ತನ್ನ ನೌಕರರಿಗೆ ಮರ್ಸಿಡಿಸ್ ಬೆಂಜ್ ಕಾರ್‌’ ಗಿಫ್ಟ್ ನೀಡಲು ಮುಂದಾದ ಐಟಿ ಕಂಪನಿ…!

ನವದೆಹಲಿ : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಂಪನಿಗಳು ತನ್ನ ಉದ್ಯೋಗಿಗಳನ್ನ ಉಳಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡುತ್ತವೆ. ಕೋವಿಡ್‌ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ದೇಶದ ದೊಡ್ಡ ಐಟಿ ಕಂಪೆನಿಗಳಲ್ಲಿ ಒಂದಾದ ಎಚ್‌ಸಿಎಲ್ ಟೆಕ್ ತನ್ನ ಪ್ರತಿಭಾವಂತ ನೌಕರರಿಗೆ ‘ಮರ್ಸಿಡಿಸ್ ಬೆಂಜ್ ಕಾರು’ಗಳನ್ನು ಗಿಫ್ಟ್ ಆಗಿ ನೀಡಲು ಯೋಜಿಸುತ್ತಿದೆ ಎಂದು ವರದಿಯೊಂದು ತಿಳಿಸಿದೆ.

ಎಚ್‌ಸಿಎಲ್ ಟೆಕ್ನಾಲಜಿಸ್ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಅಪ್ಪಾರಾವ್ ವಿ.ವಿ ಅವರು ಈ ಪ್ರಸ್ತಾವನೆಯನ್ನು ಮಂಡಳಿಯ ಅನುಮೋದನೆಗಾಗಿ ನೀಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕಂಪನಿಯು 2013 ರಲ್ಲಿ 50 ಮರ್ಸಿಡಿಸ್ ಬೆನ್ಜ್ ಕಾರುಗಳನ್ನು ತನ್ನ ಪ್ರತಿಭಾವಂತ ನೌಕರರಿಗೆ ನೀಡಿತ್ತು.ಆದರೆ ನಂತರದ ದಿನಗಳಲ್ಲಿ ಇದನ್ನ ನಿಲ್ಲಿಸಿತ್ತು.
ಬದಲಿ ನೇಮಕಾತಿ ವೆಚ್ಚವು 15% ರಿಂದ 20% ಹೆಚ್ಚಾಗಿದೆ. ಆದ್ದರಿಂದ, ನಮ್ಮ ಪೂರ್ಣ ಶಕ್ತಿಯನ್ನ ಹೆಚ್ಚಿಸುವಲ್ಲಿ ನಾವು ಸಕ್ರಿಯವಾಗಿ ಕಾರ್ಯನಿರ್ವಹಿಸುವುತ್ತೇವೆ ಎಂದು ಕಂಪನಿ ಹೇಳಿದೆ.
2022 ರ ಮೊದಲ ತ್ರೈಮಾಸಿಕದ ಗಳಿಕೆಯ ಕರೆಯ ಸಮಯದಲ್ಲಿ, ಎಚ್‌ಸಿಎಲ್ ಟೆಕ್ನಾಲಜಿಸ್ ಈ ವರ್ಷ 20,000-22,000 ಫ್ರೆಶರ್‌ಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿತ್ತು, ಇದು ಕಳೆದ ಹಣಕಾಸು ವರ್ಷದಲ್ಲಿ ಕಂಪನಿಯು ನೇಮಿಸಿಕೊಂಡಿದ್ದಕ್ಕಿಂತ 50% ಹೆಚ್ಚಾಗಿದೆ. ಪೈಪೋಟಿ ಹೆಚ್ಚಾದಂತೆ ಪ್ರತಿಭೆಗಳನ್ನು ಉಳಿಸಿಕೊಳ್ಳಲು ಜುಲೈ 1 ರಿಂದ ಐಟಿ ಸಂಸ್ಥೆಯು ವೇತನ ಹೆಚ್ಚಳ ಮಾಡುತ್ತಿದೆ.
ಜೂನ್ 2021 ರ ತ್ರೈಮಾಸಿಕದ ಕೊನೆಯಲ್ಲಿ, ನೋಯ್ಡಾ ಪ್ರಧಾನ ಕಚೇರಿಯು 1,76,499 ಉದ್ಯೋಗಿಗಳನ್ನು ಹೊಂದಿದ್ದು, 7,522 ಜನರ ಸೇರ್ಪಡೆಯಾಗಿದೆ ಎಂದು ಕಂಪನಿ ತಿಳಿಸಿದೆ.
ಉದ್ಯೋಗಿಗಳನ್ನು ಉಳಿಸಿಕೊಳ್ಳುವುದರ ಹೊರತಾಗಿ ಕೆಲವು ಕಂಪನಿಗಳು ಹೊಸ ನೇಮಕ ಮತ್ತು ಅವರಿಗೆ ಪ್ರಮುಖ ಸೌಕರ್ಯ ಹಾಗೂ ಬೋನಸ್‌ ಸಹ ನೀಡುತ್ತಿವೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement