ಕರ್ನಾಟಕದಲ್ಲಿ ದೈನಂದಿನ ಕೊರೊನಾ ಸೋಂಕು ಭಾರೀ ಇಳಿಮುಖ

ಬೆಂಗಳೂರು: ರಾಜ್ಯದಲ್ಲಿ ದೈನಂದಿನ ಕೊರೊನಾ ಸೋಂಕು ಮತ್ತಷ್ಟು ಇಳಿಕೆ ಕಂಡಿದೆ. ಇಂದು, ಸೋಮವಾರ 1,568 ಹೊಸ ಸೋಂಕು ದಾಖಲಾಗಿದ್ದು, ಇದೇವೇಳೆ 25ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಇದೇವೇಳೆ ರಾಜ್ಯದಲ್ಲಿ ರಾಜ್ಯದಲ್ಲಿ ಒಟ್ಟು 6,025 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 31,215 ಇದೆ. ಕೋವಿಡ್-19 ಮರಣ ಪ್ರಮಾಣ ಶೇ.1.59% ರಷ್ಟಿದೆ. ಸಕಾರಾತ್ಮಕತೆ ದರ 2.25%ಕ್ಕೆ ಇಳಿಕೆ ಕಂಡಿದೆ. . ಬೆಂಗಳೂರಿನಲ್ಲಿ ಒಟ್ಟು 754 ಹೊಸ ಕೇಸ್ ಪತ್ತೆಯಾಗಿದ್ದು, 5 ಮರಣ ಪ್ರಕರಣ ದಾಖಲಾಗಿದೆ.

ಜಿಲ್ಲಾವಾರು ಸೋಂಕಿತರ ಮಾಹಿತಿ..
ಬಾಗಲಕೋಟೆ 18, ಬಳ್ಳಾರಿ 50, ಬೆಳಗಾವಿ 63, ಬೆಂಗಳೂರು ಗ್ರಾಮಾಂತರ 7, ಬೆಂಗಳೂರು ನಗರ 754, ಬೀದರ್ 8, ಚಾಮರಾಜನಗರ 20, ಚಿಕ್ಕಬಳ್ಳಾಪುರ 24, ಚಿಕ್ಕಮಗಳೂರು 18, ಚಿತ್ರದುರ್ಗ 21, ದಕ್ಷಿಣ ಕನ್ನಡ 55, ದಾವಣಗೆರೆ 14, ಧಾರವಾಡ 20, ಗದಗ 7, ಹಾಸನ 37, ಹಾವೇರಿ 22, ಕಲಬುರಗಿ 28, ಕೊಡಗು 26, ಕೋಲಾರ 12, ಕೊಪ್ಪಳ 12, ಮಂಡ್ಯ 35, ಮೈಸೂರು 78, ರಾಯಚೂರು 15, ರಾಮನಗರ 26, ಶಿವಮೊಗ್ಗ 91, ತುಮಕೂರು 37, ಉಡುಪಿ 31, ಉತ್ತರ ಕನ್ನಡ 14, ವಿಜಯಪುರ 15 ಮತ್ತು ಯಾದಗಿರಿಯಲ್ಲಿ 10 ಸೋಂಕು ದಾಖಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement