ಭೋಜ್‌ಪುರ: ಜನರು ರಾಷ್ಟ್ರಧ್ವಜವನ್ನು ಬೀಸಿದ್ದ ಪಾಕಿಸ್ತಾನದ 18 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಬಿಹಾರದ ಭೋಜ್‌ಪುರದಲ್ಲಿ ಭಾರತ ಮುರಿದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ 78,000 ಕ್ಕೂ ಹೆಚ್ಚು ಭಾರತೀಯರು ಏಕಕಾಲದಲ್ಲಿ ರಾಷ್ಟ್ರಧ್ವಜ ಬೀಸುವುದರೊಂದಿಗೆ ಭಾರತವು ಶನಿವಾರ ಪಾಕಿಸ್ತಾನದ ದಾಖಲೆಯನ್ನು ಮುರಿದಿದೆ.
‘ಆಜಾದಿ ಕಾ ಅಮೃತ್ ಮಹೋತ್ಸವ’ದ ಅಂಗವಾಗಿ ಬ್ರಿಟಿಷರ ವಿರುದ್ಧ 1857ರ ದಂಗೆಯ ವೀರರಲ್ಲಿ ಒಬ್ಬರಾದ ವೀರ್ ಕುನ್ವರ್ ಸಿಂಗ್ ಅವರ 164 ನೇ ಪುಣ್ಯತಿಥಿಯಂದುವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಹಾರದ ಬಿಜೆಪಿಯ ಪ್ರಮುಖ ನಾಯಕರು, ಕೇಂದ್ರ ಸಚಿವರಾದ ಆರ್ ಕೆ ಸಿಂಗ್ ಮತ್ತು ನಿತ್ಯಾನಂದ ರೈ, ಉಪಮುಖ್ಯಮಂತ್ರಿಗಳಾದ ತಾರಕಿಶೋರ್ ಪ್ರಸಾದ್ ಮತ್ತು ರೇಣು ದೇವಿ ಮತ್ತು ಮಾಜಿ ಉಪಮುಖ್ಯಮಂತ್ರಿ ಹಿಂದಿನ ಸುಶೀಲಕುಮಾರ್ ಮೋದಿ ಸೇರಿದಂತೆ 78,000 ಕ್ಕೂ ಹೆಚ್ಚು ಜನರು ರಾಷ್ಟ್ರೀಯ ಗೀತೆಗೆ ಪೂರ್ಣ ಐದು ನಿಮಿಷಗಳ ಕಾಲ ತ್ರಿವರ್ಣ ಧ್ವಜವನ್ನು ಬೀಸಿದರು. ಹಿನ್ನೆಲೆಯಲ್ಲಿ ‘ವಂದೇ ಮಾತರಂ’ ನುಡಿಸಲಾಯಿತು.
ಈ ಕಾರ್ಯಕ್ರಮವನ್ನು ಆಯೋಜಿಸುವ ಮುನ್ನವೇ ಈ ಕಾರ್ಯಕ್ರಮದಲ್ಲಿ ಅಮಿತ್ ಶಾ ಸಮ್ಮುಖದಲ್ಲಿ ಏಕಕಾಲಕ್ಕೆ 75000 ತ್ರಿವರ್ಣ ಧ್ವಜ ಹಾರಿಸುವ ಗುರಿಯನ್ನು ಬಿಜೆಪಿ ನಿಗದಿಪಡಿಸಿತ್ತು. 2004ರಲ್ಲಿ ಲಾಹೋರ್‌ನಲ್ಲಿ ನಡೆದ ಸಮಾರಂಭದಲ್ಲಿ 56,000 ಪಾಕಿಸ್ತಾನಿಗಳು ತಮ್ಮ ರಾಷ್ಟ್ರಧ್ವಜವನ್ನು ಬೀಸಿದ್ದು ಈ ಹಿಂದಿನ ವಿಶ್ವದಾಖಲೆಯಾಗಿತ್ತು.
ಆರ್‌ಜೆಡಿ ವಿರುದ್ಧ ಅಮಿತ್ ಶಾ ವಾಗ್ದಾಳಿ
ವೀರ್ ಕುನ್ವರ್ ಸಿಂಗ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದರು, “ಲಾಲು ಪ್ರಸಾದ್ ಅವರ ಪೋಸ್ಟರ್‌ಗಳಿಲ್ಲದೆ ಕೇವಲ ಜಂಗಲ್ ರಾಜ್‌ನ ನೆನಪುಗಳನ್ನು ಅಳಿಸಲು ಸಾಧ್ಯವಿಲ್ಲ” ಎಂದು ಟೀಕಿಸಿದರು.
ಬಿಹಾರವನ್ನು “ಜಂಗಲ್ ರಾಜ್” ತೊಡೆದುಹಾಕಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆಗೆ ಬಿಜೆಪಿ ವಹಿಸಿದ ಪಾತ್ರವನ್ನು ಅಮಿತ್ ಶಾ ಸ್ಮರಿಸಿದರು.
ಎರಡು ವರ್ಷಗಳ ನಂತರ ಬಿಹಾರಕ್ಕೆ ಅಮಿತ್ ಶಾ ಅವರ ಮೊದಲ ಭೇಟಿ ಇದಾಗಿದೆ. ಸಿಎಎ-ಎನ್‌ಪಿಆರ್-ಎನ್‌ಆರ್‌ಸಿ ವಿವಾದದ ನಂತರ ಅವರು 2020 ರ ಜನವರಿಯಲ್ಲಿ ವೈಶಾಲಿ ಜಿಲ್ಲೆಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ