
ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (kea) ನಡೆಸಿದ್ದ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ (KCET Results 2026) ಶನಿವಾರ ಪ್ರಕಟವಾಗಿದೆ.
ಈ ಪರೀಕ್ಷೆಯಲ್ಲಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು 2,92,782 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.
ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಈ ಬಾರಿ ಒಟ್ಟು 3,36,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಇವರಲ್ಲಿ 3,09,014 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಭೌತಶಾಸ್ತ್ರ ಮತ್ತು ರಾಸಾಯನಿಕ ಶಾಸ್ತ್ರ ವಿಷಯಗಳಲ್ಲಿ ಕೆಲ ತಾಂತ್ರಿಕ ಕಾರಣಗಳಿಂದ ಪ್ರಶ್ನೆಗಳ ಬಗ್ಗೆ ಗೊಂದಲ ಉಂಟಾಗಿದ್ದರಿಂದ, ಎಲ್ಲ ವಿದ್ಯಾರ್ಥಿಗಳಿಗೆ 1 ಗ್ರೇಸ್ ಮಾರ್ಕ್ ನೀಡಲಾಗಿದೆ.
ಎಂಜಿನಿಯರಿಂಗ್, ಫಾರ್ಮಸಿ, ಕೃಷಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಿಇಟಿ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಿದೆ.ರಾಜ್ಯದ 745 ಪರೀಕ್ಷಾ ಕೇಂದ್ರಗಳಲ್ಲಿ ಏಪ್ರಿಲ್ 23 ಮತ್ತು 24 ರಂದು ಸಿಇಟಿ ಪರೀಕ್ಷೆ ನಡೆಸಲಾಗಿತ್ತು. 23 ರಂದು ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನ ಹಾಗೂ 24 ರಂದು ಗಣಿತ, ಜೀವ ವಿಜ್ಞಾನ ಪರೀಕ್ಷೆಗಳು ನಡೆದಿದ್ದವು. ಎಂಜಿನಿಯರಿಂಗ್ ಗೆ 2,82,603 ಮಂದಿ, ಬಿಎಸ್ಸಿ (ಕೃಷಿ, ರೇಷ್ಮೆ, ಆಹಾರ ವಿಜ್ಞಾನ) ಗೆ 2,09,220 ಮಂದಿ, ಬಿ.ವಿ.ಎಸ್ಸಿ (ಪಶು ವೈದ್ಯಕೀಯ) 2,12,909 ಮಂದಿ, ಬಿ. ಫಾರ್ಮ್ ಗೆ 2,86,609 ಮಂದಿ, ಬಿಎಸ್‌ಸಿ ನರ್ಸಿಂಗ್ ಗೆ 2,18,785 ಮಂದಿ, BNYS ಗೆ 2,12, 730 ಮಂದಿ, ಕೃಷಿ ಪ್ರಾಯೋಗಿಕ 21, 775 ಮಂದಿ ಮತ್ತು ಬಿವಿಎಸ್‌ಸಿ ಪ್ರಾಯೋಗಿಕ ವಿಭಾಗದಲ್ಲಿ 21, 838 ಮಂದಿ ಅರ್ಹತೆ ಪಡೆದಿದ್ದಾರೆ.

ವಿವಿಧ ವಿಭಾಗಗಳಲ್ಲಿ ಟಾಪ್ 3 ರ್ಯಾಂಕ್ ಪಡೆದವರು
ಎಂಜಿಯರಿಂಗ್ ವಿಭಾಗ
1ನೇ ರ‍್ಯಾಂಕ್- ತನಿಷಾ ಕಾರ್ತಿಕ, ಆರ್‌ವಿ ಪಿಯು ಕಾಲೇಜು
2ನೇ ರ‍್ಯಾಂಕ್- ಸೃಜನ್ ಬಿ.ಎಸ್.-ಕೆ.ಎಂ.ಡಬ್ಲ್ಯು.ಅ.ಪಿಯು ಕಾಲೇಜ್, ಎಂ.ಎಲ್.ಪುರ-ಬೆಂಗಳೂರು
3ನೇ ರ‍್ಯಾಂಕ್- ನಿನಾದ ವಸಿಷ್ಠ, ಆರ್‌ವಿ ಪಿಯು ಕಾಲೇಜು, ಜಯನಗರ, ಬೆಂಗಳೂರು
ಕೃಷಿ ವಿಭಾಗ
1ನೇ ರ‍್ಯಾಂಕ್- ನಿನಾದ ವಸಿಷ್ಠ, ಆರ್.ವಿ ಪಿಯು, ಜಯನಗರ, ಬೆಂಗಳೂರು
2ನೇ ರ‍್ಯಾಂಕ್- ಅನ್ಮೋಲ ಪ್ರಭು, ಅರ್ಜುನ್ ಸೈನ್ಸ್ ಕಾಲೇಜು, ಧಾರವಾಡ
3ನೇ ರ‍್ಯಾಂಕ್- ಸಮಯ ಎ.ಎಸ್, ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು
ವೆಟರ್ನರಿ ವಿಭಾಗ
1ನೇ ರ‍್ಯಾಂಕ್- ನಯನಾ ಗೋಪಿ –ಬೇಸ್ ಪಿಯು ಕಾಲೇಜ್, ಬೆಂಗಳೂರು
2ನೇ ರ‍್ಯಾಂಕ್- ಅಮೂಲ್ಯ –ಸರ್ ಎಂವಿ ಪಿಯು ಕಾಲೇಜ್, ದಾವಣಗೆರೆ
3ನೇ ರ‍್ಯಾಂಕ್- ರಿತ್ವಿಕ್ ಕುಮಾರ – ಆರ್‌ವಿ ಪಿಯು ಕಾಲೇಜು
ಯೋಗ ಮತ್ತು ನ್ಯಾಚುರೋಪಥಿ
1ನೇ ರ‍್ಯಾಂಕ್-ನಯನಾ ಗೋಪಿ –1ನೇ ರ‍್ಯಾಂಕ್- ನಯನಾ ಗೋಪಿ –ಬೇಸ್ ಪಿಯು ಕಾಲೇಜ್, ಬೆಂಗಳೂರು
2ನೇ ರ‍್ಯಾಂಕ್- ಅಮೂಲ್ಯ –2ನೇ ರ‍್ಯಾಂಕ್- ಅಮೂಲ್ಯ –ಸರ್ ಎಂವಿ ಪಿಯು ಕಾಲೇಜ್, ದಾವಣಗೆರೆ
3ನೇ ರ‍್ಯಾಂಕ್-ಸುಚಿತಾ –ಚೈತನ್ಯ ಪಿಯು ಕಾಲೇಜ್,ದಾವಣಗೆರೆ
ಡಿ-ಫಾರ್ಮ (D-Pharm)
1ನೇ ರ‍್ಯಾಂಕ್-ನಯನ ಗೋಪಿ-ಪ್ರಥಮ,
2ನೇ ರ‍್ಯಾಂಕ್- ಅಮೂಲ್ಯ-ದ್ವಿತೀಯ,
3ನೇ ರ‍್ಯಾಂಕ್ -ಸುಚಿತಾ
ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯ:
ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗಳಾದ cetonline.karnataka.gov.in/kea/ ಅಥವಾ karresults.nic.in ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ವೆಬ್‌ಸೈಟ್‌ನಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ನಮೂದಿಸಿ ಸ್ಕೋರ್ ಕಾರ್ಡ್ ಅನ್ನು ಆನ್‌ಲೈನ್ ಮೂಲಕ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.


ನಿಮ್ಮ ಕಾಮೆಂಟ್ ಬರೆಯಿರಿ