ಪರಿಷತ್‌ ಚುನಾವಣೆ: ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‍ ಗೆಲುವು

ಮೈಸೂರು: ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಗಳನ್ನೊಳಗೊಂಡ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಗೆಲುವು ಸಾಧಿಸಿದರು.
ಜೆಡಿಎಸ್ – ಬಿಜೆಪಿ ಕೋಟೆಯನ್ನು ಕಾಂಗ್ರೆಸ್ ಛಿದ್ರ ಮಾಡಿದ್ದು, ಬಿಜೆಪಿ ಅಭ್ಯರ್ಥಿ ಎರಡನೇ ಸ್ಥಾನ ಪಡೆದರೆ ಜೆಡಿಎಸ್ ಮೂರನೇ ಸ್ಥಾನವನ್ನು ಪಡೆದಿದೆ. ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಗೆಲುವಿಗೆ ನಿಗದಿಪಡಿಸಿದ್ದ ಕೋಟಾವನ್ನು ಯಾವೊಬ್ಬ ಅಭ್ಯರ್ಥಿಗೂ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಎಲಿಮಿನೇಷನ್ ಪ್ರಕ್ರಿಯೆ ಮೂಲಕ ಅಭ್ಯರ್ಥಿಯನ್ನು ವಿಜಯೀ ಎಂದು ಘೋಷಿಸಲಾಯಿತು ಮಧು ಮಾದೇಗೌಡ 12,205 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದರು.

ಮಧು ಜಿ. ಮಾದೇಗೌಡ ಒಟ್ಟು 45,275 ಮತಗಳನ್ನು ಪಡೆದುಕೊಂಡಿದ್ದರು. ಆದರೆ ಗೆಲುವಿಗೆ ನಿಗದಿಯಾದ 46,083 ಮತಗಳ ಕೋಟಾವನ್ನು ತಲುಪಲು ಅವರಿಗೆ 808 ಮತಗಳ ಕೊರತೆ ಎದುರಾಗಿತ್ತು. ನಂತರ ಚುನಾವಣಾ ಆಯೋಗದ ನಿರ್ದೇಶನದಂತೆ ಒಟ್ಟು 17 ಅಭ್ಯರ್ಥಿಗಳನ್ನು ಎಲಿಮಿನೆಟ್ ಮಾಡಿದರೂ ಮಧು ಮಾದೇಗೌಡ ಅವರಿಗೆ ಗೆಲುವು ಸಾಧ್ಯವಾಗಲಿಲ್ಲ. ಕೊನೆಗೆ ಪ್ರತಿಸ್ಪರ್ಧಿ ಬಿಜೆಪಿ ಮೈ. ವಿ. ರವಿಶಂಕರ್ ಅವರನ್ನು ಎಲಿಮಿನೆಟ್ ಮಾಡಿ ಅಲ್ಲಿಂದ 808 ಪಡೆದು ನಿಗದಿತ ಕೋಟಾ ತಲುಪಲಾಯಿತು ಹಾಗೂ ಮಧು ಮಾದೇ ಗೌಡ ಅವರನ್ನು ವಿಜೇತ ಎಂದು ಅಧಿಕೃತವಾಗಿ ಘೋಷಿಸಲಾಯಿತು. ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ 33878 ಮತ ಪಡೆದರೆ. ಜೆಡಿಎಸ್ ಅಭ್ಯರ್ಥಿ ಎಚ್.ಕೆ.ರಾಮು 19630 ಮತ ಪಡೆದು 3ನೇ ಸ್ಥಾನ ಪಡೆದರು. ಈ ಬಾರಿ ಜೆಡಿಎಸ್‍ಗೆ ಸಾಂಪ್ರದಾಯಿಕ ಮತಗಳು ಕಾಂಗ್ರೆಸ್‍ಗೆ ಹೋಗಿದ್ದು ಮಧು ಅವರ ಗೆಲುವಿಗೆ ಕಾರಣವಾಯಿತು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement