‘ಮದುವೆಗೆ ಲೇಟಾಯ್ತು, ನಾನೇ ಮದ್ಮಗ ಬಿಟ್ಬಿಡಿ ಸಾರ್’ ಎಂದು ಪೊಲೀಸರೆದುರು ಅಂಗಲಾಚಿದ ಬೈಕ್‌ ಸವಾರ..!

ಬೆಂಗಳೂರು: ನಾನೆ ಮಧುಮಗ ಮೂಹೂರ್ತಕ್ಕೆ ಲೇಟಾಯ್ತು ಬಿಟ್ಟು ಬಿಡಿ ಸಾರ್ ಎಂದು ಮದುವೆ ಗಂಡು ಪೊಲೀಸರ ಬಳಿ ಕಳಕಳಿಯಿಂದ ಬೇಡಿಕೊಂಡ ಪ್ರಸಂಗ ನಗರದ ಮಾಗಡಿ ರಸ್ತೆಯಲ್ಲಿ ಭಾನುವಾರ ನಡೆದಿದೆ.
ಕೊರೊನಾ ನಿಯಂತ್ರಣಕ್ಕಾಗಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆ ಎಲ್ಲಾ ಸೇವೆಗಳನ್ನು ಬಂದ್ ಮಾಡಿ ನಗರದಾದ್ಯಂತ ಬೀಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ಬೈಕ್‍ನಲ್ಲಿ ಬಂದ ವ್ಯಕ್ತಿಯನ್ನು ತಡೆದ ಪೊಲೀಸರು ಪರಿಶೀಲನೆ ನಡೆಸಲು ಆರಂಭಿಸಿದರು. ಅಲ್ಲದೆ, ಇವತ್ತು ವೀಕೆಂಡ್‌ ಕರ್ಫ್ಯೂ ಇದೆ, ಅನಗತ್ಯವಾಗಿ ಓಡಾಡಬಾರದು ಎಂದು ಗೊತ್ತಿಲ್ಲವೆ ಎಂದು ಕಾರಣ ಕೇಳಿದಾಗ ಇಲ್ಲಾ ಸಾರ್ ನಾನು ಮದುವೆ ಗಂಡು ಇಂದು ನನ್ನ ಮದುವೆ ಇದೆ ಮುಹೂರ್ತಕ್ಕೆ ತಡವಾಗ್ತಾ ಇದೆ, ನನ್ನನ್ನು ಬಿಟ್ಟು ಬಿಡಿ… ಸರಳವಾಗಿ ದೇವಾಲಯದಲ್ಲಿ ಮದುವೆ ಆಗುತ್ತಿದ್ದೇನೆ ಎಂದು ಮದುಮಗ ಕಳಕಳಿಯಾಗಿ ಬೇಡಿಕೊಂಡಿದ್ದಾನೆ.
ಆದರೂ ಪೊಲೀಸರಿಗೆ ನಂಬಿಕೆ ಬರಲಿಲ್ಲ. ನೀನೇ ಮದುವೆ ಗಂಡು ಎನ್ನುವುದಕ್ಕೆ ಸಾಕ್ಷಿ ಏನು? ಮದುವೆ ಕಾರ್ಡ್ ತೋರಿಸು ಎಂದು ದಬಾಯಿಸಿದ್ದಾರೆ. ಕೊನೆಗೆ ಮದುವೆ ಕಾರ್ಡ್ ತೋರಿಸಿ ನಾನೆ ಮದುವೆ ಗಂಡು ಎಂದು ಹೇಳಿ ಮನವರಿಕೆ ಮಾಡಿದಾಗ ಪೊಲೀಸರು ಸುಮ್ಮನಾಗಿದ್ದಾರೆ.
ಮದುವೆ ಇಟ್ಟುಕೊಂಡು ಬೈಕ್‍ನಲ್ಲಿ ಹೊರಡುವುದಕ್ಕೆ ಪೊಲೀಸರು ಕಾರಣ ಕೇಳಿದ್ದಾರೆ. ಆಗ ಮದುಮಗ ಏನ್ ಮಾಡೋದು ಸಾರ್ ಎಲ್ಲವೂ ಚೆನ್ನಾಗಿದ್ದರೆ ಬಂಧು-ಬಳಗ, ಸ್ನೇಹಿತರು, ಗುರು-ಹಿರಿಯರ ಆಶೀರ್ವಾದದಲ್ಲಿ ಮದುವೆ ಮಾಡಿಕೊಳ್ಳಬಹುದಿತ್ತು.ಆದರೆ ಎಲ್ಲಾ ಸಂಭ್ರಮವನ್ನು ಕೊರೊನಾ ಕಿತ್ತುಕೊಂಡಿದೆ ಎಂದು ಮಧುಮಗ ಬೇಸರದಿಂದ ಹೇಳಿದ್ದಾನೆ. ಕೊನೆಗೆ ಪೊಲೀಸರು ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಶುಭಕೋರಿ ಕಳುಹಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊಗಳು | ಶಿವಮೊಗ್ಗ ದಸರಾ ಜಂಬೂ ಸವಾರಿ ವೇಳೆ ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತ ಆನೆ ; ಬೆಳ್ಳಿ ಅಂಬಾರಿ ಕೆಳಕ್ಕೆ, ವಾಹನ ಜಖಂ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement