ಬೆಳಗಾವಿ: ಬೆಳಗಾವಿ ಜಿಲ್ಲೆಯ ವಿಭಜನೆ ಮಾಡಬೇಕು ಹಾಗೂ ಬೆಳಗಾವಿಯಿಂದ ಅಥಣಿ ತಾಲೂಕನ್ನು ಬೇರ್ಪಡಿಸಿ ಪ್ರತ್ಯೇಕ ಜಿಲ್ಲೆಯಾಗಿಸಬೇಕು ಎಂದು ಒತ್ತಾಯಿಸಿ ಈಗ ವಿನೂತನವಾಗಿ ಪ್ರತಿಭಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಥಣಿಯನ್ನು ಪ್ರತ್ಯೇಕ ಜಿಲ್ಲೆಯಾಗಿಸಬೇಕು ಎಂದು ಒತ್ತಾಯಿಸಿ ಈಗ ಹೋರಾಟಗಾರರು ದೇವರ ಮೊರೆ ಹೋಗಿದ್ದಾರೆ.
ದೇವರೇ ಬೆಳಗಾವಿ ಜಿಲ್ಲೆಯನ್ನು ಇಬ್ಭಾಗ ಮಾಡಿಸು ಎಂದು ಪ್ರಾರ್ಥಿಸಿ ಅಥಣಿ ಪ್ರತ್ಯೇಕ ಜಿಲ್ಲಾ ಹೋರಾಟಗಾರರು ದೇವರಲ್ಲಿ ಬೇಡಿಕೊಂಡಿದ್ದಾರೆ. ಹನುಮನ ಜನ್ಮ ಸ್ಥಳ ಅಂಜನಾದ್ರಿ ಬೆಟ್ಟದ ಮೇಲೆ ಹೋರಾಟಗಾರರು ತೆಂಗಿನ ಕಾಯಿ ಕಟ್ಟಿ ಸಂಕಲ್ಪ ಮಾಡಿದ್ದಾರೆ. ಹಾಗೂ ಶೀಘ್ರವೇ ಅಥಣಿ ಜಿಲ್ಲೆ ರಚನೆ ಆಗಬೇಕು ಎಂದು ದೇವರಲ್ಲಿ ಹರಕೆ ಹೊತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಹದಿನಾಲ್ಕು ತಾಲೂಕುಗಳನ್ನು ಹೊಂದಿದೆ ಹಾಗೂ ಬೆಳಗಾವಿ ಜಿಲ್ಲೆಯನ್ನು ಪ್ರತ್ಯೇಕ ಜಿಲ್ಲೆಯಾಗಿಸಬೇಕೆಂಬ ಕೂಗು ಮೊದಲಿನಿಂದಲೂ ಇದೆ. ಆದರೆ ನಾನಾ ಕಾರಣದಗಳಿಂದ ಅದು ಮುಂದಕ್ಕೆ ಹೋಗುತ್ತಲೇ ಇದೆ. ಈ ಮೊದಲು ಬೆಳಗಾಔಇ ಜಿಲ್ಲೆಯನ್ನು ಒಡೆದು ಚಿಕ್ಕೋಡಿ ಜಿಲ್ಲೆ ಪ್ರತ್ಯೇಕ ಮಾಡಬೇಕೆಂದು ಕೆಲವರು ಹೇಳಿದರೆ ಮತ್ತೆ ಕೆಲವರು ಗೋಕಾಕ ಜಿಲ್ಲೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಈಗ ಅಥಣಿ ಜಿಲ್ಲೆ ಮಾಬೇಕೆಂದು ಜನರು ಹರಕೆ ಹೊತ್ತ ವಿದ್ಯಮಾನ ನಡೆದಿದೆ.


ನಿಮ್ಮ ಕಾಮೆಂಟ್ ಬರೆಯಿರಿ