ನೀರು ಚಿಮ್ಮಿಸುವ ಮೂಲಕ ಪಕ್ಷಿಗೆ ಕೀಟಲೆ ಮಾಡಿದ ಮರಿಯಾನೆ- ಪ್ರತಿಯಾಗಿ ದಾಳಿ ಮಾಡಿ ಆನೆ ಕುಣಿಯುವಂತೆ ಮಾಡಿದ ಪಕ್ಷಿ | ವೀಕ್ಷಿಸಿ

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವೊಂದು ಹರಿದಾಡುತ್ತಿದ್ದು, ಇದು ಕೇವಲ ವೀಕ್ಷಿಸಲು ಮನರಂಜನೆ ನೀಡುವುದಲ್ಲದೆ ಎಲ್ಲರಿಗೂ ಒಳ್ಳೆಯ ಪಾಠವನ್ನೂ ನೀಡುವಂತಿದೆ. ಈ ವೀಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಯಾರನ್ನಾದರೂ ಚಿಕ್ಕವರೆಂದು ಪರಿಗಣಿಸಿ ಕೀಟಲೆ ಮಾಡುವುದು ಮೂರ್ಖತನ. ಏಕೆಂದರೆ ಸಣ್ಣ ಹಕ್ಕಿ ಕೂಡ ಆನೆ ನೃತ್ಯ ಮಾಡುವಂತೆ ಮಾಡುತ್ತದೆ ಎಂದು ಅವರು ಅದಕ್ಕೆ ಶೀರ್ಷಿಕೆ ಬರೆದಿದ್ದಾರೆ.

ಮರಿ ಆನೆಯೊಂದು ನೀರಿನಲ್ಲಿ ತನ್ನಷ್ಟಕ್ಕೆ ತಾನಿದ್ದ ಹಕ್ಕಿಗೆ ನೀರು ಚಿಮುಕಿಸಿ ತುಂಟತನದಿಂದ ವರ್ತಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಆನೆಯು ತಮಾಷೆಯಾಗಿ ಹಕ್ಕಿಯ ಮೇಲೆ ಕೆಲವು ಬಾರಿ ಸ್ವಲ್ಪ ನೀರನ್ನು ಚಿಮ್ಮಿಸುತ್ತದೆ. ಅದು ಪಕ್ಷಿಯನ್ನು ಕೆರಳಿಸುತ್ತದೆ.

ಕೋಪಗೊಂಡ ಹಕ್ಕಿ ನಂತರ ಆನೆಗೆ ಪಾಠ ಕಲಿಸಲು ನೀರಿನಿಂದ ಮೇಲೆ ಹಾರಿ ಆನೆಯ ಬೆನ್ನಿನ ಮೇಲೆ ಹತ್ತಿ ಅದನ್ನು ಚುಚ್ಚುತ್ತದೆ ಮತ್ತು ಆನೆಯು ಪಕ್ಷಿಯನ್ನು ಬೆನ್ನಿನಿಂದ ಇಳಿಸಲು ಉದ್ರಿಕ್ತವಾಗಿ ಓಡುತ್ತದೆ. ನಂತರ ಇಬ್ಬರೂ ಜಗಳಕ್ಕೆ ನಿಲ್ಲುತ್ತಾರೆ. ಒಬ್ಬರೊಗೊಬ್ಬರು ಹಿಂದಕ್ಕೆ ಮತ್ತು ಮುಂದಕ್ಕೆ ಓಡುತ್ತ ಆಕ್ರಮಣ ಮಾಡುತ್ತಲೇ ಇರುತ್ತಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವಿರುದ್ಧ 2ನೇ ಎಫ್ ಐ ಆರ್ ದಾಖಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement