ಪ್ರಥಮ ಪಿಯು ತರಗತಿ ದಾಖಲಾತಿ ಅವಧಿ ವಿಸ್ತರಣೆ : ಸಚಿವ ನಾಗೇಶ

ಬೆಂಗಳೂರು: ಬೆಂಗಳೂರು: ಸಿಬಿಎಸ್‌ಇ (CBSE) ಹಾಗೂ ಐಸಿಎಸ್‌ಇ (ICSE) 10ನೇ ತರಗತಿ ಪರೀಕ್ಷೆಯ ಫಲಿತಾಂಶ ಇನ್ನೂ ಪ್ರಕಟವಾಗದ ಕಾರಣ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಥಮ ಪಿಯುಸಿ ತರಗತಿ ದಾಖಲಾತಿ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

ಈ ಬಗ್ಗೆ ಟ್ವಿಟ್ಟರಿನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಬಿ.ಸಿ ನಾಗೇಶ ಅವರು, ಸಿಬಿಎಸ್‌ಇ ಹಾಗೂ ಐಸಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟವಾಗದ ಕಾರಣ ವಿದ್ಯಾರ್ಥಿಗಳು, ಪಾಲಕರ ಮನವಿ ಮೇರೆಗೆ ಪ್ರಥಮ ಪಿಯುಸಿ ತರಗತಿ ದಾಖಲಾತಿ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

ದಂಡಶುಲ್ಕವಿಲ್ಲದೇ ಪ್ರಥಮ ಪಿಯುಸಿಗೆ ದಾಖಲಾಗಲು 30-07-2022 ಕೊನೆಯ ದಿನವಾಗಿದೆ. ವಿಳಂಬ ದಾಖಲಾತಿಗೆ 670 ರೂ.ಗಳ ದಂಡ ಶುಲ್ಕದೊಂದಿಗೆ 06-08-2022 ಕೊನೆಯ ದಿನಾಂಕವಾಗಿದೆ. ವಿಶೇಷ ದಂಡ ಶುಲ್ಕ 2890 ರೂ.ಗಳೊಂದಿಗೆ ದಾಖಲಾತಿ ಮಾಡಲು 12-08-2022 ಕೊನೆಯ ದಿನಾಂಕವಾಗಿದೆ ಎಂದು ತಿಳಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement