ಸಿಬಿಐ ಜಂಟಿ ನಿರ್ದೇಶಕರಾಗಿ ಐವರು ಡಿಐಜಿಗಳನ್ನು ನೇಮಕ ಮಾಡಿದ ಕೇಂದ್ರ

ನವದೆಹಲಿ : ಕೇಂದ್ರೀಯ ತನಿಖಾ ದಳದಲ್ಲಿ (ಸಿಬಿಐ) ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಆಗಿ ಕಾರ್ಯನಿರ್ವಹಿಸುತ್ತಿರುವ ಐವರು ಐಪಿಎಸ್ ಅಧಿಕಾರಿಗಳನ್ನು ಸೋಮವಾರ ಜಂಟಿ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶ ತಿಳಿಸಿದೆ.
2005ರ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವೆಯ (IPS) ಮಹಾರಾಷ್ಟ್ರ ಕೇಡರ್‌ನ ಅಧಿಕಾರಿ, ಪ್ರಸ್ತುತ ಡಿಐಜಿ (DIG) ಆಗಿ ಕಾರ್ಯನಿರ್ವಹಿಸುತ್ತಿರುವ, ಎಸ್‌. ವೀರೇಶ ಪ್ರಭು ಅವರನ್ನು ಸಂಪುಟದ ನೇಮಕಾತಿ ಸಮಿತಿಯು ಅಕ್ಟೋಬರ್ 13, 2027 ರ ಅವಧಿ ವರೆಗೆ ಅನುಮೋದಿಸಿದೆ.
ಅವರ ಬ್ಯಾಚ್‌ಮೇಟ್ ರಾಜೀವ್ ರಂಜನ್ (ಸಿಕ್ಕಿಂ ಕೇಡರ್) ಅವರನ್ನು ಮೇ 30, 2026 ರವರೆಗಿನ ಅವಧಿಗೆ ಪ್ರಧಾನ ತನಿಖಾ ಸಂಸ್ಥೆಯಲ್ಲಿ ಜಂಟಿ ನಿರ್ದೇಶಕರಾಗಿ ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
2005 ರ ಬ್ಯಾಚ್‌ನ ಇತರ ಮೂವರು ಐಪಿಎಸ್ ಅಧಿಕಾರಿಗಳಾದ ಸುಮೇಧಾ ದ್ವೆವೇದಿ (ಹಿಮಾಚಲ ಪ್ರದೇಶ ಕೇಡರ್), ವಿಜಯೇಂದ್ರ ಬಿದರಿ (ತಮಿಳುನಾಡು ಕೇಡರ್) ಮತ್ತು ಶಾರದಾ ರಾವುತ್ (ಮಹಾರಾಷ್ಟ್ರ ಕೇಡರ್) ಅವರು ಸಿಬಿಐನಲ್ಲಿ ಜಂಟಿ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement