦೨೪ ಫೆಬ್ರವರಿ ೪ರೊಳಗೆ ವಾಯುಸೇನೆಗೆ ಸೇರಬೇಕಿದೆ. ಒಂಭತ್ತು ವರ್ಷಗಳಲ್ಲಿ ಎಲ್ಲ ೮೩ ವಿಮಾನಗಳನ್ನು ಎಚ್‌ಎಎಲ್‌ ವಾಯುಸೇನೆಗೆ ನೀಡಬೇಕು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement