ಕೆಎಟಿ ಸದಸ್ಯರಾಗಿ ರಾಘವೇಂದ್ರ ಔರಾದಕರ್‌ ನೇಮಕ

ಬೆಂಗಳೂರು: ನಿವೃತ್ತ ಡಿಜಿಪಿ ರಾಘವೇಂದ್ರ ಔರಾದ್ಕರ್ ಅವರನ್ನು ಕರ್ನಾಟಕ ರಾಜ್ಯ ಆಡಳಿತ ಸೇವೆಗಳ‌ ಟ್ರಿಬ್ಯುನಲ್ ಸದಸ್ಯರನ್ನಾಗಿ ನೇಮಕ‌ ಮಾಡಲಾಗಿದೆ.
ರಾಷ್ಟ್ರಪತಿಗಳು ಈ ನೇಮಕ ಮಾಡಿದ್ದು, ನಾಲ್ಕು ವರ್ಷಗಳ ಅವಧಿ ಅಥವಾ 67 ವರ್ಷದ ವರೆಗೆ ಯಾವುದು ಮುಂಚಿತವೋ ಅಲ್ಲಿಯವರೆಗೆ ಔರಾದ್ಕರ್ ಕೆಎಟಿ ಸದಸ್ಯರಾಗಿ ಸೇವೆಯಲ್ಲಿ ಮುಂದುವರಿಯಲಿದ್ದಾರೆ.
ರಾಷ್ಟ್ರಪತಿಗಳ ಆದೇಶದಂತೆ ರಾಘವೇಂದ್ರ ಔರಾದ್ಕರ್ ಅವರನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದು ಕೊರತೆ ನಿವಾರಣೆ ಹಾಗೂ ಪಿಂಚಣಿ ಸಚಿವಾಲಯ ಆದೇಶ ಹೊರಡಿಸಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಮುಖ್ಯ ಕಾರ್ಯದರ್ಶಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ ಎಂಎಲ್‌ಸಿ ಎನ್‌.ರವಿಕುಮಾರ ವಿರುದ್ಧ ಎಫ್‌ಐಆರ್‌ ದಾಖಲು

ನಿಮ್ಮ ಕಾಮೆಂಟ್ ಬರೆಯಿರಿ

advertisement