ಕರ್ನಾಟಕದಲ್ಲಿ ಬುಧವಾರ ಮೂರು ತಿಂಗಳಲ್ಲೇ ಕಡಿಮೆ ದೈನಂದಿನ ಕೊರೊನಾ ಸಾವು

ಬೆಂಗಳೂರು: ರಾಜ್ಯದಲ್ಲಿ ಬುಧವಾರ 1,531 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 19 ಜನರು ಮೃತಪಟ್ಟಿದ್ದಾರೆ.
ಮೂರು ತಿಂಗಳ ನಂತರದಲ್ಲಿ ಇದೇ ಮೊದಲ ಸಲ ದೈನಂದಿನ ಕೋವಿಡ್‌ ಸಾವು 20ಕ್ಕಿಂತ ಕಡಿಮೆ ದಾಖಲಾಗಿದೆ.
ಇದೇ ಸಮಯದಲ್ಲಿ 1,430 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 22,569 ಸಕ್ರಿಯ ಪ್ರಕರಣಗಳಿವೆ. ಮರಣ ಪ್ರಮಾಣ ಶೇ.1.24ಕ್ಕೆ ಇಳಿಕೆ ಕಂಡಿದ್ದರೆ ಕೋವಿಡ್-19 ಸೋಂಕಿನ ಸಕಾರಾತ್ಮಕ ದರ ಶೇ.1.03ರಷ್ಟಿದೆ.
ರಾಜ್ಯದಲ್ಲಿ ಒಟ್ಟು 28,99,195 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 36,456 ಜನರನ್ನು ಕೊರೊನಾದಿಂದ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ 376 ಜನಕ್ಕೆ ಸೋಂಕು ತಗುಲಿದ್ದು, ಮೂವರು ಮೃತಪಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ 8,176 ಸಕ್ರಿಯ ಪ್ರಕರಣಗಳಿವೆ. ಗದಗ, ಕೊಪ್ಪಳ ಮತ್ತು ರಾಮನಗರದಲ್ಲಿ ಇವತ್ತು ಕೊರೊನಾ ಪ್ರಕರಗಳು ದಾಖಲಾಗಿಲ್ಲ.
ಜಿಲ್ಲಾವಾರು ಸಂಪೂರ್ಣ ಮಾಹಿತಿಯನ್ನು ಪಿಡಿಎಫ್‌ನಲ್ಲಿ ಕೆಳಗೆ ಕೊಡಲಾಗಿದೆ.

28-07-2021 HMB Kannada

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement