ಮರೆತು ಹೋದ ಸ್ಥಳೀಯ ಸ್ವಾತಂತ್ರ್ಯ ಸೇನಾನಿಗಳ ಸ್ಮರಿಸಬೇಕು: ಡಾ. ಅಜಿತ ಪ್ರಸಾದ

ಧಾರವಾಡ: ಆಜಾದಿ ಕಾ ಅಮೃತ ಮಹೊತ್ಸವ ಅಂಗವಾಗಿ ಸ್ಥಳಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಹಾಗೂ ಸ್ಥಳಿಯಯ ಪ್ರಾದೇಶಿಕ ಪತ್ರಾಗಾರ ಇಲಾಖೆ ಸಂಯೋಗದೂಂದಿಗೆ ಹಳೆಯ ದಾಖಲೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾಚಾರ್ಯ ಡಾ. ಅಜಿತ ಪ್ರಸಾದ ವಿದ್ಯಾರ್ಥಿಗಳಿಗೆ ಭಾರತದ ಸ್ವಾತಂತ್ರ್ಯ ಹೊರಾಟದ ಸಂಕ್ಷಿಪ್ತ ಪರಿಚಯವನ್ನು ನೀಡಿದರು.
ಸ್ವಾತಂತ್ರ್ಯ ಸಂಗ್ರಾಮದ ಪ್ರಧಾನ ನಾಯಕರಾದ ಗಾಂಧೀಜಿ, ವಲ್ಲಭಾಯಿ ಪಟೇಲ, ಸರೋಜಿನಿ ನಾಯ್ಡು, ಗೋಪಾಲ ಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕ್ ಮುಂತಾದ ನಾಯಕರ ಕೂಡ ಸ್ಥಳೀಯ ನಾಯಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು, ಆದರೆ ಇವತ್ತು ಸ್ಥಳೀಯ ನಾಯಕರ ಬಗ್ಗೆ ಹೆಚ್ಚಿನ ದಾಖಲಾತಿಗಳು ಲಭ್ಯವಿಲ್ಲ. ಅಂತಹ ನಾಯಕರನ್ನು ಗುರುತಿಸಿ ಅವರನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕು. ಉದಾಹರಣೆಗೆ ಮಂಗಲ ಪಾಂಡೆ, ತಾತ್ಯಾಟೊಪಿ, ಗಂಗಾಧರ ರಾವ್‌ ದೇಶಪಾಂಡೆ, ಎಂ.ಪಿ. ನಾಡಕರ್ಣಿ ಅಲ್ಲದೆ ಅನೇಕ ಎಲೆಮರೆಯಲ್ಲಿ ಉಳಿದುಕೊಂಡ ನಾಯಕರನ್ನು ಬೆಳಕಿಗೆ ತರಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಪತ್ರಾಗಾರ ಇಲಾಖೆ ಇಂಥವರ ಬಗ್ಗೆ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿದೆ. ಇನ್ನು ಅನೇಕ ವೀರರ ಬಗ್ಗೆ ದಾಖಲೆಗಳು ಸಂಗ್ರಹಣೆ ಆಗಬೇಕೆಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಪತ್ರಾಗಾರ ಇಲಾಖೆ ನಿರ್ದೆಶಕರಾದ ಮಂಜುಳಾ ಯಲಿಗಾರ ಮಾತನಾಡಿ, ಸ್ಥಳೀಯ ಪ್ರಾದೇಶಿಕ ಪತ್ರಾಗಾರ ಇಲಾಖೆ ಧಾರವಾಡದಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಿದೆ. ವಿಶೇಷವಾಗಿ ಧಾರವಾಡಕ್ಕೆ ಸಂಬಂಧಪಟ್ಟಂತಹ ದಾಖಲೆಗಳನ್ನು ಸಂಗ್ರಹಿಸಿದ್ದರೆ ಉದಾಹರಣೆ- ಧಾರವಾಡಕ್ಕೆ ಸುಭಾಸ ಚಂದ್ರಭೋಸ ಅವರ ಭೇಟಿ, ಗಾಂಧೀಜಿ ಅವರ ಆಗಮನ, ೧೯೨೪ ಬೆಳಗಾವಿ ಅಧಿವೇಶನದ ಭಾವಚಿತ್ರಗಳನ್ನು ಕೂಡಿಹಾಕಿದ್ದಾರೆ. ಜನರು ತಮ್ಮ ಬಳಿ ಇದ್ದ ಹಳೆ ದಾಖಲಾತಿಗಳು ಪತ್ರಗಳು, ಕಂದಾಯ ದಾಖಲೆಗಳು, ಕರ ಪತ್ರಗಳು, ಭಾವಚಿತ್ರಗಳನ್ನು, ದಿನ ಪತ್ರಿಕೆಗಳು ಮುಂತಾದವುಗಳನ್ನು ನಾಶಮಾಡದೆ ಅವುಗಳ ಐತಿಹಾಸಿಕ ಮಹತ್ವಗಳನ್ನು ತಿಳಿದುಕೊಂಡು ನಮ್ಮ ಕಚೇರಿಗೆ ಒಪ್ಪಿಸಿದರೆ ಅವುಗಳನ್ನು ಸಂರಕ್ಷಿಲಾಗುತ್ತದೆ ಎಂದರು.
ಡಾ. ಇಂದು ಪಂಡಿತ, ಡಾ. ಸೂರಜ್ ಜೈನ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಡಾ. ಆರ್. ವಿ. ಚಿಟಗುಪ್ಪಿ ಸ್ವಾಗತಿಸಿದರು ಮತ್ತು ಪ್ರವಿಣ ಕರೊಳಹಳ್ಳಿ ವಂದಿಸಿದರು

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement