ಜಮ್ಮು-ಕಾಶ್ಮೀರ: ಮೇಘಸ್ಫೋಟಕ್ಕೆ ಒಂದೇ ಕುಟುಂಬದ ನಾಲ್ವರು ಸಾವು, ಒಬ್ಬ ನಾಪತ್ತೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ದಾಂಗಿವಚದಲ್ಲಿ ಮೇಘಸ್ಫೋಟ (Cloudburst)ವಾದ ಪರಿಣಾಮ ‘ಬಕರ್ವಾಲ್’ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಮತ್ತೊಬ್ಬ ನಾಪತ್ತೆಯಾಗಿದ್ದು, ಪೊಲೀಸರು ಮತ್ತು ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.
ಬಾರಾಮುಲ್ಲಾ ಜಿಲ್ಲೆಯ ರಫಿಯಾಬಾದ್ ಪ್ರದೇಶದ ಕಫರ್ನಾರ್ ಹುಲ್ಲುಗಾವಲಿನಲ್ಲಿ ಬಕರ್ವಾಲ್ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ಒಬ್ಬರು ಜೀವಂತವಾಗಿ ಪತ್ತೆಯಾಗಿದ್ದು, ಇನ್ನೊಬ್ಬರು ಕಾಣೆಯಾಗಿದ್ದಾರೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುಟುಂಬವು ರಜೌರಿ ಜಿಲ್ಲೆಯ ಹಾಜಿ ಬಷೀರ್ ಅಹ್ಮದ್ ಖಾರಿಗೆ ಸೇರಿದೆ. ಮೇಘಸ್ಫೋಟದಿಂದ ಕುಟುಂಬವೇ ನಾಶವಾಗಿ ಹೋಗಿದೆ. ‘ಕಾಣೆಯಾದ ವ್ಯಕ್ತಿಯನ್ನು ರಕ್ಷಣಾ ತಂಡಗಳು ಹುಡುಕುತ್ತಿದ್ದು, ಅವಶೇಷಗಳ ಅಡಿಯಲ್ಲಿ ಹೂತು ಹೋಗಿರುವ ಸಾಧ್ಯತೆಯೂ ಇದೆ ಎಂಬ ಆತಂಕವೂ ಇದೆ ಎಂದು ಉತ್ತರ ಕಾಶ್ಮೀರ ಉಪ ಇನ್ಸ್ ಪೆಕ್ಟರ್ ಜನರಲ್ ಸುಜಿತ್ ಕುಮಾರ್ ತಿಳಿಸಿದ್ದಾರೆ.
ಇದೇ ವೇಳೆ, ರಾಜಸ್ಥಾನದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆಯಾಗಿದೆ. ಇದರಿಂದಾಗಿ ಹಲವೆಡೆ, ಪ್ರವಾಹದ ಸ್ಥಿತಿ ಉಂಟಾಗಿದೆ. ದೆಹಲಿಯಲ್ಲಿ 46 ವರ್ಷಗಳ ದಾಖಲೆ ಮಳೆಯಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement