ನೀಟ್‌ ಪಿಜಿ ಪರೀಕ್ಷೆ ಮುಂದೂಡಿದ ಕೇಂದ್ರ ಸರ್ಕಾರ

ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ ನೀಟ್‌ ಪಿಜಿ 2022 ಪರೀಕ್ಷೆಯನ್ನು (ಸ್ನಾತಕೋತ್ತರ ಪದವಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ – 2022) ಆರರಿಂದ ಎಂಟು ವಾರಗಳ ಕಾಲ ಮುಂದೂಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ನೀಟ್‌ ಪಿಜಿ 2021 ಪರೀಕ್ಷೆಯ ಕೌನ್ಸೆಲಿಂಗ್‌ನೊಂದಿಗೆ ನೀಟ್‌ ಪಿಜಿ 2022ರ ಪರೀಕ್ಷಾ ದಿನಾಂಕ ತಳಕು ಹಾಕಿಕೊಂಡಿದ್ದರಿಂದ ಅನೇಕ ಅಭ್ಯರ್ಥಿಗಳು ಸಮಸ್ಯೆ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡುವಂತೆ ಮನವಿ ಸಲ್ಲಿಸಿದ್ದರು.
ನೀಟ್‌ ಪಿಜಿ ಪರೀಕ್ಷೆ ತೆಗೆದುಕೊಳ್ಳಲು ಕಡ್ಡಾಯವಾದ ಇಂಟರ್ನ್‌ಶಿಪ್‌ ತರಬೇತಿಯ ಅವಧಿ ಸಹ ವಿಳಂಬವಾಗಿರುವುದರಿಂದ ಅನೇಕ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ರಾಷ್ಟ್ರೀಯ ಪರೀಕ್ಷಾ ಮಂಡಳಿಯು (ಎನ್‌ಬಿಇ) ಮೇಲಿನ ಕಾರಣಗಳ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು 6ರಿಂದ 8 ವಾರಗಳ ಕಾಲ ಮುಂದೂಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ನೀಟ್‌ ಪಿಜಿ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಾಗಿದೆ. ಅರ್ಜಿದಾರರು ಸಹ ಪರೀಕ್ಷೆಯ ಮುಂದೂಡಿಕೆ ನಿರ್ದೇಶಿಸುವಂತೆ ಕೋರಿ ಇದೇ ಕಾರಣಗಳನ್ನೇ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಕೋಲ್ಕತ್ತಾ ವಶಪಡಿಸಿಕೊಳ್ಳಲು ಆತ್ಮಹತ್ಯಾ ಬಾಂಬರ್‌ಗಳನ್ನು ಕಳುಹಿಸ್ತೇನೆ ': ಬಾಂಗ್ಲಾದೇಶ ಮೂಲಭೂತವಾದಿಯಿಂದ ಹಿಂದೂಗಳ ವಿರುದ್ಧ ಬೆದರಿಕೆ ವೀಡಿಯೊ ವೈರಲ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement