ಕರ್ನಾಟಕದಲ್ಲಿ ತುಸು ಹೆಚ್ಚಳವಾದ ದೈನಂದಿನ ಕೊರೊನಾ ಸೋಂಕು

ಬೆಂಗಳೂರು : ಕರ್ನಾಟಕದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ (ಬುಧವಾರ) 7345 ಜನರಿಗೆ ಕೊರೊನಾ ಸೋಂಕು ದಾಖಲಾಗಿದೆ. ಇದೇ ಸಮಯದಲ್ಲಿ 148 ಜನರು ಸೋಂಕಿತರು ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಗುಣಮುಖರಾದವರ ಸಂಖ್ಯೆಯೂ ಹೆಚ್ಚು ಇದೆ. 17193 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗೆಯಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್‌ ಬುಲೆಟಿನ್‌ ತಿಳಿಸಿದೆ. ರಾಜ್ಯದಲ್ಲಿ ಇದುವರೆಗೂ ಗುಣಮುಖರಾದವರ ಸಂಖ್ಯೆ 2599472ಕ್ಕೆ ಏರಿಕೆಯಾಗಿದೆ.ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 33,296 ಆಗಿದೆ. 1,51,566 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಲ್ಲಿ ಬುಧವಾರ 1,611 ಜನರಿಗೆ ಸೋಂಕು ತಗುಲಿರುವುದು ಧೃಡವಾಗಿದೆ. 19 ಜನರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12,00,754ಕ್ಕೆ ಏರಿಕೆಯಾಗಿದೆ. 1 11,06,138 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ 15,354 ಜನರ ಸಾವು ಸಂಭವಿಸಿದೆ. 79,261 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ ಸಂಪೂರಣ ಮಾಹಿತಿ ಪಿಡಿಎಫ್‌ನಲ್ಲಿ ಕೊಡಲಾಗಿದೆ.

ಪ್ರಮುಖ ಸುದ್ದಿ :-   ದಾಂಡೇಲಿ : ಗಂಡ ಹೆಂಡತಿಯ ಜಗಳ ; ಕೋಪದಲ್ಲಿ ಮಗುವನ್ನೇ ಮೊಸಳೆಗಳಿರುವ ನಾಲೆಗೆ ಎಸೆದ ತಾಯಿ

16-06-2021 HMB Kannada

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement