ಬೆಂಗಳೂರು: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2026 – 27ನೇ ಸಾಲಿನ ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ಗೆ ಆಯ್ಕೆಯಾದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ ಶಾಲಾ ವಿಭಾಗದಿಂದ 20 ಜನ ಮತ್ತು ಪ್ರೌಢ ಶಾಲಾ ವಿಭಾಗದಿಂದ 11 ಜನ (ಒರ್ವ ವಿಶೇಷ ಶಿಕ್ಷಕರೂ ಸೇರಿದಂತೆ) ಒಟ್ಟು 31 ಶಿಕ್ಷಕರು ಆಯ್ಕೆಯಾಗಿದ್ದಾರೆ. ಮಹಿಳಾ ಶಿಕ್ಷಕರಿಗೆ ವಿಶೇಷ ಗೌರವವಾಗಿ, ಅಕ್ಷರ ಮಾತೆ “ಸಾವಿತ್ರಿಗೆ ಬಾಯಿ ಪುಲೆ” ಅವರ ಹೆಸರಿನಲ್ಲಿ ಸೆಪ್ಟೆಂಬರ್ 5 ರಂದು ನಡೆಯುವ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆಯಂದು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಸರ್ಕಾರದ ಆದೇಶದಂತೆ ಪ್ರಶಸ್ತಿ ಪುರಸ್ಕೃತರಿಗೆ ತಲಾ 25,000 ರೂಪಾಯಿಗಳ ನಗದು ಪುರಸ್ಕಾರವನ್ನು ನೀಡಲಾಗುತ್ತದೆ.
ಪ್ರಶಸ್ತಿ ಪಡೆದವರ ಪಟ್ಟಿ….
ಪ್ರಾಥಮಿಕ ಶಾಲಾ ವಿಭಾಗ (20 ಶಿಕ್ಷಕರು):
ಸಿ. ಉಮಾ – ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೆಂಪತಿಮ್ಮನಹಳ್ಳಿ, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ
ಬಸಪ್ಪ ಪರಪ್ಪ ಪಾಟೀಲ –ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲ್ಲೂರು ಕ್ರಾಸ್, ಮೂಡಲಗಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ
ಅಶೋಕ –ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸಕುತ್ತೂರು, ಕುಂದಾಪುರ, ಉಡುಪಿ ಜಿಲ್ಲೆ
ಸುರೇಶ ಕೆ. –ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಂಡೇರದೊಡ್ಡಿ, ದೇವದುರ್ಗ, ರಾಯಚೂರು ಜಿಲ್ಲೆ
ಹಣಮಂತ ಕಲ್ಲಪ್ಪ ಕಾತರಕಿ –ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆ ಕೆಂಗಲಗುತ್ತಿ, ವಿಜಯಪುರ ಗ್ರಾಮಾಂತರ
ಉಷಾ ವಿ. ನಾಯಕ –ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.1, ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ
ಮಸ್ತಾನ್ ವಲಿ – ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಟ್ಟಹಳ್ಳಿ, ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ
ಪ್ರಭಾವತಿ ಬಾಳಪ್ಪಾ ಹಾಲೆನ್ನವರ (ಮುಖ್ಯ ಶಿಕ್ಷಕರು) – ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಜಾಫರವಾಡಿ, ಕಡೋಲಿ, ಬೆಳಗಾವಿ ಜಿಲ್ಲೆ
ಸರೋಜಮ್ಮ –ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸತ್ತೇಗಾಲ ಅಗ್ರಹಾರ, ಕೊಳ್ಳೇಗಾಲ, ಚಾಮರಾಜನಗರ ಜಿಲ್ಲೆ
ನಿಂಗಪ್ಪಾ (ಮುಖ್ಯ ಶಿಕ್ಷಕರು) – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಜಬಬಲಾದ, ಆಳಂದ, ಕಲಬುರಗಿ ಜಿಲ್ಲೆ
ರತ್ನಮ್ಮ ಎನ್.ಎಂ. – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಂಬತ್ತಹಳ್ಳಿ, ಬೆಂಗಳೂರು ದಕ್ಷಿಣ-3
ನೇಮಣ್ಣ ಬಮ್ಮಣ್ಣ ಜಮಖಂಡಿ – ಶ್ರೀ ಜಿನಸೇನಾಚಾರ್ಯಹಿರಿಯ ಪ್ರಾಥಮಿಕ ಶಾಲೆ ತೇರದಾಳ, ಜಮಖಂಡಿ, ಬಾಗಲಕೋಟೆ ಜಿಲ್ಲೆ
ರಾಮಚಂದ್ರ ಈ. ನಾಯ್ಕ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆ ಗಣಪತಿಗಲ್ಲಿ, ಯಲ್ಲಾಪುರ, ಶಿರಸಿ ಶೈಕ್ಷಣಿಕ ಜಿಲ್ಲೆ
ಮಾಲಿನಿ ಎಂ. – ಸರ್ಕಾರಿ ಕಿರಿಯ ಪ್ರಾತಮಿಕ ಶಾಲೆ ಮುದಿಗೌಡನಹಟ್ಟಿ, ಕೊರಟಗೆರೆ, ಮಧುಗಿರಿ ಜಿಲ್ಲೆ
ಕುಮಾರ ನಾಯ್ಕ ಬಿ.ಡಿ. –ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚಿಕ್ಕಮಾಗಡಿ ತಾಂಡಾ, ಶಿಕಾರಿಪುರ, ಶಿವಮೊಗ್ಗ ಜಿಲ್ಲೆ
ಕೃಷ್ಣಮೂರ್ತಿ ಕೆ.ಎಸ್. – ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಗೃಹಲಕ್ಷ್ಮೀ ಬಡಾವಣೆ, ಬೆಂಗಳೂರು ಉತ್ತರ-1
ಮಲ್ಲಿಕಾರ್ಜುನ ಬಡಿಗೇರ –ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸದಾಶಿವಪುರ, ಹೊನ್ನಾಳಿ, ದಾವಣಗೆರೆ ಜಿಲ್ಲೆ
ಪ್ರೇಮಕುಮಾರ್ ವಿ.ಎಸ್. –ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಗ್ಡೆರೆ, ತುರುವೇಕೆರೆ, ತುಮಕೂರು ಜಿಲ್ಲೆ
ದುರಗಪ್ಪ ಹೆಚ್. – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಕೊಂಚಿಗೇರಿ, ಸಿರಗುಪ್ಪ, ಬಳ್ಳಾರಿ ಜಿಲ್ಲೆ
ಮೈಲಾರಪ್ಪ ಬೂದಿಹಾಳ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹನವಾಳ, ಗಂಗಾವತಿ, ಕೊಪ್ಪಳ ಜಿಲ್ಲೆ
ಪ್ರೌಢಶಾಲಾ ವಿಭಾಗ (11 ಶಿಕ್ಷಕರು):
ಸಿದ್ದಪ್ಪ ವೀರಭದ್ರಪ್ಪ ಬಿರಾದಾರ (ಸಹ ಶಿಕ್ಷಕರು) – ಸರ್ಕಾರಿ ಪ್ರೌಢಶಾಲೆ ಚಿಬ್ಬಲಗೇರಿ, ಹಳಿಯಾಳ, ಶಿರಸಿ ಶೈಕ್ಷಣಿಕ ಜಿಲ್ಲೆ
ಶೈನಾಕುಮಾರಿ ಎಂ. (ಸಹ ಶಿಕ್ಷಕರು) – ಕೆಪಿಎಸ್ (ಪ್ರೌಢಶಾಲೆ ವಿಭಾಗ) ಜೀವನ್ ಭೀಮಾನಗರ, ಬೆಂಗಳೂರು
ಕುಬೇರ ನಾಯ್ಕ ಬಿ. (ಸಹ ಶಿಕ್ಷಕರು) – ಸರ್ಕಾರಿ ಪ್ರೌಢಶಾಲೆ ತಮ್ಮಡಿಹಳ್ಳಿ, ಶಿವಮೊಗ್ಗ ಜಿಲ್ಲೆ
ನೀಲಕಂಠ ಗಾವಂಕರ್ (ಮುಖ್ಯ ಶಿಕ್ಷಕರು) – ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ) ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ
ವಿ. ವೆಂಕಟೇಶ (ಮುಖ್ಯ ಶಿಕ್ಷಕರು) –ಸರ್ಕಾರಿ ಪ್ರೌಢಶಾಲೆ ಗೂಳೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆ
ಮಮತಾ ನಾಯ್ಕ (ಮುಖ್ಯ ಶಿಕ್ಷಕರು) – ಸರ್ಕಾರಿ ಹಿರಿಯ ಪ್ರಾಥಮಿ ಶಾಲೆ ಅಘನಾಶಿನಿ (ಆರ್.ಎಂ.ಎಸ್.ಎ), ಕುಮಟಾ, ಉತ್ತರ ಕನ್ನಡ
ರೋಶನ್ ಅಲೆಕ್ಸಾಂಡರ್ (ಸಹ ಶಿಕ್ಷಕರು) – ಕಾರ್ಮೆಲ್ ಹೈಸ್ಕೂಲ್, ಮೋದನಕಾಪು, ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲೆ
ಜಯಶೀಲ (ದೈಹಿಕ ಶಿಕ್ಷಕರು) – ಸರ್ಕಾರಿ ಆದರ್ಶ ವಿದ್ಯಾಲಯ, ಮೈಸೂರು ದಕ್ಷಿಣ, ಮೈಸೂರು ಜಿಲ್ಲೆ
ಮಥಾಯಿ ಟಿ. (ಸಹ ಶಿಕ್ಷಕರು) – ಸರ್ಕಾರಿ ಪ್ರೌಢಶಾಲೆ ಮುತ್ತಿನಕೊಪ್ಪ, ಎನ್.ಆರ್. ಪುರ, ಚಿಕ್ಕಮಗಳೂರು ಜಿಲ್ಲೆ
ಜಯಪ್ಪ ಕೆ.ಟಿ. (ಸಹ ಶಿಕ್ಷಕರು) – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಟ್ಟುವಳ್ಳಿ (ಆರ್.ಎಂ.ಎಸ್.ಎ), ದಾವಣಗೆರೆ ಜಿಲ್ಲೆ
ಆನಂದ ಮಾದೇವ ಝಂಡೆ (ವಿಶೇಷ ಶಿಕ್ಷಕರು) –ಸರ್ಕಾರಿ ಪ್ರೌಢಶಾಲೆ ಟಕ್ಕಲಕಿ, ವಿಜಯಪುರ ಜಿಲ್ಲೆ



ನಿಮ್ಮ ಕಾಮೆಂಟ್ ಬರೆಯಿರಿ