ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ಸಿಐಡಿಗೆ ಶರಣಾದ ಮತ್ತೊಬ್ಬ ಪ್ರಮುಖ ಆರೋಪಿ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಮುಖ್ಯಾಧ್ಯಾಪಕ

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಹಗರಣದ ಮತ್ತೊಬ್ಬ ಪ್ರಮುಖ ಆರೋಪಿ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಮುಖ್ಯಾಧ್ಯಾಪಕ ಕಾಶಿನಾಥ ಸಿಐಡಿಗೆ ಶರಣಾಗಿದ್ದಾನೆ. ಪಿಎಸ್ಐ ಅಭ್ಯರ್ಥಿಗಳ ಒಎಂಆರ್ ಶೀಟ್​​ ತಿದ್ದಲು ಸಹಕಾರ ನೀಡಿರುವ ಗಂಭೀರ ಆರೋಪ ಎದುರಿಸುತ್ತಿರುವ ಈತ ಕಳೆದ 21 ದಿನಗಳಿಂದ ಪೊಲೀಸರ ಕೈಗೆ ಸಿಗದೆ ತೆಲೆಮರೆಸಿಕೊಂಡಿದ್ದ. ಇದೀಗ ಸ್ವತಃ ತಾವೇ ಕಲಬುರಗಿಯ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದಾನೆ.
ಸಿಐಡಿ ಚುರುಕಿನ ತನಿಖಾ ಕಾರ್ಯಚರಣೆಯಿಂದ ಆರೋಪಿಗಳ ಎದೆಯಲ್ಲಿ ನಡುಕ ಉಂಟಾಗಿ ತಾವಾಗಿಯೇ ಬಂದು ಶರಣಾಗತಿಯಾಗುತ್ತಿದ್ದಾರೆ ಎನ್ನಲಾಗಿದೆ. ನಿನ್ನೆ(ಭಾನುವಾರ) ಮಂಜುನಾಥ ಮೇಳಕುಂದಿ, ಇಂದು ಕಾಶಿನಾಥ ತಾನಾಗಿಯೇ ಸ್ವತಃ ಸಿಐಡಿಗೆ ಶರಣಾಗಿದ್ದಾನೆ.
ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆಯಲ್ಲಿ ಕಾಶಿನಾಥ್ ಹೆಡ್ಮಾಸ್ಟರ್ ಆಗಿದ್ದಾನೆ. ಪರೀಕ್ಷಾ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ನಾಪತ್ತೆಯಾಗಿದ್ದ ಕಾಶಿನಾಥ್​ಗಾಗಿ ಸಿಐಡಿ ಪೊಲೀಸರು ಹಲವೆಡೆ ಹುಡುಕಾಟ ನಡೆಸಿದ್ದರು. ಅಂತಿಮವಾಗಿ ತಾನಾಗಿಯೇ ಸಿಐಡಿ ಕಚೇರಿಗೆ ಬಂದು ಶರಣಾಗಿದ್ದಾನೆ.
ಅಕ್ರಮದ ಕಿಂಗ್​ಪಿನ್​ಗಳಾದ ರುದ್ರಗೌಡ ಪಾಟೀಲ್​, ನೀರಾವರಿ ಇಲಾಖೆ ಎಇ ಮಂಜುನಾಥ ಮೇಳಕುಂದಿ ಜತೆ ಕಾಶಿನಾಥ್ ಸಂಪರ್ಕ ಹೊಂದಿದ್ದ. ಅಕ್ರಮ ನಡೆಸಲು ಸಹಕರಿಸುವಂತೆ ದಿವ್ಯಾ ಹಾಗರಗಿಯನ್ನು ಒಪ್ಪಿಸಿದ್ದ. ನಂತರ ಅಕ್ರಮ ಬಯಲಿಗೆ ಬರುತ್ತಿದ್ದಂತೆ ಏಪ್ರಿಲ್ 10ರಿಂದ ಕಾಣೆಯಾಗಿದ್ದ ಎಂದು ಆರೋಪಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿವರೆಗೆ ಒಟ್ಟು 26 ಆರೋಪಿಗಳನ್ನ ಬಂಧಿಸಲಾಗಿದೆ. ದಿವ್ಯಾ ಹಾಗರಗಿ ಬಂಧನವಾಗುತ್ತಿದ್ದಂತೆ ಕಿಂಗ್​ಪಿನ್ ಗಳು ಒಬ್ಬಬ್ಬರೇ ಶರಣಾಗುತ್ತಿದ್ದಾರೆ.ಮಂಜುನಾಥ ಮೇಳಕುಂದಿ ಸಹೋದರ ರವೀಂದ್ರ ಮೇಳಕುಂದಿ ಹಾಗೂ ಶಾಂತಿಬಾಯಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಪೊಲೀಸರು ಶೋಧ ಮುಂದುವರೆಸಿದ್ದಾರೆ.

ಪ್ರಮುಖ ಸುದ್ದಿ :-   ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement