ವಿಜಯಪುರ | ಹಲವೆಡೆ ಕಂಪಿಸಿದ ಭೂಮಿ ; ಭಾರೀ ಸದ್ದಿಗೆ ಬೆಚ್ಚಿಬಿದ್ದ ಜನ

ವಿಜಯಪುರ: ವಿಜಯಪುರ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಭೂಕಂಪನ(Earthquake)ದ ಅನುಭವವಾಗಿದೆ ಎಂದು ವರದಿಯಾಗಿದೆ. ತಿಕೋಟ (Tikota) ತಾಲೂಕು ಹಾಗೂ ವಿಜಯಪುರ (Vijayapura) ತಾಲೂಕಿನ ಹಲವೆಡೆ ಶುಕ್ರವಾರ ರಾತ್ರಿ 10ರ ಸುಮಾರಿಗೆ ಭೂಕಂಪನ ಅನುಭವ ಆಗಿದೆ. ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದ್ದರಿಂದ ಜನರು ಭಯಭೀತರಾಗಿ ಹೊರಗೆ ಓಡಿಬಂದಿದ್ದಾರೆ ಎಂದು ಹೇಳಲಾಗಿದೆ. ವಿಜಯಪುರ ಗ್ರಾಮೀಣ ಭಾಗದ 12 ಕಿ.ಮೀ ಸುತ್ತ ಮುತ್ತ ಭೂಕಂಪನದ ಅನುಭವ ಆಗಿದ್ದು, ಹೊನ್ನೂಟಗಿ, ಕವಲಗಿ, ಕಗ್ಗೋಡ, ಮಧಬಾವಿ, ದ್ಯಾಬೇರಿ ಭಾಗಗಳು ಸೇರಿದಂತೆ, ತಿಕೋಟ ತಾಲೂಕಿನ ಹಲವೆಡೆ ಭೂಮಿ ಕಂಪಿಸಿದೆ ಎಂದು ಹೇಳಲಾಗಿದೆ.
ಕಳೆದ ತಿಂಗಳು ಸಿಂದಗಿ ತಾಲೂಕಿನ ಕೆಲವಡೆ ಭೂಮಿ ಕಂಪಿಸಿದ ಅನುಭವವಾಗಿತ್ತು. ಈಗ ಮತ್ತೆ ಈ ಅನುಭವವಾಗಿದ್ದರಿಂದ ಜನರು ಭಯಭೀತರಾಗಿದ್ದಾರೆ.

 

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

ನಿಮ್ಮ ಕಾಮೆಂಟ್ ಬರೆಯಿರಿ

advertisement