ಜಿಎಸ್‌ಟಿಯಲ್ಲಿ ರಾಜ್ಯದ ಪಾಲು ತರಲು ಏನು ಮಾಡುತ್ತಿದ್ದೀರಿ: ಸಂಸದ ತೇಜಸ್ವಿ ಸೂರ್ಯಗೆ ಕಾಂಗ್ರೆಸ್‌ ಪ್ರಶ್ನೆ

ಬೆಂಗಳೂರು: ಜಿಎಸ್‌ಟಿಯಲ್ಲಿ ರಾಜ್ಯದ ಪಾಲು ಪಡೆಯಲು ಸಂಸದರಾಗಿ ಏನು ಮಾಡುತ್ತಿದ್ದೀರಿ ಎಂದು ಕಾಂಗ್ರೆಸ್‌ ಸಂಸದ ತೇಜಸ್ವಿ ಸೂರ್ಯ ಅವರನ್ನು ಪ್ರಶ್ನಿಸಿದೆ.
ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕೊಯಿಮತ್ತೂರು ಹೊಟೇಲ್‌ನಲ್ಲಿ ಕ್ಯಾಶಿಯರ್‌ ನಿರಾಕರಿಸಿದ್ದರೂ ಬಿಲ್‌ ಪಾವತಿಸಿದ್ದನ್ನು ಸಂಸದ ತೇಜಸ್ವಿ ಸೂರ್ಯ ಟ್ವೀಟರ್‌ನಲ್ಲಿ ತಿಳಿಸಿದ್ದರು. ಎಲ್ಲರನ್ನು ಗೌರವಿಸುವ ಪಕ್ಷ ಬಿಜೆಪಿ. ಸಣ್ಣ ವ್ಯಾಪಾರಿಗಳಿಂದ ರೋಲ್‌ಕಾಲ್‌ ಮಾಡಲು ನಾವು ಡಿಎಂಕೆ ಅಲ್ಲ ಎಂದು ತಿಳಿಸಿದ್ದರು.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌, ಹೊಟೇಲ್‌ನಲ್ಲಿ ನೀವು ತಿಂದಿದ್ದಕ್ಕೆ ಬಿಲ್‌ ಪಾವತಿಸಿದ್ದರಲ್ಲಿ ವಿಶೇಷವೇನಿಲ್ಲ. ಜಿಎಸ್‌ಟಿಯಲ್ಲಿ ರಾಜ್ಯದ ಪಾಲು ಪಡೆಯಲು ಏನು ಕ್ರಮ ಕೈಗೊಳ್ಳುತ್ತೀರಿ ಎಂಬುದನ್ನು ಸ್ಪಷ್ಟಪಡಿಸಿ. ಸ್ಕ್ಯಾನಿಯಾ ಬಸ್‌ ಹಗರಣದ ಬಗ್ಗೆ ಬೆಳಕು ತೋರುವ ಕಾಳಜಿ ತೋರಬೇಕು ಎಂದು ಕಾಂಗ್ರೆಸ್‌ ಟ್ವೀಟರ್‌ ತಿಳಿಸಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

  1. geek

    ಹೊಟೆಲ್ಲಿಗೆ ಬಂದ ಡಿಎಂಕೆ ಯವರಿಂದ ಹಿಡಿದು ಎಲ್ಲರೂ ಬಿಲ್ ಕೊಡುತ್ತಾರೆ. ತಾವು ಸಾಮಾಜಿಕ ಕೆಲಸಗಳಲ್ಲಿ ತೊಡಗಿರುವವರಿಗೆ ಬಿಲ್ ತೆಗೆದುಕೊಳ್ಳುವಿದಿಲ್ಲ ಎಂದು ಹೊಟೆಲ್ ನವರು ಸರಿಯಾದ ಉತ್ತರ ಕೊಟ್ಟಿದ್ದಾರೆ. ಹೊಟೆಲ್ ನಲ್ಲಿ ಬಿಲ್ ಕೊಟ್ಟಿದ್ದನ್ನೇ ದೊಡ್ಡ ಹೆಗ್ಗಳಿಕೆಯೆಂಬಂತೆ ತೋರಿಸಿಕೊಳ್ಳುತ್ತಿದ್ದ ತೇಜಸ್ವಿ ಸೂರ್ಯರವರಿಗೆ ಸರಿಯಾದ ಮಂಗಳಾರತಿಯನ್ನೇ ಮಾಡಿದ್ದಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement