ಮಳೆಹಾನಿ: ರಸ್ತೆಗಳ ದುರಸ್ತಿಗೆ ತುರ್ತಾಗಿ ೨೦೦ ಕೋಟಿ ರೂ. ಬಿಡುಗಡೆ ಮಾಡ್ತೇವೆ ಎಂದ ಸಿಎಂ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಒಟ್ಟೂ ೬೧೯ ಕಿ.ಮಿ. ಗ್ರಾಮೀಣ ರಸ್ತೆ ಹಾನಿಯಾಗಿದ್ದರಿಂದ ಜನರು ತೀವ್ರ ತೊಂದರೆಯಲ್ಲಿದ್ದಾರೆ. ಈ ರಸ್ತೆಗಳ ದುರಸ್ತಿಗೆ ತುರ್ತಾಗಿ ೨೦೦ ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ-ಅಂಕೋಲಾದಲ್ಲಿ ನೆರೆ ಹಾವಳಿಯಿಂದ ಹಾನಿಗೊಂಡ ಪ್ರದೇಶನ್ನು ವೀಕ್ಷಣೆ ಮಾಡಿದ ಬಳಿಕ ಅಂಕೋಲಾ ತಾಲೂಕಿನ ನಾಡವರ ಸಭಾಭವನದಲ್ಲಿ ಪ್ರಕೃತಿ ವಿಕೋಪದಡಿ ಪರಿಹಾರ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಸಂಗ್ರಹಿಸಿದ ಅವರು, ಉಳಿದ ರಸ್ತೆ ದುರಸ್ತಿಗಾಗಿ ಹಣ ಬೇಕಾಗಿದ್ದು ಸಮೀಕ್ಷೆ ಸೂಕ್ತ ರೀತಿಯಲ್ಲಿ ಮಾಡಿದ ಬಳಿಕ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಹಣಕಾಸು ಇಲಾಖೆಯ ಜೊತೆಗೆ ಚರ್ಚೆ ಮಾಡಿ ಹಣ ಬಿಡುಗಡೆ ಮಾಡಿಸಲಾಗುತ್ತದೆ. ತಕ್ಷಣ ಕಾಮಗಾರಿ ಆರಂಭಿಸಬೇಕು ಎಂದು ಸೂಚಿಸದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ನೆರೆ ಹಾನಿಯ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಜಿಲ್ಲೆಯಲ್ಲಿ ವಿದ್ಯುತ್ ಲೈನ್ ಗಳ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಅವರು ಜಿಲ್ಲೆಯಲ್ಲಿ ಈಗಾಗಲೇ ಹೆಸ್ಕಾಂಗೆ ೪.೫೦ ಕೋಟಿ ರೂ. ಹಾನಿಯಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಎಡಿಆರ್‌ಎಫ್ ನಿಂದ ಹಣ ಬಿಡುಗಡೆ ಮಾಡಲಾಗುವುದು ಶೀಘ್ರವೇ ದುರಸ್ತೆ ಕಾರ್ಯ ಆರಂಭಿಸುವಂತೆ ಅಧಿಖಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾನಿಗೆ ಸಂಬಂಧಿಸಿದಂತೆ ಅಗತ್ಯವಿದೆ ಇರುವ ಹಣ ನೀಡಲಾಗುವುದು. ಹೆಚ್ಚುವರಿಯಾಗಿ ಬೇಕಾದ ಹಣದ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿರುವ ವಿವಿಧ ಡ್ಯಾಮ್ ಗಳಿಂದ ಹಂತ ಹಂತವಾಗಿ ನೀರು ಬಿಡುಗಡೆ ಮಾಡಬೇಕು. ಒಂದೇ ಸಮನೆ ನೀರು ಬಿಟ್ಟು ಜನರಿಗೆ ತೊಂದರೆ ನೀಡಬೇಡಿ. ಈ ಬಗ್ಗೆ ಕೆಪಿಸಿ ಎಂಡಿ ಜೊತೆಗೆ ಚರ್ಚೆ ನಡೆಸುತ್ತೇನೆ ಎಂದ ಅವರು, ಗೋವಾಕ್ಕೆ ತೆರಳಲು ಕೊವಿಡ್ ವ್ಯಾಕ್ಸಿನೇಷ್ ಪಡೆಯುವುದು ಕಡ್ಡಾಯವಾಗಿದೆ. ಇದರಿಂದ ಗೋವಾದಲ್ಲಿ ಮೀನಿನ ವ್ಯಾಪಾರಕ್ಕೆ ತೆರಳುವವರಿಗೆ ಮೂರು ಸಾವಿರ ವ್ಯಾಕ್ಸಿನ್ ಹೆಚ್ಚುವರಿಯಾಗಿ ನೀಡುತ್ತೇನೆ. ಅದು ಮೀನುಗಾರರಿಗೆ ಮಾತ್ರ ಮೀಸಲಿಡಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಸಿಳಿದರು.
ಸಭೆಯಲ್ಲಿ ಶಾಸಕರಾದ ಶಿವರಾಮ್ ಹೆಬ್ಬಾರ್, ರೂಪಾಲಿ ನಾಯ್ಕ, ಸುನೀಲ್ ನಾಯ್ಕ, ದಿನಕರ ಶೆಟ್ಟಿ ಹಾಗೂ ಇನ್ನಿತರರು ಇದ್ದರು.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement