ತಲೆಗೆ ₹ 21,000 ಬಹುಮಾನ‌ ಘೋಷಿಸಿದ್ದ ‘ಮೋಸ್ಟ್ ವಾಂಟೆಡ್’ ಕೋತಿ ಕೊನೆಗೂ ಸೆರೆ

ಭೋಪಾಲ್: ತನ್ನ ತಲೆಗೆ ₹ 21,000 ಬಹುಮಾನ ಹೊತ್ತಿದ್ದ ಕೋತಿಯೊಂದು ಕೊನೆಗೂ ಸೆರೆ ಸಿಕ್ಕಿದೆ. ಮಧ್ಯಪ್ರದೇಶದ ರಾಜ್‌ಗಢ ಪಟ್ಟಣದಲ್ಲಿ ಎರಡು ವಾರಗಳಲ್ಲಿ 20 ಜನರ ಮೇಲೆ ದಾಳಿ ನಡೆಸಿ ಭಯವನ್ನುಂಟು ಮಾಡಿದ್ದ ಕೋತಿಯನ್ನು ಹಿಡಿಯಲಾಗಿದೆ.
ಬುಧವಾರ (ಜೂನ್‌ 21) ಸಂಜೆ, ಉಜ್ಜಯಿನಿಯಿಂದ ಕರೆಸಲಾಗಿದ್ದ ವಿಶೇಷ ತಂಡವು ಸ್ಥಳೀಯ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಸೇರಿ ʼಉಗ್ರʼ ಕೋತಿಯನ್ನು ಸೆರೆ ಹಿಡಿದಿದೆ. ಕೋತಿಯನ್ನು ಪತ್ತೆ ಮಾಡಲು ಡ್ರೋನ್ ಬಳಸಿದ ತಂಡ, ಡಾರ್ಟ್‌ಗಳನ್ನು ಬಳಸಿ ಅದನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾಯಿತು ಮತ್ತು ನಂತರ ಅದನ್ನು ಪಂಜರದಲ್ಲಿ ಬಂಧಿಸಿತು.
ಕೋತಿ ದಾಳಿ ನಡೆಸಿದ 20 ಜನರ ಪೈಕಿ ಎಂಟು ಮಕ್ಕಳೂ ಸೇರಿದ್ದಾರೆ. ಕೋತಿ, ಛಾವಣಿಗಳು ಮತ್ತು ಕಿಟಕಿಯ ಸರಳುಗಳ ಮೇಲೆ ಕುಳಿತು ಇದ್ದಕ್ಕಿದ್ದಂತೆ ಜನರ ಮೇಲೆ ದಾಳಿ ಮಾಡುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಅನೇಕರಿಗೆ ಆಳವಾದ ಗಾಯಗಳಾಗಿವೆ.
ಆ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಮಂಗನ ಕೃತ್ಯ ಸೆರೆಯಾಗಿದೆ. ವಯೋವೃದ್ಧರೊಬ್ಬರ ಮೇಲೆ ಕೋತಿ ದಾಳಿ ಮಾಡಿ ಅವರನ್ನು ನೆಲಕ್ಕೆ ಕೆಡಹಿ ಎಳೆದುಕೊಂಡು ಹೋಗುತ್ತಿರುವ ದೃಶ್ಯಾವಳಿಗಳು ಕಂಡುಬಂದಿವೆ. ಮತ್ತೊಂದು ಘಟನೆಯಲ್ಲಿ ಕ್ಷಣಾರ್ಧದಲ್ಲಿ ನಡೆದ ದಾಳಿಯು ವ್ಯಕ್ತಿಯ ತೊಡೆಯ ಮೇಲೆ ಆಳವಾದ ಗಾಯ ಮಾಡಿತು.

ಪ್ರಮುಖ ಸುದ್ದಿ :-   ಕೋವಿಡ್ ಲಸಿಕೆಗಳಿಗೂ ಹೃದಯಾಘಾತದ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ; ತಳ್ಳಿಹಾಕಿದ ಏಮ್ಸ್ ವೈದ್ಯರು

ಈ ಕುಖ್ಯಾತ ʼದಾಳಿಕೋರʼನನ್ನು ಹಿಡಿಯಲು ಪುನರಾವರ್ತಿತ ಪ್ರಯತ್ನಗಳು ವಿಫಲವಾದ ನಂತರ, ಸ್ಥಳೀಯ ಅಧಿಕಾರಿಗಳು ₹ 21,000 ನಗದು ಬಹುಮಾನವನ್ನು ಘೋಷಿಸಿದರು ಮತ್ತು ವಿಶೇಷ ರಕ್ಷಣಾ ತಂಡವನ್ನು ಸಹ ಕರೆಸಿದರು. ಕೋತಿಯನ್ನು ಹಿಡಿಯಲು 4 ಗಂಟೆಗಳ ಕಾಲ ಹರಸಾಹಸ ಪಡಬೇಕಾಯಿತು.
ಕೋತಿಯನ್ನು ಹಿಡಿದಿದ್ದಕ್ಕೆ ₹ 21 ಸಾವಿರ ನಗದು ಬಹುಮಾನ ನೀಡುವುದಾಗಿ ಹೇಳಿದ್ದೆವು, ಈಗ ಪ್ರಾಣಿ ರಕ್ಷಣಾ ತಂಡಕ್ಕೆ ನೀಡಲಾಗುತ್ತದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.

ರಾಜ್‌ಗಢ್‌ನಲ್ಲಿ ಸ್ಥಳೀಯ ತಂಡ ಕಳೆದ ಎರಡು ವಾರಗಳಿಂದ ಕೋತಿಯನ್ನು ಹಿಡಿಯಲು ಪ್ರಯತ್ನಿಸಿದರೂ ಯಶಸ್ವಿಯಾಗಿರಲಿಲ್ಲ ಎಂದು ಅರಣ್ಯಾಧಿಕಾರಿ ಗೌರವ್ ಗುಪ್ತಾ ಹೇಳಿದ್ದಾರೆ. “ನಾವು ಹಲವಾರು ಜಿಲ್ಲೆಗಳಲ್ಲಿ ವಿಶೇಷ ತಂಡಗಳನ್ನು ಸಂಪರ್ಕಿಸಿದ್ದೇವೆ. ಉಜ್ಜಯಿನಿ ತಂಡವು ಲಭ್ಯವಾದ ತಕ್ಷಣ ಅವರು ರಾಜ್‌ಗಢಕ್ಕೆ ಧಾವಿಸಿದರು ಮತ್ತು ನಾಲ್ಕು ಗಂಟೆಗಳ ಕಾರ್ಯಾಚರಣೆಯ ನಂತರ ನಾವು ಕೋತಿಯನ್ನು ಹಿಡಿಯಲಾಯಿತು ಎಂದು ತಿಳಿಸಿದರು. ಸೆರೆಹಿಡಿಯಲಾದ ಕೋತಿಯನ್ನು ದಟ್ಟವಾದ ಅರಣ್ಯ ಪ್ರದೇಶದಲ್ಲಿ ಬಿಡಲಾಗುತ್ತದೆ. ಇದರಿಂದ ಅದು ಜನರಿಗೆ ಹಾನಿಯಾಗುವುದಿಲ್ಲ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ...| "ನಮಗೆ ಪ್ರತಿಕ್ರಿಯಿಸಲು 30-45 ಸೆಕೆಂಡುಗಳು ಮಾತ್ರ ಸಮಯ ಇತ್ತು": ಭಾರತದ ಬ್ರಹ್ಮೋಸ್ ಕ್ಷಿಪಣಿ ದಾಳಿ ಬಗ್ಗೆ ಪಾಕ್ ಪ್ರಧಾನಿ ಸಲಹೆಗಾರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement