ಡಿಸಿಇಟಿ ಪರೀಕ್ಷೆ :ಗೊಂದಲಕ್ಕೆ ಡಿಸಿಎಂ ಸ್ಪಷ್ಟನೆ

ಬೆಂಗಳೂರು: ವೃತ್ತಿಪರ ಕೋರ್ಸ್‍ಗಳಾದ ಎಂಜಿನಿಯರಿಂಗ್(ಲ್ಯಾಟರಲ್ ಪ್ರವೇಶಾತಿ ಸೇರಿದಂತೆ ಡಿಸಿಇಟಿ) ಮೆಡಿಕಲ್ ಅಗ್ರಿಕಲ್ಚರಲ್, ನರ್ಸಿಂಗ್, ಪ್ಯಾರಾಮೆಡಿಕಲ್, ಫಾರ್ಮಸಿ ಮುಂತಾದ ಕೋರ್ಸ್‍ಗಳಲ್ಲಿ ಪ್ರವೇಶ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ದತ್ತಾಂಶವನ್ನು ಕೆಇಎಯಿಂದ ಪಡೆಯಬೇಕೆಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಸೂಚಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮೂಲಕ ವಿವರ ನೀಡಿರುವ ಅವರು, ಜುಲೈ, ಆಗಸ್ಟ್ 2021ರಲ್ಲಿ ನಡೆಯುವ ಡಿಸಿಇಟಿ ಪರೀಕ್ಷೆಯ 2021-22ನೇ ಸಾಲಿಗೆ ಲ್ಯಾಟರಲ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಇದು ಅನ್ವಯಿಸಲಿದೆ.
ವಿದ್ಯಾರ್ಥಿಗಳ ವಿಶ್ವಾಸ ಯೋಗ್ಯ ಮಾಹಿತಿ ಪ್ರಮಾಣೀಕರಿಸಲು ವಿದ್ಯಾರ್ಥಿಗಳ ದತ್ತಾಂಶವನ್ನು ಅವರು ಅಧ್ಯಯನ ಮಾಡುತ್ತಿರುವ ವಿಶ್ವವಿದ್ಯಾಲಯಗಳು ಮತ್ತು ಇಲಾಖೆಗಳಿಂದ ಪಡೆಯಬಹುದಾಗಿದೆ. 2020-2021ನೆ ಸಾಲಿಗೆ ರಾಜ್ಯ ಪೋಸ್ಟ್ ಮೆಟ್ರಿಕ್ ಸ್ಕಾಲರ್‌ ಶಿಪ್‍ಗೆ https://t.co/Yooa4MJ79u ಜಾಲತಾಣದಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಜಾಲತಾಣವು ಎಸ್ಸಿ-ಎಸ್ಟಿ,ಒಬಿಸಿ, ಮೈನಾರಿಟಿ, ಟೆಕ್ನಿಕಲ್ ಎಜುಕೇಷನ್, ವೈದ್ಯಕೀಯ ಶಿಕ್ಷಣ ಸೇರಿದಂತೆ ಎಲ್ಲಾ ಸ್ಕಾಲರ್‌ ಶಿಪ್‍ಗೂ ಏಕೈಕ ಜಾಲತಾಣ ವಾಗಿದ್ದು, ಹೆಚ್ಚಿನ ಮಾಹಿತಿ ಜಾಲತಾಣದಿಂದ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಯಾವುದೇ ಹೆಚ್ಚಿನ ದಾಖಲಾತಿಗಳನ್ನು ಒದಗಿಸದೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಈ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಅಧ್ಯಯನಕ್ಕಾಗಿ ತುಂಬಿರುವ ಶುಲ್ಕ ರಸೀದಿ ಯನ್ನು ಮಾತ್ರ ಅಪ್‍ಲೋಡ್ ಮಾಡಬೇಕಾಗಿರುತ್ತದೆ. ಕೌನ್ಸಿಲ್ ಪ್ರಕ್ರಿಯೆ ಜಾರಿಯಲ್ಲಿರುವುದರಿಂದ ಮುಂದಿನ 10 ದಿನಗಳಲ್ಲಿ ದತ್ತಾಂಶವನ್ನು ಜಾಲತಾಣಕ್ಕೆ ಅಳವಡಿಕೆ ಮಾಡಲಾಗುತ್ತದೆ. ಡಿಸಿಇಟಿ ಮುಖಾಂತರ ಪ್ರವೇಶಾತಿ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಭರಿಸುವ ಶುಲ್ಕ ಮರು ಪಾವತಿಗೆ ಸಂಬಂಧಿಸಿದ ವಿಷಯವಾಗಿದ್ದರೆ ಈ ವಿದ್ಯಾರ್ಥಿಗಳಿಗೆ ಪೂರಕವಾಗಿ ಕ್ರಮ ಕೈಗೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು 2021, ಮಾರ್ಚ್ 31ರ ದಿನಾಂಕ ಮರುನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement