ಯಾವುದೇ ವಿಶೇಷ ಪ್ರೋತ್ಸಾಹದಾಯಕ ಯೋಜನೆಗಳಿಲ್ಲದ ಅತ್ಯಂತ ನಿರಾಶದಾಯಕ ಬಜೆಟ್ : ವಸಂತ ಲದವಾ

ಹುಬ್ಬಳ್ಳಿ : ಕೇಂದ್ರ ಸರ್ಕಾರ ಇಂದು, ಗುರುವಾರ ಮಂಡಿಸಿದ ಕೇಂದ್ರ ಮುಂಗಡಪತ್ರ ಯಾವುದೇ ವಿಶೇಷ ಅಭಿವೃದ್ಧಿ ಉದ್ಯೋಗ ಸೃಷ್ಟಿ, ಉತ್ಪಾದನಾ ಕ್ಷೇತ್ರ, ರ‍ಆರ್ಥಿಕ ಹಾಗೂ ಕೃಷಿ ವಲಯಗಳಿಗೆ ಉತ್ತೇಜನ ಮತ್ತು ಪ್ರೋತ್ಸಾಹವಿಲ್ಲದೆ ನಿರಾಶದಾಯ ಬಜೆಟ್ ಆಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ವಸಂತ ಲದವಾ ಪ್ರತಿಕ್ರಯಿಸಿದ್ದಾರೆ.
೨೦೧೪ ರಲ್ಲಿದ್ದ ೫೬ ಲಕ್ಷ ಕೋಟಿ ರೂ.ಸಾಲ ೨೦೨೪ ರಲ್ಲಿ ೨೦೫ ಲಕ್ಷ ಕೋಟಿ ರೂ. ಆಗಿದೆ. ಮಾರ್ಚ್‌ ೨೦೨೩ ರಿಂದ ಡಿಸೆಂಬರ್ ೨೦೨೩ರ ಕೇವಲ ಒಂಬತ್ತು ತಿಂಗಳ ಅವಧಿಯಲ್ಲಿ ಸುಮಾರು ೫೬ ಲಕ್ಷ ಕೋಟಿ ಸಾಲ ಮಾಡಲಾಗಿದೆ ಎಂದು ವರದಿ ಮಾಡಿವೆ. ೨೦೧೪ ರಲ್ಲಿ ಪ್ರತಿ ಭಾರತೀಯನ ಮೇಲೆ ಇದ್ದ ಸಾಲ ೪೩,೧೩೪ ರಿಂದ ೨೦೨೪ ಜನವರಿಗೆ ೧,೦೯,೩೭೩ ೦ ರೂ.ಗಳಿಗೆ ತಲುಪಿದೆ ಎಂದು ಹೇಳಿದ್ದಾರೆ.

೨೦೨೩-೨೪ ರ ಮುಂಗಡ ಪತ್ರದ ಒಟ್ಟು ಆದಾಯ ೨೭.೨೦ ಲಕ್ಷ ಕೋಟಿ ರೂ.ಗಳಾಗಿದ್ದರೆ ಒಟ್ಟು ವಿತ್ತೀಯ ಕೊರತೆ ಸುಮಾರು ೧೭.೨೦ ಲಕ್ಷ ಕೋಟಿ ರೂ. ಇದೆ ಎಂದು ವರದಿಯಾಗಿದೆ. ೨೦೧೯-೨೦ ರಲ್ಲಿ ೯.೩೦ ಲಕ್ಷ ಕೋಟಿ ರೂ.ಇದ್ದ ಸಾಲ ೨೦೨೦-೨೧ರಲ್ಲಿ ೧೮.೪೦ ಲಕ್ಷ ಕೋಟಿ ರೂ., ೨೦೨೧-೨೨ ೦ . ೧೫ ಕೋಟಿ ರೂ., ೨೦೨೨-೨೩ರಲ್ಲಿ .೧೬.೬೦ ಲಕ್ಷ ಕೋಟಿ ರೂ. ಹಾಗೂ ೨೦೨೩-೨೪ರಲ್ಲಿ ೧೭.೮೦ ಲಕ್ಷ ಕೋಟಿ ರೂ.ಗಳಿಗೆ ಏರಿದೆ.
ಜಿಎಸ್ಟಿ ಜಾರಿ ಆದಾಗಿನಿಂದ ಬಹುತೇಕ ರಾಜ್ಯಗಳ ಆದಾಯ ಕಡಿಮೆಯಾಗಿದೆ. ಹಣಕಾಸು ಆಯೋಗದ ನಿಯಮಗಳ ಅನುಸಾರ ನಿಯಮಿತ ಮತ್ತು ಪೂರಕ ಹಣಕಾಸಿನ ಪಾಲು ನರ‍್ದಿಷ್ಟವಾಗಿ ರಾಜ್ಯಗಳಿಗೆ ದೊರಕುತ್ತಿಲ್ಲ. ಕೇಂದ್ರದ ಸಾಲ, ಮುಂಗಡ ಸಾಲ, ಸರ್ಕಾರ ಮರುಪಾವತಿಸುವ ಒಟ್ಟು ಸಾಲ ಮತ್ತು ಬಡ್ಡಿಗಳ ವಿವರಣೆ ಮುಂಗಡಪತ್ರದಲ್ಲಿ ಸ್ಪಷ್ಟವಾಗಿಲ್ಲ. ಹಣಕಾಸು ಆಯೋಗ ಮತ್ತು ನಿಯಮಗಳ ಪ್ರಕಾರ ತೆರಿಗೆ ಆದಾಯಗಳ ಮೇಲೆ ರಾಜ್ಯಗಳಿಗೆ ನಿಯಮಿತ ಪಾಲು ಕೊಡಬೇಕಾಗುತ್ತದೆ ಆದರೆ ಸೆಸ್ ಮತ್ತು ಸರ್ಚಾರ್ಜ್‌ ಗಳ ಮೇಲೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಪಾಲು ಕೊಡಬೇಕಾಗಿಲ್ಲ ಆದ್ದರಿಂದ ಕೇಂದ್ರ ಸರ್ಕಾರ ತೆರಿಗೆಗಳ ಹೇರಿಕೆ ಕಡಿಮೆ ಮಾಡಿ ಸೆಸ್ ಮತ್ತು ಸರ್ಚಾರ್ಜ್‌ ವಿಧಿಸುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ರಾಜ್ಯಗಳಿಗೆ ಅವುಗಳ ಪಾಲು ಕೊಡದೆ ರಾಜ್ಯಗಳ ಆರ್ಥಿಕ ಪರಿಸ್ಥಿತಿಗೆ ಅಡಚಣೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement