ಕರ್ನಾಟಕದಲ್ಲಿ ಬುಧವಾರ ಕೊರೊನಾ ಹೊಸ ಸೋಂಕು ತುಸು ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು (ಬುಧವಾರ) ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ಮತ್ತೊಮ್ಮೆ ಏರಿಕೆ‌ ಕಂಡಿದೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1102 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 17 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ 1458 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 17,058 ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಹೊಸದಾಗಿ ದಾಖಲಾಗಿರುವ ಸೋಂಕು ಸೇರಿದಂತೆ ಈವರೆಗೆ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 29,58,090 ಕ್ಕೆ ಏರಿಕೆಯಾಗಿದೆ ಜೊತೆಗೆ ಚೇತರಿಸಿಕೊಂಡವರ ಸಂಖ್ಯೆ 29,03,547ಕ್ಕೆ ಹೆಚ್ಚಳವಾಗಿದೆ.ಸೋಂಕಿನಿಂದ ಒಟ್ಟಾರೆ ಮೃತಪಟ್ಟವರ ಸಂಖ್ಯೆ 37,458ಕ್ಕೆ ಹೆಚ್ಚಳವಾಗಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿನ ಶೇಕಡವಾರು ಪ್ರಮಾಣ ಶೇ.0.64ಕ್ಕೆ ಇಳಿಕೆಯಾಗಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಶೇ .1.54 ಕ್ಕೆ ಏರಿಕೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಬುಧವರಾ ಕೊರೊನಾ ಹೊಸ ಸೋಂಕು ಏರಿಕೆಯಾಗಿದೆ. ಇಂದು 338 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು 5 ಮಂದಿ ಮೃತಪಟ್ಡಿದ್ದಾರೆ. ಇದೇವೇಳೆ 277 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಚಿಕ್ಕಮಗಳೂರು- 51, ದಕ್ಷಿಣ ಕನ್ನಡ -200, ಮೈಸೂರು -64, ಶಿವಮೊಗ್ಗ – 55, ಹಾಗೂ ಉಡುಪಿ – 133 ಜನರಿಗೆ ಹೊಸದಾಗಿಸೋಂಕುತಗುಲಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement