ಕರ್ನಾಟಕದಲ್ಲಿ ಲಾಕ್‌ಡೌನ್‌ ಜಾರಿ ಬಗ್ಗೆ ಒಲವು ತೋರಿದ ಕೇಂದ್ರ ಸಚಿವ

ಬೆಂಗಳೂರು : ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿ‌ ಗಂಭೀರವಾಗಿದ್ದು, ಲಾಕ್ಡೌನ್ ಜಾರಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ರಾಜ್ಯ ಸರಕಾರಕ್ಕೆ ಸಲಹೆ ಮಾಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೊದಲು ಜೀವ ಉಳಿಸಲು ಪ್ರಮುಖ ಆದ್ಯತೆ ಕೊಡಬೇಕು.ಇವತ್ತಿನ ಪರಿಸ್ಥಿತಿಯಲ್ಲಿ ಲಾಕ್ಡೌನ್ ಜಾರಿ ಮಾಡುವುದನ್ನು ಗಂಭೀರವಾಗಿ ವಿಚಾರ ಮಾಡಬೇಕು ಎಂದು ಸದಾನಂದ ಗೌಡ ತಿಳಿಸಿದರು.
ಮುಂಬೈಯಲ್ಲೂ ಲಾಕ್ಡೌನ್ ನಿಂದಲೇ ಸೋಂಕಿನ ‌ ಪ್ರಮಾಣ ಕಡಿಮೆ ಆಗಿದೆ. ದೈನಂದಿನ ಪ್ರಕರಣ ಹತ್ತು ಸಾವಿರದಿಂದ ಎರಡು ಸಾವಿರಕ್ಕೆ ಇಳಿದಿವೆ. ಮಹಾರಾಷ್ಟ್ರ ಮಾದರಿಯಲ್ಲಿ ಲಾಕ್ ಡೌನ್ ಮಾಡಿ ಎಂದು ಸುಪ್ರೀಂ ಕೋರ್ಟ್ ಸೂಚನೆ ಕೊಟ್ಟಿದೆ.ಹೆಚ್ಚು ಪ್ರಕರಣಗಳು ಎಲ್ಲಿವೆ ಅಲ್ಲಿ ಲಾಕ್ ಡೌನ್ ಮಾಡಬೇಕು ಎಂದು ಹೇಳಿದೆ.ನನ್ನ ಪ್ರಕಾರ ಮೊದಲು ಜೀವ ಉಳಿಸಿಕೊಂಡು ಜೀವನ ಮಾಡಬೇಕು. ಜೀವ ಉಳಿಸುವುದಕ್ಕೆ ಏನು‌ ಮಾಡಬೇಕು.ಅದನ್ನ ಮಾಡಲೇ ಬೇಕು. ಪ್ರಧಾನ ಮಂತ್ರಿ ಅವರ ನಿರ್ದೇಶನ ಪಾಲನೆ ಮಾಡಬೇಕು.ನಮ್ಮ ಕೆಲಸ ನಾವೇ ಮಾಡಬೇಕು ಎಂದರು.
ಬೆಂಗಳೂರಿನಲ್ಲಿ ಸೆಮಿ ಲಾಕ್ ಡೌನ್ ಮಾಡಿದ್ದಕ್ಕೆ ಗ್ರಾಮೀಣ ಭಾಗಕ್ಕೆ ಜನ ಹೋಗಿದ್ದಾರೆ. ಅಲ್ಲಿಯೂ ಕೋವಿಡ್‌ ಹರಡುತ್ತಿದೆ. ಹೀಗಾಗಿ ಬೆಂಗಳೂರಿನಷ್ಟೇ ಗಂಭೀರವಾಗಿ ಇತರ ಜಿಲ್ಲೆಗಳನ್ನೂ ತೆಗೆದುಕೊಳ್ಳಬೇಕು ಎಂದು ‌ ಹೇಳಿದರು.
ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರ ಜತೆ ಬುಧವಾರ ಮಾತಾಡಿದ್ದೆ. ಕರ್ನಾಟಕಕ್ಕೇ ಹೆಚ್ಚಿನ ಆಮ್ಲಜನಕ ಬೇಕು ಎಂಬುದರ ಕುರಿತು ಚರ್ಚೆ ಆಯಿತು. ಇದರಿಂದ ಆಕ್ಸಿಜನ್ ಪೂರೈಕೆ ಪ್ರಮಾಣದಲ್ಲಿ ಹೆಚ್ಚಳ ಮಾಡಿದ್ದಾರೆ.ಗುರುವಾರದಿಂದ 975 ಮೆಟ್ರಿಕ್ ಟನ್ ಆಮ್ಲಜನಕ ಕೊಡುತ್ತಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಗಳಿಗೆ ಉಸ್ತುವಾರಿ ಮಂತ್ರಿಗಳಿಗೆ ನೇರ ಜವಬ್ದಾರಿ ಕೊಟ್ಟಿದ್ದಾರೆ.ಅವರೇ ಜಿಲ್ಲೆಯಲಿ ಇರುವಂತೆ ಹೇಳಿದ್ದಾರೆ. ಉಸ್ತುವಾರಿ ಮಂತ್ರಿಗಳು ಜಿಲ್ಲೆಯ ಶಾಸಕರು, ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಪ್ರಮುಖ ಸುದ್ದಿ :-   ವಿಡಿಯೊಗಳು | ಶಿವಮೊಗ್ಗ ದಸರಾ ಜಂಬೂ ಸವಾರಿ ವೇಳೆ ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತ ಆನೆ ; ಬೆಳ್ಳಿ ಅಂಬಾರಿ ಕೆಳಕ್ಕೆ, ವಾಹನ ಜಖಂ

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement