ಉತ್ತರ ಪ್ರದೇಶ ಚುನಾವಣೆ: ಕಡಿಮೆ -ಹೆಚ್ಚು ಅಂತರದಿಂದ ಸೋಲು-ಗೆಲುವಿನ ಮಾಹಿತಿ ಇಲ್ಲಿದೆ..

ನವದೆಹಲಿ: ಉತ್ತರ ಪ್ರದೇಶದಲ್ಲಿ ಜನರು ಮತ್ತೊಮ್ಮೆ ಬಿಜೆಪಿಗೆ ಸರ್ಕಾರ ರಚಿಸಲು ಮತ ಚಲಾಯಿಸಿದ್ದಾರೆ. ಬರೋಬ್ಬರಿ 255 ಸೀಟುಗಳನ್ನು ಬಿಜೆಪಿ ಪಡೆದಿದ್ದು, ಮೈತ್ರಿ ಪಕ್ಷಗಳನ್ನೂ ಸೇರಿ ಒಟ್ಟು 272ಕ್ಕೆ ಕ್ಷೇತ್ರಗಳಲ್ಲಿ ಜಯಗಳಿಸಿದೆ.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ ನಿರಾಸೆಯಾಗಿದೆ. ಕಾಂಗ್ರೆಸ್ ಮತ್ತು ಬಿಎಸಿಪಿಯ ರಾಜಕೀಯ ನೆಲ ಜಾರುತ್ತಿರುವಂತೆ ತೋರುತ್ತಿದೆ. ಉತ್ತರ ಪ್ರದೇಶದಲ್ಲಿ ಅನೇಕ ಕಡೆ ಅಭ್ಯರ್ಥಿಗಳು ತೀವ್ರ ಪೈಪೋಟಿ ನಡುವೆ ಕೆಲವೇ ಮತಗಳ ಅಂತರದಲ್ಲಿ ಜಯಗಳಿಸಿದರೆ ಮತ್ತೆ ಕೆಲವು ಕ್ಷೇತ್ರದಲ್ಲಿ ಲಕ್ಷಕ್ಕೂ ಅಧಿಕ ಮಂತಗಳ ಅಂತರದಲ್ಲಿ ಜಯಗಳಿಸಿದ್ದಾರೆ.
ಈ ಸ್ಥಾನಗಳಲ್ಲಿ ಅತಿ ಕಡಿಮೆ ಅಂತರದ ಗೆಲುವು ಮತ್ತು ಸೋಲು

*ಉತ್ತರ ಪ್ರದೇಶದ ಬರೌತ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ರಿಶನ್ ಪಾಲ್ ಮಲಿಕ್ ಅವರು ಆರ್‌ಎಲ್‌ಡಿಯ ಜೈವೀರ್ ಅವರನ್ನು ಕೇವಲ 315 ಮತಗಳಿಂದ ಸೋಲಿಸಿದ್ದಾರೆ. ಅಲ್ಲಿ ನೋಟಾಕ್ಕೆ 79 ಮತಗಳು ಚಲಾವಣೆಯಾಗಿದೆ.

* ವಿಲಾಸ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಲದೇವ್ ಔಲಾಖ್ ಗೆಲುವು ಸಾಧಿಸಿದ್ದಾರೆ. ಅವರು ಇಲ್ಲಿ ಸಮಾಜವಾದಿ ಪಕ್ಷದ ಅಮರಜೀತ್ ಸಿಂಗ್ ಅವರನ್ನು ಕೇವಲ 307 ಮತಗಳಿಂದ ಸೋಲಿಸಿದ್ದಾರೆ.

* ಸಮಾಜವಾದಿ ಪಕ್ಷದ ಅಭ್ಯರ್ಥಿ ಸ್ವಾಮಿ ಓಂವೇಶ್ ಚಂದ್‌ಪುರ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. ಓಂವೇಶ್ ಅವರು ಬಿಜೆಪಿಯ ಕಮಲೇಶ್ ಸೈನಿ ಅವರನ್ನು ಕೇವಲ 234 ಮತಗಳಿಂದ ಸೋಲಿಸಿದರು

*ನಾಥೌರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಓಂ ಕುಮಾರ್ ಅವರು ಆರ್‌ಎಲ್‌ಡಿಯ ಮುನ್ಷಿ ರಾಮ್ ಅವರನ್ನು ಕೇವಲ 258 ಮತಗಳಿಂದ ಸೋಲಿಸಿದರು.

*ಬಿಜೆಪಿಯ ಮುಖೇಶ್ ಚೌಧರಿ ಅವರು ನಕುಡ್ ವಿಧಾನಸಭಾ ಕ್ಷೇತ್ರದಿಂದ ಕೇವಲ 315 ಮತಗಳಿಂದ ಗೆದ್ದಿದ್ದಾರೆ. ಮುಖೇಶ್ ಚೌಧರಿ ಅವರು ಸಮಾಜವಾದಿ ಪಕ್ಷದ ಧರಂ ಸಿಂಗ್ ಸೈನಿ ಅವರನ್ನು ಸೋಲಿಸಿದರು

* ರಾಮನಗರ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಫರೀದ್ ಮಹಫೌಜ್ ಬಿಜೆಪಿಯ ಶರದ್ ಅವಸ್ತಿ ಅವರನ್ನು 261 ಮತಗಳ ಅಂತರದಿಂದ ಸೋಲಿಸಿದ್ದಾರೆ.

* ಬಿಜೆಪಿಯ ಅಶೋಕ್ ರಾಣಾ ಅವರು ಸಮಾಜವಾದಿ ಪಕ್ಷದ ನಯೀಮ್ ಉಲ್ ಹಸನ್ ಅವರನ್ನು ಧಂಪುರ ವಿಧಾನಸಭಾ ಕ್ಷೇತ್ರದಿಂದ ಕೇವಲ 203 ಮತಗಳಿಂದ ಸೋಲಿಸಿದ್ದಾರೆ.

* ಸಮಾಜವಾದಿ ಪಕ್ಷದ ಅಭ್ಯರ್ಥಿ ಮೊಹಮ್ಮದ್ ತಾಹಿರ್ ಖಾನ್ ಅವರು ಬಿಜೆಪಿಯ ಓಂ ಪ್ರಕಾಶ್ ಪಾಂಡೆ ಅವರನ್ನು 269 ಮತಗಳಿಂದ ಸೋಲಿಸಿದ್ದಾರೆ.

* ಕುರ್ಸಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಸಂಕೇಂದ್ರ ಪ್ರತಾಪ್ ಅವರು ಸಮಾಜವಾದಿ ಪಕ್ಷದ ರಾಕೇಶ್ ವರ್ಮಾ ಅವರನ್ನು ಕೇವಲ 217 ಮತಗಳಿಂದ ಸೋಲಿಸಿದರು. ಇಷ್ಟೇ ಅಲ್ಲದೆ, ಇನ್ನೂ ಹಲವು ಸ್ಥಾನಗಳಲ್ಲಿ ಸೋಲು-ಗೆಲುವಿನ ಅಂತರ ತೀರಾ ಕಡಿಮೆ ಇತ್ತು.

ಪ್ರಮುಖ ಸುದ್ದಿ :-   'ಐಸ್‌ಕ್ರೀಂ ಮ್ಯಾನ್‌' ಖ್ಯಾತಿಯ ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ ಕಾಮತ್ ನಿಧನ

ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿಗಳು..

* ಬಿಜೆಪಿಯ ಸುನೀಲ್ ಕುಮಾರ್ ಶರ್ಮಾ ಸಾಹಿಬಾಬಾದ್ ವಿಧಾನಸಭಾ ಕ್ಷೇತ್ರದಿಂದ ಬರೋಬ್ಬರಿ 2.14 ಲಕ್ಷ ಮತಗಳ ಅಂತರದಿಂದ ಗೆದ್ದರು. ಅವರು ಅಮರ್‌ಪಾಲ್ ಶರ್ಮಾ ಅವರನ್ನು ಭಾರಿ ಅಂತರದಿಂದ ಸೋಲಿಸಿದರು

* ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರ ನಗರದಿಂದ 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ

* ನೋಯ್ಡಾ ಕ್ಷೇತ್ರದಲ್ಲಿ ಬಿಜೆಪಿಯ ಪಂಕಜ್ ಸಿಂಗ್ 1.81 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದರು.

*. ದಾದ್ರಿಯಿಂದ ಬಿಜೆಪಿಯ ತೇಜ್‌ಪಾಲ್ ಸಿಂಗ್ ನಗರ್ 1,38,218 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

*. ಶ್ರೀಕಾಂತ್ ಶರ್ಮಾ ಮಥುರಾದಿಂದ 1,09,803 ಅಂತರದಿಂದ ಗೆದ್ದಿದ್ದಾರೆ.

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement