ನನ್ನ ಕೆಲಸ ಕಸಿದುಕೊಂಡ ಎಐ : ಚಾಟ್‌ಜಿಪಿಟಿ ಬಂದ ನಂತರ ನನ್ನ ಆದಾಯ 90%ರಷ್ಟು ಕುಸಿತವಾಯ್ತು ಎಂದ 22 ವರ್ಷದ ವಿದ್ಯಾರ್ಥಿನಿ

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಕ್ರಾಂತಿ ಇಲ್ಲಿದೆ ಎಂಬುದು ರಹಸ್ಯವಲ್ಲ, ಮತ್ತು ಇದು ನಿಜವಾಗಿಯೂ ಮಾನವರಿಗೆ ವರವೋ ಅಥವಾ ಶಾಪವೋ ಎಂಬ ಚರ್ಚೆಗೆ ಕಾರಣವಾಗಿದೆ. ಎಐ (AI)ನಿಂದಾಗಿ ಪ್ರಪಂಚದಾದ್ಯಂತ ಅನೇಕ ಜನರು ಎದುರಿಸುತ್ತಿರುವ ಆದಾಯದ ನಷ್ಟದ ಇನ್ನೊಂದು ಉದಾಹರಣೆಯಲ್ಲಿ, ಕೋಲ್ಕತ್ತಾದ 22 ವರ್ಷದ ವಿದ್ಯಾರ್ಥಿನಿ ತನ್ನ ಕಷ್ಟವನ್ನು ಹಂಚಿಕೊಂಡಿದ್ದಾಳೆ. ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್ ಚಾಟ್‌ಜಿಪಿಟಿ (artificial intelligence (AI) chatbot ChatGPT) ಪ್ರಾರಂಭಿಸಿದ ನಂತರ ತನ್ನ ಜೀವನವು ಹೇಗೆ ಸಂಪೂರ್ಣವಾಗಿ ಬದಲಾಗಿದೆ ಎಂಬುದರ ಬಗ್ಗೆ ಕೋಲ್ಕತ್ತಾದ 22 ವರ್ಷದ ವಿದ್ಯಾರ್ಥಿನಿ ತಮ್ಮ ತಳಮಳವನ್ನು ಹಂಚಿಕೊಂಡಿದ್ದಾರೆ.
ನ್ಯೂಯಾರ್ಕ್ ಪೋಸ್ಟ್‌ನ ಪ್ರಕಾರ, ಶರಣ್ಯ ಭಟ್ಟಾಚಾರ್ಯ ಅವರು ತಮ್ಮ ಪದವಿಯನ್ನು ಓದುತ್ತಿರುವಾಗ ಕ್ರಿಯೇಟಿವ್ ಸೊಲ್ಯೂಶನ್ಸ್ ಏಜೆನ್ಸಿಗೆ ಘೋಸ್ಟ್‌ ರೈಟರ್ ಮತ್ತು ಕಾಪಿರೈಟರ್ ಆಗಿದ್ದರು. ಅವರು ಕೆಲವು ಎಸ್‌ಇಒ-ಆಪ್ಟಿಮೈಸ್ ಮಾಡಿದ ಲೇಖನಗಳನ್ನು ತೆಗೆದುಕೊಳ್ಳುತ್ತಿದ್ದರು ಮತ್ತು ತಿಂಗಳಿಗೆ ಕೇವಲ $240 (ಅಂದಾಜು ₹ 20,000) ಆದಾಯ ಗಳಿಸುತ್ತಿದ್ದರು. ಆದಾಗ್ಯೂ, ಕಳೆದ ವರ್ಷ ನವೆಂಬರ್‌ನಲ್ಲಿ ಚಾಟ್‌ಜಿಪಿಟಿ ಮಾರುಕಟ್ಟೆಗೆ ಬಿಡುಗಡೆಯಾದ ನಂತರ ತಮ್ಮ ಜೀವನ ಬದಲಾಯಿತು ಎಂದು ಭಟ್ಟಾಚಾರ್ಯ ಅವರು ಔಟ್‌ಲೆಟ್ ಗೆ ಹೇಳಿದ್ದಾರೆ.
2022ರ ಅಂತ್ಯದ ವೇಳೆಗೆ, ತನ್ನ ಕೆಲಸ ಅಂತಿಮವಾಗಿ ತಿಂಗಳಿಗೆ ಕೇವಲ ಒಂದು ಅಥವಾ ಎರಡು ಲೇಖನಗಳನ್ನು ಬರೆಯುವುದಕ್ಕೆ ಸೀಮಿತವಾಗುವಷ್ಟು ಕಡಿಮೆಯಾಯಿತು ಮತ್ತು ಕೆಲಸದ ಕೊರತೆಗೆ ತಮ್ಮ ಕಂಪನಿ ತಮಗೆ ಯಾವುದೇ ವಿವರಣೆಯನ್ನು ನೀಡಲಿಲ್ಲ ಎಂದು 22 ವರ್ಷ ವಯಸ್ಸಿ ಶರಣ್ಯ ಭಟ್ಟಾಚಾರ್ಯ ಬಹಿರಂಗಪಡಿಸಿದ್ದಾರೆ. ತನ್ನಂಥವರಿಗೆ ಕೆಲಸವನ್ನು ನಿಯೋಜಿಸುವ ಸಂಸ್ಥೆಗಳು ಈಗ ಕೃತಕ ಬುದ್ಧಿಮತ್ತೆ (AI) ಅವಲಂಬಿಸಲು ಪ್ರಾರಂಭಿಸಿದವು ಎಂದು ಅವರು ಹೇಳಿದ್ದಾರೆ, ಆದ್ದರಿಂದ, ವೆಚ್ಚ ಕಡಿಮೆ ಮಾಡಲು ChatGPT ಪರಿಚಯಿಸಲಾಗಿದೆ ಎಂದು ಅವರು ಶಂಕಿಸಿದ್ದಾರೆ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ | ಷೇರು ಮಾರುಕಟ್ಟೆಯಲ್ಲಿ ಭಾರತದ ರಕ್ಷಣಾ ಕಂಪನಿಗಳಿಗೆ ಹೆಚ್ಚಿದ ಬೇಡಿಕೆ, ಚೀನಾ-ಟರ್ಕಿ ಕಂಪನಿಗಳ ಬೇಡಿಕೆ ಕುಸಿತ...!

ನ್ಯೂಯಾರ್ಕ್ ಪೋಸ್ಟ್‌ನ ಪ್ರಕಾರ, ತನ್ನ ಕೆಲಸದ ಹೊರೆ ಕಡಿಮೆಯಾದಾಗಿನಿಂದ ನಿಜವಾಗಿಯೂ ಜೀವನ ಕಠಿಣವಾಗಿದೆ – ತನಗೆ ಮಾತ್ರವಲ್ಲದೆ ನನ್ನ ಕುಟುಂಬಕ್ಕೂ ಸಹ ಕಠಿಣವಾಗಿದೆ” ಎಂದು ವಿದ್ಯಾರ್ಥಿನಿ ಹೇಳಿದ್ದಾರೆ. ನಾನು ಮಾಡುತ್ತಿದ್ದ 10%ರಷ್ಟನ್ನು ಮಾತ್ರ ಈಗ ಮಾಡುತ್ತಿದ್ದೇನೆ ಎಂದು ಹೇಳಬಲ್ಲೆ” ಎಂದು ಶರಣ್ಯ ಹೇಳಿದ್ದಾರೆ.
ಭಟ್ಟಾಚಾರ್ಯ ಅವರು ತಮ್ಮ ಆದಾಯ ತನಗೆ ಮತ್ತು ಸೀರೆ ಮಾರಾಟ ಮಾಡುವ 45 ವರ್ಷದ ತಾಯಿ ಇಬ್ಬರಿಗೂ ಬೆಂಬಲವಾಗಿತ್ತು. ಈಗ ಹಣದ ಹರಿವು ನಿಧಾನವಾಗುತ್ತಿದ್ದಂತೆ, 22 ವರ್ಷದ ಯುವತಿ ತಾನು ಮತ್ತು ತನ್ನ ಕುಟುಂಬವು ಇದ್ದಕ್ಕಿದ್ದಂತೆ ತಮ್ಮೆಲ್ಲ ಖರ್ಚನ್ನು “ಕಡಿತಗೊಳಿಸಬೇಕಾಯಿತು” ಎಂದು ಹೇಳಿದ್ದಾರೆ.
ನಾವು ಎಷ್ಟು ಆಹಾರವನ್ನು ಸೇವಿಸುತ್ತೇವೆ ಎಂಬುದನ್ನು ಸಹ ನಾವು ಮೇಲ್ವಿಚಾರಣೆ ಮಾಡಬೇಕಾಯಿತು ಮತ್ತು ತಿನ್ನಲು ಹೊರಗೆ ಹೋಗಿ ಆನಂದಿಸುವುದನ್ನು ನಾವು ಇನ್ನು ಮುಂದೆ ಮಾಡುವುದಿಲ್ಲ – ನಾವು ಈಗ ಪ್ರತಿ ಎರಡು ತಿಂಗಳಿಗೊಮ್ಮೆ ಮಾತ್ರ ಹಾಗೆ ಮಾಡಬಹುದು. ಆಹಾರ ಮತ್ತು ಬಿಲ್‌ಗಳಂತಹ ಅಗತ್ಯತೆಗಳ ಮೇಲೆ ನಾವು ನಮ್ಮ ಹಣವನ್ನು ಕೇಂದ್ರೀಕರಿಸಬೇಕಾಗಿದೆ ಎಂದು ಶರಣ್ಯ ಹೇಳುತ್ತಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಕಾಶ್ಮೀರ ; ಪುಲ್ವಾಮಾ ಎನ್ಕೌಂಟರಿನಲ್ಲಿ ಮೂವರು ಭಯೋತ್ಪಾದಕರ ಹತ್ಯೆ ; ಒಬ್ಬನ ಕೊನೆಯ ಕ್ಷಣ ಡ್ರೋನ್ ನಲ್ಲಿ ಸೆರೆ

ಸಂಭಾವ್ಯ ನಿರುದ್ಯೋಗವನ್ನು ಎದುರಿಸುತ್ತಿರುವ ಕಾರಣ ಈಗ ತನ್ನ ಜೀವನವು “ಅತ್ಯಂತ ಅನಿಶ್ಚಿತವಾಗಿದೆ” ಎಂದು ವಿದ್ಯಾರ್ಥಿನಿ ಹೇಳಿದ್ದಾರೆ. “ನಾನು ಅಧ್ಯಯನ ಮಾಡುವಾಗ ನನ್ನ ಜೀವನದಲ್ಲಿ ಹೀಗೆಯೇ ಸಂಪಾದಿಸುತ್ತೇನೆ ಅಂದುಕೊಂಡಿದ್ದೆ, ಆದರೆ ನಾನು ಕಡಿಮೆ ಕೆಲಸವನ್ನು ಪಡೆಯಲು ಪ್ರಾರಂಭಿಸಿದಾಗ ನಾನು ಆತಂಕಕ್ಕೊಳಗಾಗಿದ್ದೇನೆ, ಕಳೆದ ಎರಡು ತಿಂಗಳುಗಳು ನನಗೆ ಉತ್ತಮವಾಗಿಲ್ಲ ಎಂದು ಅವರು ಹೇಳಿದರು.
ಇದಲ್ಲದೆ, ನ್ಯೂಯಾರ್ಕ್‌ ಪೋಸ್ಟ್‌ನ ಪ್ರಕಾರ, ಶರಣ್ಯ ಭಟ್ಟಾಚಾರ್ಯ ಅವರು ಮಾನವ-ಉತ್ಪಾದಿತ ಮತ್ತು AI-ಉತ್ಪಾದಿತ ವಿಷಯಗಳ ನಡುವಿನ “ದೊಡ್ಡ ವ್ಯತ್ಯಾಸವನ್ನು” ಎತ್ತಿ ತೋರಿಸಿದ್ದಾರೆ ಮತ್ತು ಸಾಮೂಹಿಕ ಉದ್ಯೋಗ ಕಡಿತದಿಂದ ಯಾರು ಪ್ರಭಾವಿತರಾಗಿದ್ದಾರೆ ಎಂಬುದನ್ನು ಪರಿಗಣಿಸಬೇಕು ಎಂದು ಕಂಪನಿಗಳನ್ನು ಕೇಳಿಕೊಂಡಿದ್ದಾರೆ.
ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಸಾಕಷ್ಟು ಉತ್ತಮ ಕಾಪಿರೈಟರ್‌ಗಳು ಇದರಿಂದ ಪ್ರಭಾವಿತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement