ಮಂಡ್ಯ: ಮೇಲುಕೋಟೆಯಲ್ಲಿ ಮತ್ತೆ ತೆಲುಗು ಚಿತ್ರತಂಡ ಎಡವಟ್ಟಿಗೆ ಆಕ್ಷೇಪ ವ್ಯಕ್ತವಾಗಿದೆ. ಜಿಲ್ಲೆಯ ಪಾಂಡವಪುರ ತಾಲೂಕಿನ ವಿಶ್ವ ಪ್ರಸಿದ್ಧ ಮೇಲುಕೋಟೆಯ ರಾಜಗೋಪುರವನ್ನು ಬಾರ್ ರೀತಿಯಲ್ಲಿ ಪರಿವರ್ತಿಸಿ ಚಿತ್ರೀಕರಣ ನಡೆಸುತ್ತಿರುವುದಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.
ನಾಗ ಚೈತನ್ಯ ಅಭಿನಯದ 3 ನಾಟ್ 2 ಚಿತ್ರತಂಡ ಮೇಲುಕೋಟೆ ಪರಂಪರೆಗೆ ಧಕ್ಕೆಯಾಗುವಂತಹ ಸೆಟ್ ಹಾಕಿದೆ. ಅಲ್ಲಿ ವಿವಿಧ ಬ್ರ್ಯಾಂಡ್ಗಳ ಮದ್ಯದ ಬಾಟಲ್ಗಳಿಟ್ಟು ಚಿತ್ರೀಕರಣ ಮಾಡಿದ್ದು, ಪಾರಂಪರಿಕ ರಾಜಗೋಪುರದಲ್ಲಿ ಬಾರ್ ರೀತಿಯ ಸೆಟ್ ಹಾಕುವ ಮೂಲಕ ಜನರ ಭಾವನೆಗೆ ಧಕ್ಕೆಯನ್ನುಂಟು ಮಾಡಿದೆ ಎಂದು ಆರೋಪಿಸಲಾಗಿದೆ.
ಮಂಡ್ಯ ಡಿಸಿ 2 ದಿನಗಳ ಚಿತ್ರೀಕರಣಕ್ಕೆ ಷರತ್ತುಬದ್ಧ ಅನುಮತಿ ನೀಡಿದ್ದರು. ಆದರೆ ಆ ನಿಯಮಗಳನ್ನು ಸಂಪೂರ್ಣ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಹಿಂದೆಯೂ ಇದೇ ನಾಗಚೈತನ್ಯ ನಟನೆಯ ಸಿನಿಮಾ ಚಿತ್ರೀಕರಣ ವೇಳೆ ರಾಜಮುಡಿ ಉತ್ಸವಕ್ಕೆ ಅಡಚಣೆಯಾಗಿತ್ತು. ಅಕ್ಕ-ತಂಗಿ ಕೊಳದ ನೀರನ್ನು ಕಲುಷಿತ ಮಾಡಲಾಗಿತ್ತು. ಹೀಗಾಗಿ ಪರಭಾಷಿಕ ಚಿತ್ರಗಳ ಶೂಟಿಂಗ್ನಿಂದ ಮೇಲುಕೋಟೆ ಪರಂಪರೆಗೆ ಪದೇ, ಪದೇ ಧಕ್ಕೆ ಬರುತ್ತಿದೆ. ಮೇಲುಕೋಟೆಯಲ್ಲಿ ಶೂಟಿಂಗ್ಗೆ ಅನುಮತಿ ನೀಡದಿರಲು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ