ಕೇಂದ್ರ ಸರ್ಕಾರ ಅಧೀನದ ವಿವಿಧ ಭದ್ರತಾ ಪಡೆಗಳಿಗೆ ಜೆನೆರಲ್ ಡ್ಯೂಟಿ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು, ಸಿಬ್ಬಂದಿ ನೇಮಕಾತಿ ಆಯೋಗ (SSC) ಪರಿಷ್ಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, 26,146 ಜಿಡಿ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸಿಬ್ಬಂದಿ ನೇಮಕಾತಿ ಆಯೋಗ (SSC) ಕಾನ್ಸ್ಟೇಬಲ್ (ಜೆನೆರಲ್ ಡ್ಯೂಟಿ ) ಹುದ್ದೆಗಳನ್ನು ಸಿಎಪಿಎಫ್, ಎನ್ಐಎ, ಎಸ್ಎಸ್ಎಫ್ ಮತ್ತು ರೈಫಲ್ಮೆನ್ (ಜಿಡಿ), ಅಸ್ಸಾಂ ರೈಫಲ್ಸ್ ಗಳಲ್ಲಿ ಭರ್ತಿ ಮಾಡುತ್ತದೆ.
ಎಸ್ಎಸ್ಸಿ ಕಾನ್ಸ್ಟೇಬಲ್ ಹುದ್ದೆಗಳ ವಿವರ
ಗಡಿ ಭದ್ರತಾ ಪಡೆ : 6174
ಕೇಂದ್ರ ಮೀಸಲು ಪೊಲೀಸ್ ಪಡೆ : 3337
ಕೇಂದ್ರ ಕೈಗಾರಿಕಾ ಭದ್ರತಾ ಪಡೆ : 11025
ಸಶಸ್ತ್ರ ಸೀಮಾ ಬಲ : 635
ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ : 3189
ಅಸ್ಸಾಂ ರೈಫಲ್ಸ್ : 1490
ಸೆಕ್ರೇಟರಿಯಟ್ ಸೆಕ್ಯೂರಿಟಿ ಫೋರ್ಸ್ : 296
ಒಟ್ಟು ಹುದ್ದೆಗಳ ಸಂಖ್ಯೆ : 26,146
ಮಹತ್ವದ ದಿನಾಂಕಗಳು….
ಅರ್ಜಿ ಸಲ್ಲಿಸಲು ಆರಂಭ : 24-11-2023
ಅರ್ಜಿ ಸಲ್ಲಿಸಲು ಕೊನೆ ದಿನ : 31-12-2023 ರ ರಾತ್ರಿ 11 ಗಂಟೆ ವರೆಗೆ.
ಆನ್ಲೈನ್ ಮೂಲಕ ಅಪ್ಲಿಕೇಶನ್ ಶುಲ್ಕ ಪಾವತಿಸಲು ಕೊನೆ ದಿನಾಂಕ : 01-01-2024 ರ ರಾತ್ರಿ 11 ಗಂಟೆವರೆಗೆ.
ಟೈರ್-1 ಸಿಬಿಟಿ ಪರೀಕ್ಷೆ ದಿನಾಂಕ: ಫೆಬ್ರವರಿ/ ಮಾರ್ಚ್ 2024
ವಿದ್ಯಾರ್ಹತೆ: 10ನೇ ತರಗತಿ ಅಥವಾ ತತ್ಸಮಾನ ತರಗತಿ ಉತ್ತೀರ್ಣ
ವಯೋಮಿತಿ : ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 23 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಅಪ್ಲಿಕೇಶನ್ ಶುಲ್ಕ ವಿವರ:
ಸಾಮಾನ್ಯ ವರ್ಗ/ ಇತರೆ ಹಿಂದುಳಿದ ಕೆಟಗರಿ ಅಭ್ಯರ್ಥಿಗಳಿಗೆ 100 ರೂ. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಅರ್ಜಿ ಶುಲ್ಕವನ್ನು ನೆಟ್ಬ್ಯಾಂಕಿಂಗ್, ಎಸ್ಬಿಐ ಚಲನ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು.
ಸಿಬ್ಬಂದಿ ನೇಮಕಾತಿ ಆಯೋಗದ ವೆಬ್ಸೈಟ್ ವಿಳಾಸ : https://ssc.nic.in
ಸ್ಟಾಫ್ ಸೆಲೆಕ್ಷನ್ ಕಮಿಶನ್ ಅಧಿಸೂಚನೆ ನೋಡಲು ssc-gd-notification-pdf ಇಲ್ಲಿ ಕ್ಲಿಕ್ ಮಾಡಬಹುದು.
ನೇಮಕಾತಿ ವಿಧಾನ : ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ೦, ಪಿಎಸ್ಟಿ, ಪಿಇಟಿ, ದಾಖಲೆಗಳ ಪರಿಶೀಲನೆ, ಮೆಡಿಕಲ್ ಟೆಸ್ಟ್ ಆಯ್ಕೆ ಪ್ರಕ್ರಿಯೆಯಲ್ಲಿ ಇರುತ್ತವೆ.
ಉದ್ಯೋಗ ಸ್ಥಳ : ವಿಳಾಸ ದೇಶದಾದ್ಯಂತ ವಿವಿಧ ಸ್ಥಳಗಳು
ನಿಮ್ಮ ಕಾಮೆಂಟ್ ಬರೆಯಿರಿ