ಅಮಿತ್‌ ಶಾ ಸೂಚನೆ ನಂತರ ಬೆಳಗಾವಿಯಲ್ಲಿ ಮಹಾಮೇಳಾವ ಆಯೋಜನೆ ಮಾಡುತ್ತದೆಯೇ ಎಂಇಎಸ್‌..?

ಬೆಳಗಾವಿ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನವರೆಗೆ ಕಾಯುವಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮಹಾಮೇಳಾವ ಆಯೋಜಿಸಲು ಮುಂದಾಗಿದೆ ಎನ್ನಲಾಗಿದೆ. ಆದರೆ ಗೊಲದಲವೂ ಇದೆ..
ಬೆಳಗಾವಿಯಲ್ಲಿ ವಿಧಾನಸಭೆಯ ಚಳಿಗಾಲದ ಅಧಿವೇಶನದ ವೇಳೆ ಎಂಇಎಸ್‌ ಮಹಾಮೇಳಾವ ಸಂಘಟಿಸುತ್ತ ಬಂದಿದ್ದು, ಅದರಲ್ಲಿ ಕರ್ನಾಟಕದ ಬೆಳಗಾವಿ ಸುತ್ತಮುತ್ತಲಿನ ಹಲವಾರು ಪ್ರದೇಶಗಳನ್ನು ಮಹಾರಾಷ್ಟ್ರದ ಜೊತೆಗೆ ವಿಲೀನ ಮಾಡುವಂತೆ ಒತ್ತಾಯಿಸುತ್ತದೆ. ಅದರಂತೆ ಈ ವರ್ಷವೂ ಡಿಸೆಂಬರ್‌ ೧೯ರಿಂದ ಆರಂಭವಾಗಲಿರುವ ಬೆಳಗಾವಿ ಅಧಿವೇಶನದ ವೇಳೆ ಮಹಾಮೇಳಾವ ಆಯೋಜನೆ ಮುಂದಾಗಿದೆ ಎಂದು ಹೇಳಲಾಗಿದೆ.
ಆದರೆ, ರಾಜ್ಯ ಸರ್ಕಾರವು ಟಿಳಕವಾಡಿಯ ವ್ಯಾಕ್ಸಿನ್ ಡಿಪೋದಲ್ಲಿ ನಡೆಸಲು ಉದ್ದೇಶಿಸಿರುವ ಎಂಇಎಸ್‌ಗೆ ಸಮಾನಾಂತರ ಅಧಿವೇಶನ ನಡೆಸಲು ಇನ್ನೂ ಅನುಮತಿ ನೀಡಿಲ್ಲ. ಮಹಾರಾಷ್ಟ್ರದ ಪ್ರಮುಖರ ಹಾಜರಾತಿಯನ್ನು ಲೆಕ್ಕಿಸದೆ ಅಧಿವೇಶನ ನಡೆಸುತ್ತೇವೆ ಎಂದು ಎಂಇಎಸ್ ಮುಖಂಡರು ಹೇಳುತ್ತಿದ್ದಾರೆ. ಆದರೆ ಸರ್ಕಾರ ಅದಕ್ಕೆ ಅನುಮತಿ ನೀಡುವುದರ ಬಗ್ಗೆ ಅನುಮಾನವಿದೆ. ಒಂದು ವೇಳೆ ಎಂಇಎಸ್‌ ಮಹಾಮೇಳಾವ ಆಯೋಜಿಸಿದರೆ ಅದಕ್ಕೆ ಮಹಾರಾಷ್ಟ್ರದ ನಾಯಕರು ಆಗಮಿಸುತ್ತಾರೆಯೇ ಎಂಬುದರ ಬಗ್ಗೆಯೂ ಪ್ರಶ್ನಾರ್ಥಕ ಚಿನ್ಹೆ ಮೂಡಿದೆ. ಆದರೆ ಗೊಂದಲಗಳ ನಡುವೆ ಎಂಇಎಸ್‌ನಲ್ಲಿ ಕೆಲವರು ಆಯೋಜನೆ ಮಾಡುವುದಾಗಿ ಹೇಳುತ್ತಿದ್ದಾರೆ.

ಪ್ರಮುಖ ಸುದ್ದಿ :-   ಜಾತ್ರೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ ಜಾರಕಿಹೊಳಿ ಪುತ್ರ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement