ಬಂಧನದ ನಂತರ ಮಮತಾ ಬ್ಯಾನರ್ಜಿಗೆ 4 ಬಾರಿ ಡಯಲ್ ಮಾಡಿದ ಸಚಿವ ಪಾರ್ಥ ಚಟರ್ಜಿ: ಬಂದ ಉತ್ತರ… ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ

ನವದೆಹಲಿ: ಶನಿವಾರ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ನಾಲ್ಕು ಬಾರಿ ಕರೆ ಮಾಡಿದರೂ ಮಮತಾ ಅವರು ಅದಕ್ಕೆ ಉತ್ತರಿಸಲಿಲ್ಲ ಎಂದು ಇಂಡಿಯಾ ಟುಡೇ.ಇನ್‌ ವರದಿ ಮಾಡಿದೆ.
ಪ್ರಕ್ರಿಯೆಯ ಪ್ರಕಾರ, ಒಬ್ಬ ವ್ಯಕ್ತಿಯನ್ನು ಬಂಧಿಸಿದಾಗ, ಅವನು/ಅವಳು ಕುಟುಂಬದ ಸದಸ್ಯರು ಅಥವಾ ಸಂಬಂಧಿಕರು ಅಥವಾ ಸ್ನೇಹಿತರಾಗಬಹುದಾದ ಒಬ್ಬ ವ್ಯಕ್ತಿಗೆ ತಿಳಿಸಬಹುದು.
ತನ್ನ ಬಂಧನದ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತಿಳಿಸಲು ಉದ್ದೇಶಿಸಿರುವುದಾಗಿ ಪಾರ್ಥ ಚಟರ್ಜಿ ಅವರು ಇಡಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ನಂತರ ಅವರು 2.31, 2:33, 3:37 ಮತ್ತು 9:35 ಕ್ಕೆ ನಾಲ್ಕು ಕರೆಗಳನ್ನು ಮಾಡಿದರು, ಆದರೆ ಯಾವುದೇ ಕರೆಗಳಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉತ್ತರಿಸಲಿಲ್ಲ ಎಂದು ವರದಿ ತಿಳಿಸಿದೆ.

ಪಾರ್ಥ ಚಟರ್ಜಿ ಬಂಧನ:
ಪಶ್ಚಿಮ ಬಂಗಾಳದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸಚಿವ ಮತ್ತು ಟಿಎಂಸಿ ಹೆವಿವೇಯ್ಟ್ ನಾಯಕ ಪಾರ್ಥ ಚಟರ್ಜಿ ಅವರನ್ನು ಪಶ್ಚಿಮ ಬಂಗಾಳದಲ್ಲಿ ಆಪಾದಿತ ಶಾಲಾ ಉದ್ಯೋಗ ಹಗರಣದ ತನಿಖೆಗೆ ಸಂಬಂಧಿಸಿದಂತೆ ಇಡಿ ಶನಿವಾರ ಬೆಳಿಗ್ಗೆ ಬಂಧಿಸಿದೆ. ಪಾರ್ಥ ಚಟರ್ಜಿಯ ಬಂಧನವು ಮಾಜಿ ಶಿಕ್ಷಣ ಸಚಿವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಕೋಲ್ಕತ್ತಾದ ನಿವಾಸದಿಂದ 21 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡ ನಂತರ ನಡೆದಿದೆ.
ಅರ್ಪಿತಾ ಮುಖರ್ಜಿ ಅವರನ್ನು ಸಹ ಬಂದಿಸಲಾಗಿದ್ದು, ಒಂದು ದಿನ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ. ಅರ್ಪಿತಾ ಮುಖರ್ಜಿ ಅವರನ್ನು ಸೋಮವಾರ ಪಿಎಂಎಲ್‌ಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

ಪ್ರಮುಖ ಸುದ್ದಿ :-   ಹ್ಯಾರಿಯರ್ ಕಾರು, ನಕಲಿ ಎನ್‌ಎಸ್‌ಜಿ ಕಮಾಂಡೋಗಳು ! ಸೇನೆಯ ಬ್ರಿಗೇಡಿಯರ್ ಸೋಗಿನಲ್ಲಿ ಓಡಾಡುತ್ತಿದ್ದ ಯುವಕ ಬಲೆಗೆ ಬಿದ್ದಿದ್ದೇ ರೋಚಕ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement